ಲೂಸಿಯಾನಾ (ಅಮೆರಿಕ):ತನ್ನ ಪತಿಯ ವೀರ್ಯವನ್ನು ಕೇಕ್‌ನಲ್ಲಿ ಬೆರೆಸಿ ಅದನ್ನು ತನ್ನ ವಿದ್ಯಾರ್ಥಿಗಳಿಗೆ ತಿನ್ನಿಸಿದ್ದೂ ಅಲ್ಲದೇ ಅವರ ಪೋರ್ನ್‌ ವಿಡಿಯೋಗಳನ್ನು ಮಾಡಿ ವಿಕೃತಿ ಮೆರೆದಿದ್ದ ಶಿಕ್ಷಕಿಯೊಬ್ಬಳಿಗೆ 40 ವರ್ಷಗಳ ಶಿಕ್ಷೆಯನ್ನು ವಿಧಿಸಿ ಕೋರ್ಟ್‌ ಆದೇಶಿಸಿದೆ.
ಅಮೆರಿಕದ ಲೂಸಿಯಾನಾದ ವೆಸ್ಟ್ ಸೈಡ್ ಜೂನಿಯರ್ ಹೈಸ್ಕೂಲಿನ ಶಿಕ್ಷಕಿ ಸಿಂಥಿಯಾ ಪಾರ್ಕಿನ್ಸ್ (36) ಎಂಬ ಶಿಕ್ಷಕಿ ಇಂಥದ್ದೊಂದು ಅಸಹ್ಯ ಕೃತ್ಯ ಎಸಗಿದ್ದು, ಇದೀಗ ಅವಳ ವಿಕೃತಿ ಬೆಳಕಿಗೆ ಬಂದಿದೆ.
ಈಕೆ ಮೊದಮೊದಲು ತನ್ನ ವಿದ್ಯಾರ್ಥಿಗಳನ್ನು ಪೋರ್ನ್‌ ವಿಡಿಯೋ ಮಾಡಲು ಬಳಸಿಕೊಳ್ಳುತ್ತಿದ್ದಳು. ನಂತರ ಕೇಕ್‌ ರೆಡಿ ಮಾಡಿ ಮಕ್ಕಳಿಗೆ ತಿನ್ನಿಸುತ್ತಿದ್ದಳು. ಕೇಕ್‌ನಲ್ಲಿ ‘ಸೀಸನಿಂಗ್‌’ ಆಗಿ ಗಂಡನ ವೀರ್ಯವನ್ನು ಬೆರೆಸುತ್ತಿದ್ದಳು ಎಂಬ ಅಸಹ್ಯ ವಿಷಯ ವರ್ಷಗಳ ನಂತರ ಬೆಳಕಿಗೆ ಬಂದಿದೆ.
ಈಕೆಯ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಹಲವಾರು ಪಾಲಕರು ಶಿಕ್ಷಕಿ ವಿರುದ್ಧ ದೂರು ದಾಖಲು ಮಾಡಿದ್ದರು. ನಂತರ ತನಿಖೆಯ ವೇಳೆ ಎಲ್ಲಾ ಆರೋಪಗಳೂ ಸಾಬೀತಾಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ಅಪರಾಧ ಕೇಸು ದಾಖಲಾಗಿದೆ. ಈಕೆ ಸೇರಿದಂತೆ ಇದಕ್ಕೆ ಸಹಕಾರ ನೀಡಿದ್ದ ಈಕೆಯ ಪತಿ ಡೆನ್ನಿಸ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಅಂದರೆ 2019ರಲ್ಲಿ ವಿದ್ಯಾರ್ಥಿನಿಯೊಬ್ಬಳ ಪೋರ್ನ್‌ ವಿಡಿಯೋಗೆ ಸಂಬಂಧಿಸಿದಂತೆ ಈ ಶಿಕ್ಷಕಿಯನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಳು. ಈಕೆಯ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ ಕೇಕ್‌ ವಿಷಯವೂ ಹೊರಕ್ಕೆ ಬಂದಿದೆ. ಕಪ್‌ ಕೇಕ್‌ ತಯಾರಿಸಿ ಅದರಲ್ಲಿ ವೀರ್ಯ ಬೆರೆಸಿ ವಿಕೃತಿ ಮೆರೆದಿರುವುದು ತಿಳಿದಿದೆ.
ಇವಳನ್ನು ಶಿಕ್ಷಕಿ ಹುದ್ದೆಯಿಂದ ವಜಾ ಮಾಡಲಾಗಿದೆ. ಸದ್ಯ ಇವಳ ವಿರುದ್ಧ 90 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ. ಆರೋಪಗಳ ಸಾಬೀರಾದ ಹಿನ್ನೆಲೆಯಲ್ಲಿ 40 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಇಲ್ಲಿಯ ಕೋರ್ಟ್‌ ಆದೇಶಿಸಿದೆ.
VIDEO: ನಗ್ನವಾಗಿ ಮಲಗಿ, ಅಂದ ಹೆಚ್ಚಿಸಿಕೊಳ್ಳಿ ಎಂದ ವಿಶ್ವದ ಹಾಟೆಸ್ಟ್‌ ಅಜ್ಜಿ- ಗುಟ್ಟು ಹೇಳಿದ ನಾಲ್ಕು ಮಕ್ಕಳ ಅಮ್ಮ!

ಪಕ್ಕದ್ಮನೆ ಆಂಟಿ ಜತೆ ಕಾಮದಾಟ: ಪತ್ನಿಯಿಂದಾಗಿ ಕೆಲಸ ಕಳೆದುಕೊಂಡ ಕಾನ್ಸ್‌ಟೆಬಲ್ ನೆರವಿಗೆ ಬಂದ ಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
