ವಾಷಿಂಗ್ಟನ್:ಲಿವ್​ ಇನ್​ ಸಂಬಂಧಕ್ಕೆ ಕಾನೂನುಬದ್ಧ ಅನುಮತಿಯನ್ನೇನೋ ನೀಡಲಾಗಿದೆ. ಹಾಗೆಂದು ಇಲ್ಲೊಬ್ಬ ಪ್ರಿಯಕರ ಸ್ನೇಹಿತೆಗೆ ತಿಳಿಸದೇ ಮಹಾಪಾಪ ಮಾಡಿದ್ದಾನೆ. ಅದೇನೆಂದರೆ ಸುರಕ್ಷಿತ ಸೆಕ್ಸ್​ಗಾಗಿ ಕಾಂಡೋಮ್​ ಧರಿಸುವುದಾಗಿ ಆಕೆಗೆ ಹೇಳಿದ್ದ ಈ ಪ್ರಿಯಕರ ಕಾಂಡೋಮ್​ಗೆ ರಂಧ್ರ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ.
ಇದು ತಿಳಿಯುತ್ತಲೇ ಪ್ರೇಯಸಿ ಪ್ರಿಯಕರನ ವಿರುದ್ಧ ಅತ್ಯಾಚಾರದ ಕೇಸ್​ ಹಾಕಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾಳೆ. ಈ ರೀತಿ ಗೆಳತಿಯ ಗಮನಕ್ಕೆ ಬಾರದೇ ಮಾಡಿರುವ ದೈಹಿಕ ಸಂಪರ್ಕ ಅತ್ಯಾಚಾರಕ್ಕೆ ಸಮ ಎಂದು ಅಮೆರಿಕದ ಕೋರ್ಟ್​ ಕೂಡ ಶಿಕ್ಷೆ ವಿಧಿಸಿದೆ.
ಅಂದಹಾಗೆ ಇಂಥದ್ದೊಂದು “ದುಷ್ಕೃತ್ಯ” ಮಾಡಿದವನ ಹೆಸರು ಆಂಡ್ರ್ಯೂ ಲೇವಿಸ್​ ಎಂಬ 47 ವರ್ಷದ ವ್ಯಕ್ತಿ. ಈತನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರೇಯಸಿ, ಅದಕ್ಕೆ ಆತನಿಗೆ ಅನುಮತಿ ನೀಡಿದ್ದಳು. ಆದರೆ ಕಾಂಡೋಮ್​ ಕಡ್ಡಾಯವಾಗಿ ಬಳಸಲೇಬೇಕು ಎಂದಿದ್ದರು.
ಇದನ್ನೂ ಓದಿ:10 ತಿಂಗಳು ಪಾಕ್​ ಕೈಗೆ ಸಿಕ್ಕು​ ಪೇಚಾಡಿದ್ದ ಮಹಿಳೆ ಕೊನೆಗೂ ಭಾರತ ಸೇರಿದ್ರು!
ಅದಕ್ಕೆ ಒಪ್ಪಿದ್ದ ಆಂಡ್ರ್ಯೂ ರಂಧ್ರ ಮಾಡಿದ್ದ. ಕೆಲ ದಿನ ಹೀಗೆಯೇ ನಡೆದಿತ್ತು. ಕೊನೆಗೊಂದು ದಿನ ಸ್ನೇಹಿತೆಗೆ ಈ ವಿಷಯ ತಿಳಿದಿದೆ. ಆತನ ಜತೆ ಜಗಳಕ್ಕಿಳಿದಿದ್ದಾಳೆ. ಆತ ಏನೇನೋ ಸಮಜಾಯಿಷಿ ಕೊಟ್ಟರೂ, ಕೇಳದ ಆಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ನಂತರ ಕೇಸು ಕೋರ್ಟ್​ ಮೆಟ್ಟಿಲೇರಿದೆ. ಲೇವಿಸ್ ತನ್ನೊಂದಿಗೆ ಹೇಯವಾಗಿ ನಡೆದುಕೊಂಡಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿತು. ವ್ಯಕ್ತಿ ಮಹಿಳೆಯ ನಂಬಿಕೆಯನ್ನ ಹುಸಿ ಮಾಡಿದ್ದಾನೆ. ಇದೊಂದು ಹೇಯ ಕೃತ್ಯ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ.
ಲೇವಿಸ್​ಗೆ ಪ್ರೇಯಸಿಯನ್ನು ಗರ್ಭಿಣಿ ಮಾಡುವ ಉದ್ದೇಶವಿರಲಿಲ್ಲ. ಗರ್ಭ ಧರಿಸೋ ವಿಷಯದಲ್ಲಿ ಮಹಿಳೆ ಸಂಪೂರ್ಣ ಸ್ವತಂತ್ರಳು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಕೆಗೆ ಹಕ್ಕಿದೆ. ಸೆಕ್ಸ್ ವೇಳೆ ಸ್ವಾಭಾವಿಕವಾಗಿಯೇ ಕಾಂಡೋಮ್ ಹರಿದಿರಬಹುದು ಎಂದು ಆಂಡ್ರ್ಯೂ ಪರ ವಕೀಲರು ವಾದಿಸಿದರು.
ಇದೊಂದು ಚಿಕ್ಕ ಪ್ರಕರಣವಾದ್ರೂ ಮಹಿಳೆಯ ಹಕ್ಕಿನ ವಿಚಾರವಾಗಿದೆ ಎಂದು ಮಹಿಳೆ ಪರ ವಕೀಲರು ವಾದಿಸಿದರು. ಕೋರ್ಟ್​ ಕೂಡ ಇದು ಇದು ಅತ್ಯಾಚಾರಕ್ಕೆ ಸಮ ಎಂದು ಹೇಳಿ ಆಂಡ್ರ್ಯೂಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ನಿವಾರ್​ಗೆ ನಲುಗಿದ ತಮಿಳುನಾಡು- ವಿಮಾನ, ರೈಲುಗಳು ರದ್ದು: ಚಂಡಮಾರುತದ ದೃಶ್ಯ ಇಲ್ಲಿವೆ ನೋಡಿ..

ಪಾಕ್​ನಲ್ಲಿ ಇನ್ಮುಂದೆ ರೇಪ್​ ಹೆಸ್ರು ಕೇಳಿದ್ರೆ ಬೆಚ್ಚಿಬೀಳಲಿದ್ದಾರೆ ಕಾಮುಕರು- ಇದೆಂಥ ಶಿಕ್ಷೆ ಗೊತ್ತಾ?

ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದು ನಿಜ ಎಂದು ಬಾಯ್ಬಿಟ್ಟ ಉಗ್ರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × five =
Remember me
