ನವದೆಹಲಿ:ಹೋಟೆಲ್‌ಗಳಲ್ಲಿ ಹಲ್ಲಿ, ಜಿರಳೆ, ಹುಳಗಳು ಸಿಕ್ಕು ಗಲಾಟೆಗಳಾಗುವುದು ಸಹಜ. ಚೀನಾ ಹೊರತುಪಡಿಸಿ ಬಹುಶಃ ಉಳಿದ ಯಾವುದೇ ದೇಶಗಳಲ್ಲಿ ಇವುಗಳನ್ನು ಊಟದ ಪ್ಲೇಟ್‌ನಲ್ಲಿ ಕಂಡರೆ ವಾಂತಿ ಬರಿಸುವುದಂತೂ ನಿಜ.ಆದರೆ ಅರ್ಧ ಊಟ ಮಾಡಿದ ಬಳಿಕ, ಹಲ್ಲಿಯ ಅರ್ಧ ದೇಹ ಊಟದ ಪ್ಲೇಟ್‌ನಲ್ಲಿ ಕಂಡರೆ ಹೇಗಿರುತ್ತೆ? ನೆನೆಸಿಕೊಂಡರೆ ಮೈ ಝುಂ ಎನ್ನುತ್ತದೆಯಲ್ಲವೆ?ಆದರೆ ದೆಹಲಿಯ ರೆಸ್ಟೋರೆಂಟ್‌ ಒಂದಕ್ಕೆ ಹೋಗಿದ್ದ ಪಂಕಜ್‌ ಅಗರ್‌ವಾಲ್‌ ಎನ್ನುವವರಿಗೆ ಇದೇ ರೀತಿ ಆಗಿದ್ದು, ಹೋಟೆಲ್‌ ವಿರುದ್ಧ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಧ್ಯ ದೆಹಲಿಯ ಕೊನಾಟ್ ಪ್ಲೇಸ್‌ನ ಪ್ರಸಿದ್ಧ ರೆಸ್ಟೋರೆಂಟ್‌ ಒಂದಕ್ಕೆ ಸ್ನೇಹಿತರ ಗುಂಪು ಅಲ್ಲಿಯ ಪ್ರಸಿದ್ಧ ಸಾಂಬಾರ್-ದೋಸೆಗೆ ಆರ್ಡರ್‌ ಮಾಡಿದೆ. ಐಷಾರಾಮಿ ಹೋಟೆಲ್‌ಗಳು, ಉನ್ನತ ಮಟ್ಟದ ತಿನಿಸುಗಳು ಮತ್ತು ಶಾಪಿಂಗ್ ಸಂಕೀರ್ಣಗಳಿಗೆ ಹೆಸರುವಾಸಿಯಾದ ಕಟ್ಟಡದಲ್ಲಿರುವ ಐಷಾರಾಮಿ ಹೋಟೆಲ್‌ ಇದು.
ಇದನ್ನೂ ಓದಿ:ಆದಾಯ ತೆರಿಗೆ ಇಲಾಖೆಗೆ ಇನ್ನು ಭೇಟಿಕೊಡಬೇಕಾಗಿಲ್ಲ…ದೋಸೆ-ಸಾಂಬಾರ್‌ ತಿಂದ ಮೇಲೆ ಸಾಂಬಾರ್‌ ಬೌಲ್‌ನಲ್ಲಿ ಹಲ್ಲಿಯ ಅರ್ಧ ದೇಹ ಕಂಡು ಹೌಹಾರಿ ಹೋಗಿದ್ದಾರೆ. ಪಂಕಜ್‌ ಅವರ ಸಾಂಬಾರ್‌ನಲ್ಲಿ ಇದು ಕಾಣಿಸಿಕೊಂಡಿದೆ. ಹೋಟೆಲ್‌ ಸಿಬ್ಬಂದಿಯನ್ನು ಕರೆದು ಅದನ್ನು ತೋರಿಸಿದಾಗ ಅವರು ಸಾರಿ ಕೇಳಿದ್ದಾರೆ. ಆದರೆ ಸಾರಿ ಕೇಳಿಬಿಟ್ಟರೆ ಮುಗಿಯಿತೆ? ಇನ್ನರ್ಧ ದೇಹ ಎಲ್ಲಿ ಹೋಗಿದೆ ಎನ್ನುವುದು ಈ ಸ್ನೇಹಿತರನ್ನು ಇನ್ನಿಲ್ಲದಂತೆ ಕಾಡಿದೆ. ಅರ್ಧ ತಿಂಡಿ ತಿಂದಾಗಿದೆ. ಇನ್ನರ್ಧ ದೇಹವನ್ನು ತಾವು ತಿಂದಿದ್ದೇವೆಯೇ ಅಥವಾ ಅದು ಬೇರೆಲ್ಲೋ ಹೋಗಿದೆಯೇ ಎಂಬುದನ್ನು ಅರಿಯದೇ ಎಲ್ಲರೂ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ.ಪೊಲೀಸರಿಗೆ ಈ ಹೋಟೆಲ್‌ ವಿರುದ್ಧ ದೂರು ನೀಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಸ್ನೇಹಿತರು ಹಂಚಿಕೊಂಡಿದ್ದಾರೆ. ಇನ್ನರ್ಧ ಹಲ್ಲಿ ಎಲ್ಲಿ ಹೋಯಿತು ಎಂದು ಹೋಟೆಲ್‌ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿದ್ದಾರೆ! ಹೋಟೆಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
‘ಬೀಜ ಭಯೋತ್ಪಾದನೆ’ಯಿಂದ ಭಾರತದಲ್ಲಿ ಆತಂಕ ಸೃಷ್ಟಿಸಲಿದೆಯೇ ಚೀನಾ?

ರೋಗವೂ ಇಲ್ಲ, ಲಕ್ಷಣವೂ ಇಲ್ಲ, ಆದರೂ ಐಸಿಯುಗಳಲ್ಲಿ ಲಕ್ಷ ಲಕ್ಷ ಕೊಟ್ಟು ಬೆಡ್‌ ಬುಕಿಂಗ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + six =
Remember me
