ಹೈದರಾಬಾದ್:ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದ ಹೈದರಾಬಾದ್​ ಯುವಕನೊಬ್ಬ, ತನ್ನ ಪ್ರೇಯಸಿ ತನಗೆ ಕೈಕೊಟ್ಟ ಕಾರಣದಿಂದ ಆತ್ಮಹತ್ಯೆ ಮಾಡಿರುವ ಘಟನೆ ಕೆನಡಾದಲ್ಲಿ ನಡೆದಿದೆ.
ಯುವತಿಗಾಗಿ ಪ್ರಾಣಕೊಟ್ಟವನು ಹಬ್ಸಿಗುದಾ ನಿವಾಸಿ ಪ್ರಣಯ್. ಕೆನಡಾದಲ್ಲಿ ಉದ್ಯೋಗ ಮಾಡುತ್ತಿದ್ದ ಪ್ರಣಯ್​ಗೆ ಅಲ್ಲಿಯೇ ಅಖಿಲಾ ಎಂಬ ಯುವತಿಯ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿ ವರ್ಷಗಳಿಂದ ಇಬ್ಬರೂ ಒಂದೇ ಮನೆಯಲ್ಲಿ ಲಿವ್​ ಇನ್​ನಲ್ಲಿ ಇದ್ದಾರೆ.
ಇಬ್ಬರೂ ಮದೆಯಾಗುವ ಯೋಜನೆ ರೂಪಿಸಿಕೊಂಡಿದ್ದಾರೆ. ಹಾಗೆಯೇ ಶಾಪಿಂಗ್​ ಕೂಡ ಮಾಡಿದ್ದಾರೆ… ಎಲ್ಲವೂ ಸರಿಯಾಗಿಯೇ ಇದ್ದರೆ ಈ ಜೋಡಿ ಇದೀಗ ವಿವಾಹ ಬಂಧನಕ್ಕೆ ಒಳಗಾಗಿ ದಂಪತಿಯಾಗಬೇಕಿತ್ತು.
ಆದರೆ ಹಾಗಾಗಲಿಲ್ಲ. ಯುವಕ ಪ್ರಣಯ್​ ಆತ್ಮಹತ್ಯೆಗೆ ಶರಣಾಗಿದ್ದಾನೆ. ಏಕೆಂದರೆ ಅಖಿಲಾ ಇವನಿಗೆ ಕೈಕೊಟ್ಟು ಹೋಗಿದ್ದಾಳೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಮದುವೆಯಾಗಿ ಶಾಪಿಂಗ್​ ಮಾಡುವವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಈ ನಡುವೆಯೇ ಅಖಿಲಾಗೆ ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಎಚ್​1 ವೀಸಾ ಸಿಕ್ಕಿಬಿಟ್ಟಿದೆ. ಆದ್ದರಿಂದ ಇಷ್ಟು ವರ್ಷ ತನ್ನ ಜತೆ ಒಂದೇ ಮನೆಯಲ್ಲಿ ಎಲ್ಲವನ್ನೂ ಹಂಚಿಕೊಂಡಿದ್ದ ಅಖಿಲಾಗೆ ಪ್ರಣಯ್​ ಬೇಡವಾದ. ಅದೇ ಕಾರಣಕ್ಕೆ ಆಕೆ ಈತನನ್ನು ಅವಾಯ್ಡ್​ ಮಾಡಲು ಶುರು ಮಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಇವನನ್ನು ಬ್ಲಾಕ್​ ಮಾಡಿಬಿಟ್ಟಿದ್ದಾಳೆ.
ಇದನ್ನೂ ಓದಿ:​ಫೋನ್​ಗೆ ಅಡಿಕ್ಟ್​ ಆಗಿರೋ ಮಕ್ಕಳಿಗೆ ಬೈತೀರಾ? ನಾಲ್ವರು ಕಾಣೆಯಾದ​ ಬಾಲಕಿಯರ ಸ್ಟೋರಿ ಓದಿ…
ಇದರಿಂದ ನೊಂದು ಬೆಂದು ಹೋದ ಪ್ರಣಯ್​ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‘ಅಖಿಲಾಗೆ ಎಚ್​ 1 ವೀಸಾ ಸಿಕ್ಕ ಕೂಡಲೇ ನನ್ನನ್ನು ಬ್ಲಾಕ್ ಮಾಡಿದಳು. ನನ್ನ ಜತೆ ಮಾತನಾಡೋದನ್ನು ಸಹ ನಿಲ್ಲಿಸಿದಳು. ನಾನೇನೂ ತಪ್ಪು ಮಾಡಿರಲಿಲ್ಲ, ಆದ್ರೂ ಬ್ರೇಕಪ್ ಮಾಡಿಕೊಂಡಳು. ನಾನು ಬದುಕಿದ್ದು ಪ್ರಯೋಜನವಿಲ್ಲ’… ಎಂದು ಪ್ರಣಯ್ ಡೆತ್‍ನೋಟ್​ನಲ್ಲಿ ಬರೆದಿದ್ದಾನೆ.
ಆಕೆಯನ್ನು ಕಂಡು ಪ್ರಣಯ್​ ಮಾತನಾಡಿದಾಗ ಅದು ಅವಳಿಗೆ ಕಿರಿಕಿರಿ ಎನಿಸತೊಡಗಿದೆ. ಇದನ್ನು ಡೆತ್​ನೋಟ್​ನಲ್ಲಿ ಬರೆದಿರುವ ಆತ, ‘ಕಷ್ಟಪಟ್ಟು ಆಕೆಯನ್ನು ಮರೆಯಲು ಪ್ರಯತ್ನ ಮಾಡಿದ್ದೆ. ಆದರೆ ನನ್ನ ಪಾಲಕರಿಗೆ ಕಿರುಕುಳ ನೀಡಲು ತೊಡಗಿದಳು. ನನ್ನ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾಳೆ. ಇದನ್ನೆಲ್ಲಾ ನಾನು ಸಹಿಸಲು ಆಗುತ್ತಿಲ್ಲ. ಸಾವೊಂದೇ ನನಗಿರುವ ದಾರಿ’ ಎಂದಿದ್ದಾನೆ.
ಮಗನ ಸಾವಿನ ಸುದ್ದಿ ತಿಳಿಯುತ್ತಲೇ ಪಾಲಕರ ರೋದನ ಮುಗಿಲುಮುಟ್ಟಿದೆ. ಅಖಿಲಾಳ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ.
10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…

ಕರೊನಾ ಕಣಗಳು ಪತ್ತೆ – ಚೀನಾದಲ್ಲಿ ಮಾಂಸಗಳ ಆಮದು ಬ್ಯಾನ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − sixteen =
Remember me
