ಲಂಡನ್:ಅಶ್ಲೀಲ ಎಂಬುದು ನೋಡುಗರ ಕಣ್ಣಲ್ಲಿ ಇರುತ್ತದೆಯೇ ವಿನಾ ಮಾನವ ದೇಹದಲ್ಲಿ ಅಲ್ಲ ಎನ್ನುವ ಮಾತಿದೆ. ಹಾಗೆಂದು ಅರೆನಗ್ನವಾಗಿ ಅಥವಾ ಸಂಪೂರ್ಣ ನಗ್ನವಾಗಿ ಯಾರಾದರೂ ಇದ್ದರೆ ಅದರ ಬಗ್ಗೆ ಟೀಕೆ ಮಾಡದವರು ಬೆರಳೆಣಿಕೆ ಮಂದಿ ಎನ್ನುವುದೂ ಅಷ್ಟೇ ಸತ್ಯ.
ಅದೇನೇ ಇರಲಿ. ಇದೀಗ ಲಂಡನ್​ನ ಕೆರ್ರಿ ಬಾರ್ನ್ಸ್ ಎಂಬ ಸುಂದರ ಯುವತಿ ಮಾತ್ರ ಇದೀಗ ಭಾರಿ ಸುದ್ದಿಯಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾಳೆ. ಇದಕ್ಕೆ ಕಾರಣ ಸಂಪೂರ್ಣ ಲಗ್ನವಾಗಿ ಅವರು ಸೈಕಲ್​ ಮೇಲೆ ಕುಳಿತು ಲಂಡನ್​ ಬೀದಿ ಬೀದಿ ಸುತ್ತಿರುವುದು.
ಇದು ಕೇಳಲು, ನೋಡಲು ಅಸಭ್ಯ ಎನಿಸಿದರೂ ತಾನು ಈ ರೀತಿ ಮಾಡುವ ಹಿಂದೆ ಸದುದ್ದೇಶ ಇದೆ ಎಂದು ಕೆರ್ರಿ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಈಕೆ ಹೇಳಿರುವ ಕಾರಣ ಎಂದರೆ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ನಾನು ಈ ರೀತಿ ಮಾಡಿದ್ದೇನೆ ಎಂದಿದ್ದಾಳೆ.ವೋಕಿಂಗ್​ಹ್ಯಾಮ್​ನ ನಿವಾಸಿಯಾಗಿರುವ ಈ ಯುವತಿ ಸೇಂಟ್ ಕ್ರಿಸ್ಪಿನ್ಸ್ ಶಾಲೆಯ ಮಾಜಿ ನಾಯಕಿ ಕೂಡ. ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈಕೆ ಈ ರೀತಿ ನಗ್ನವಾಗಿ ಓಡಾಡಿರುವ ಹಿಂದೆಯೂ ಚಾರಿಟಿ ಉದ್ದೇಶವೇ ಇದೆಯಂತೆ.

ಇದಕ್ಕೆ ಪೂರಕ ಎಂಬಂತೆ ಲಂಡನ್ ಬೀದಿಬೀದಿಗಳಲ್ಲಿ ಸುತ್ತಿರುವ ಈಕೆ ಸೈಕ್ಲಿಂಗ್ ಮಾಡುವ ಮೂಲಕ ಚಾರಿಟಿಗಾಗಿ ಸಾವಿರಾರು ರೂಪಾಯಿಗಳನ್ನು ಸಂಗ್ರಹಿಸಿದ್ದಾಳೆ. ಅಪರಿಚಿತರಿಂದ ಕೆಟ್ಟ ದೃಷ್ಟಿ, ಶೀತ, ಚಳಿಯನ್ನು ಎದುರಿಸುತ್ತಲೇ ಸೈಕ್ಲಿಂಗ್​ ಮಾಡಿರುವ ಕೆರ್ರಿ, ಇದು ನೋಡುಗರಿಗೆ ಅಶ್ಲೀಲ ಎನಿಸಿದರೂ ನನಗೆ ಕ್ಯಾರ್​ ಇಲ್ಲ. ನನ್ನ ಉದ್ದೇಶ ಒಳ್ಳೆಯದಿದೆ ಎಂದಿದ್ದಾಳೆ.
ಬೆತ್ತಲೆಯಾಗಿ ಓಡಾಡಿದ್ದು ತಪ್ಪೋ.. ಸರಿಯೋ… ಎಂದು ನಿರ್ಧರಿಸುವುದು ಅವರವರಿಗೆ ಬಿಟ್ಟ ವಿಷಯ. ಆದರೆ ಈಕೆಯ ಉದ್ದೇಶಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕೆರ್ರಿ ಹೇಳಿರುವುದು ಏನೆಂದರೆ- ಲಾಕ್‌ಡೌನ್‌ನ ಒತ್ತಡದಿಂದಾಗಿ, ನನ್ನ ಪ್ರೀತಿಪಾತ್ರರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ನಾನು ಲಾಕ್​ಡೌನ್​ ಹಿನ್ನೆಲೆಯಲ್ಲಿ ಬೇರೆ ಕಡೆ ಇದ್ದುದರಿಂದ ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಮಾನಸಿಕವಾಗಿ ಧೈರ್ಯ ತುಂಬುವುದೂ ನನ್ನಿಂದ ಆಗಲಿಲ್ಲ. ಇದಕ್ಕಾಗಿ ನಾನು ಈಗಲೂ ಪಶ್ಚಾತ್ತಾಪ ಪಡುತ್ತಿದ್ದೇನೆ.
ಆದ್ದರಿಂದಲೇ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿತ್ತು. ಈ ಸೈಕ್ಲಿಂಗ್​ ಸಮಯದಲ್ಲಿ ನಾನು ಜನರೊಂದಿಗೆ ಹೆಚ್ಚು ಮಾತನಾಡಿದ್ದೇನೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಎಷ್ಟು ವ್ಯಾಪಕವಾಗಿವೆ ಎಂದು ನಾನು ಅರಿತುಕೊಂಡೆ, ಮಾನಸಿಕವಾಗಿ ಧೈರ್ಯಗುಂದಿದವರಿಗೆ ಸಾಂತ್ವನ ಮಾಡಿದ್ದೇನೆ ಎಂದಿದ್ದಾಳೆ.
ಕೆಲಸ ಕಳೆದುಕೊಂಡು ಕಂಗಾಲಾಗಿರುವವರಿಗೆ ಸಾಧ್ಯವಾದಷ್ಟು ನೆರವು ನೀಡುವುದು ನನ್ನ ಉದ್ದೇಶ. ಈ ಸೈಕ್ಲಿಂಗ್​ ಮೂಲಕ ಒಂದು ಸಾವಿರ ಪೌಂಡ್​ (ಸುಮಾರು 99 ಸಾವಿರ ರೂಪಾಯಿಗಳು) ಸಂಗ್ರಹಿಸುವುದು ನನ್ನ ಗುರಿಯಾಗಿತ್ತು. ಆದರೆ ಅಚ್ಚರಿ ಎಂದರೆ ನಾನು 7 ಸಾವಿರ ಪೌಂಡ್​ (ಸುಮಾರು 3.97 ಲಕ್ಷ ರೂಪಾಯಿ) ಗಳಿಸಿದ್ದೇನೆ ಎಂದಿದ್ದಾಳೆ. ಇದನ್ನು ಬಟ್ಟೆ ಧರಿಸಿಯೂ ಮಾಡಬಹುದಿತ್ತಲ್ಲ ಎನ್ನಬಹುದು. ಅದಕ್ಕೆ ಸದ್ಯ ಉತ್ತರವಿಲ್ಲ! ಆದರೆ ಸಾಮಾಜಿಕ ಜಾಲತಾಣದಲ್ಲಂತೂ ಭಾರೀ ಪ್ರಶಂಸೆ ಗಿಟ್ಟಿಸಿದ್ದಾಳೆ ಕೆರ್ರಿ.
ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

ಮದುವೆ ದಿಬ್ಬಣದ ಟ್ರ್ಯಾಕ್ಟರ್​ ಪಲ್ಟಿ: ಮದುಮಗ, ಅಪ್ಪ-ಅಮ್ಮ ಸೇರಿ 6 ಸಾವು

ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
