ದುಬೈ:ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಟರಿ ನಿಷೇಧಿಸಲಾಗಿದೆ. ಆದರೆ ಹಲವು ರಾಜ್ಯಗಳು ಮಾತ್ರವಲ್ಲದೇ ವಿದೇಶಗಳಲ್ಲಿಯೂ ಲಾಟರಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಅದೃಷ್ಟವಿದ್ದರೆ ಮಾಲಾಮಾಲ್‌ ಆಗುವವರು, ಇಲ್ಲದಿದ್ದರೆ ಬೀದಿಗೆ ಬದುವರು.
ಒಟ್ಟಿನಲ್ಲಿ ಕೇರಳದ ಯುವತಿಯೊಬ್ಬರಿಗೆ ಬಂಪರ್‌ ಬಹುಮಾನ ದುಬೈನಲ್ಲಿ ಸಿಕ್ಕಿದೆ. ಲಾಟರಿ ಟಿಕೆಟ್‌ ಪಡೆದಿದ್ದ ಲೀನಾ ಜಲಾಲ್ 22 ಮಿಲಿಯನ್ ದಿರಂ ಅಂದರೆ ಸರಿಸುಮಾರು 44.75 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ!
ದುಬೈನಲ್ಲಿ ವಾಸಿಸತ್ತಿರುವ ಕೇರಳದ ಲೀನಾ ಜಲಾಲ್ ಅಬುದಾಬಿಯ ಬುಗ್ ಟಿಕೆಟ್‌ನ ಪ್ರತಿವಾರ ಡ್ರಾ ಮಾಡಲಾಗುವ ಟಿಕೆಟ್‌ನಲ್ಲಿ ಹಣ ಗೆದ್ದಿದ್ದಾರೆ. ಇವರು ಅಬುದಾಬಿಯಲ್ಲಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ಬಂದಿರುವ ಹಣದಲ್ಲಿ ಹಲವು ಭಾಗವನ್ನು ಸಾಮಾಜಿಕ ಸೇವೆಗಾಗಿ ಮೀಸಲು ಇಡುವುದಾಗಿ ಲೀನಾ ಸ್ಥಳೀಯ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.
‌ಇವರಷ್ಟೇ ಅಲ್ಲದೇ, ಸೂರೈಫ್‌ ಸೂರು ಎಂಬ ಇನ್ನೊಬ್ಬ ಕೇರಳ ಮಲಪ್ಪುರಂನ ವ್ಯಕ್ತಿಗೆ 1 ಮಿಲಿಯನ್ ದಿರಂ ಮೊತ್ತ ಸಿಕ್ಕಿದೆ. ಇವರು ತಾವು ಗಳಿಸಿರುವ ಹಣದಲ್ಲಿ ಸ್ವಲ್ಪ ಹಣವನ್ನು ಪಾಲಕರಿಗೆ ನೀಡುತ್ತೇನೆ. ಉಳಿದಂತೆ ನನ್ನ ಪತ್ನಿ ಹಾಗೂ ಮಗಳ ಭವಿಷ್ಯದ ಭದ್ರತೆಗೆ ಹಣವನ್ನು ಬಳಸುತ್ತೇನೆ ಎಂದಿದ್ದಾರೆ.
ಕಳೆದ ವರ್ಷ ದುಬೈನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಗೆ 40 ಕೋಟಿ ರೂಪಾಯಿ ಲಾಟರಿ ಹೊಡೆದಿತ್ತು.
FACTCHECK: ಲತಾ ಪಾರ್ಥಿವ ಶರೀರದ ಮೇಲೆ ಶಾರುಖ್ ಉಗುಳಿದರಾ? ಸತ್ಯಾಂಶ ಏನು?

‌ಎಲ್ಲಿದ್ದೀರಾ ಕಾಮನ್‌ಮ್ಯಾನ್‌ ಸಿಎಂ ಸಾರ್‌.. ನಿಮ್ಮ ಪಕ್ಷದ ಶಾಸಕನಿಂದ ನನಗೆ ಮಗುವಾಗಿದೆ, ನ್ಯಾಯ ಕೊಡ್ಸಿ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
