ಒಡಿಶಾ:ಜೈಲಿನಲ್ಲಿ ಇರುವ ಕೈದಿಯನ್ನು ಪ್ರೀತಿಸಿ, ಜೈಲು ಅಧಿಕಾರಿಗೆ ಹಣ ನೀಡಿ ಇಬ್ಬರೂ ಏಕಾಂತದಲ್ಲಿ ಇದ್ದು, ದೈಹಿಕ ಸಂಪರ್ಕ ನಡೆಸಿದ ನಂತರ ಮದುವೆಗೆ ಹಿಂದೇಟು ಹಾಕಿರುವ ಘಟನೆಯೊಂದು ಒಡಿಶಾದ ತಿತಿಲಾಘಡ ಜೈಲಿನಲ್ಲಿ ನಡೆದಿದೆ.
ಮದುವೆಯಾಗುವ ಹೆಸರಿನಲ್ಲಿ ದೈಹಿಕ ಸಂಪರ್ಕ ನಡೆಸಿ ನಂತರ ಮೋಸ ಮಾಡುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಆದರೆ ಜೈಲಿನ ಒಳಗೇ ಇಂಥದ್ದೊಂದು ಘಟನೆ ನಡೆದಿರುವುದು ಇದೀಗ ಇಡೀ ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆ ಏಳಿಸುವಂತೆ ಮಾಡಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ ಕೌಟುಂಬಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ತಿತಿಲಾಘಡ್ ಜೈಲಲ್ಲಿ ಈ ಮಹಿಳೆ ಬಂಧಿಯಾಗಿದ್ದಳು. ಅದೇ ಜೈಲಿನಲ್ಲಿ ತೀರ್ಥಂಕರ್​ ಪಟೇಲ್​ ಎಂಬಾತನೂ ಬಂಧಿಯಾಗಿದ್ದ. ಇಬ್ಬರ ನಡುವೆ ಜೈಲಿನೊಳಗೇ ಪ್ರೀತಿ ಹುಟ್ಟಿದೆ. ಈ ನಡುವೆ ತೀರ್ಥಂಕರ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿದ್ದಾನೆ. ಇಬ್ಬರೂ ಹೊರಕ್ಕೆ ಹೋದ ಮೇಲೆ ಮದುವೆಯಾಗುವ ಭರವಸೆ ಕೊಟ್ಟಿದ್ದಾನೆ.
ಇದೇ ಕಾರಣಕ್ಕೆ ಆತನಿಗೆ ತನ್ನ ಸರ್ವಸ್ವವನ್ನೂ ಒಪ್ಪಿಸಲು ಮಹಿಳೆ ಒಪ್ಪಿಕೊಂಡಿದ್ದಾಳೆ. ಆದರೆ ಜೈಲಿನಲ್ಲಿ ಇದಕ್ಕೆಲ್ಲಾ ಅವಕಾಶ ಇರುವುದಿಲ್ಲ ಎನ್ನುವ ಕಾರಣಕ್ಕೆ ಜೈಲಾಧಿಕಾರಿಗೆ ಲಂಚ ಕೊಟ್ಟಿದ್ದಾರೆ. ಆತ ಇವರಿಗೆ ಏನು ಬೇಕೋ ಅಂಥ ಅವಕಾಶ ಕಲ್ಪಿಸಿಕೊಟ್ಟಿದ್ದಾನೆ. ಇದು ನಿರಾತಂಕವಾಗಿ ಹಲವಾರು ದಿನಗಳು ನಡೆದಿವೆ.ಈ ನಡುವೆ ಮಹಿಳೆಗೆ ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರಕ್ಕೆ ಬಂದಿದ್ದಾಳೆ. ತನ್ನ ‘ಭಾವಿ ಪತಿ’ಯನ್ನು ನೋಡಲು ಜೈಲಿಗೆ ಹೋದಾಗ ಆತ ಈಕೆ ಯಾರು ಎಂದು ತಿಳಿದೇ ಇಲ್ಲ ಎನ್ನುವಂತೆ ವರ್ತಿಸಿದ್ದಾನಂತೆ. ನಿನ್ನ ಪರಿಚಯವೇ ಇಲ್ಲ ಎಂದಿದ್ದಾನಂತೆ.
ಇದರಿಂದ ನೊಂದ ಮಹಿಳೆ ಈಗ ಆತನ ವಿರುದ್ಧ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದ ಮಹಿಳೆ ಮಾಧ್ಯಮದ ಮುಂದೆಯೂ ಈ ವಿಷಯ ಹೇಳಿದ್ದಾಳೆ. ನಾನು ಜೈಲಿನಲ್ಲಿದ್ದಾಗ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಖಿನ್ನತೆಯಲ್ಲಿದ್ದ ನನ್ನನ್ನು ಸಂತೈಸುವ ನೆಪದಲ್ಲಿ ಆತ ನನಗೆ ಪರಿಚಿತನಾದ. ಜೈಲಿನ ಅಧಿಕಾರಿಗಳಿಗೆ ಹಣ ನೀಡಿ ಆಗಾಗ ನನ್ನನು ಸಂಧಿಸುತ್ತಿದ್ದ. ಮದುವೆಯಾಗುವುದಾಗಿ ಹೇಳಿ ನನ್ನೊಂದಿಗೆ ಲೈಂಗಿಕ ಕ್ರಿಯೆ ಕೂಡ ನಡೆಸಿದ್ದಾನೆ. ಈಗ ನನ್ನನ್ನು ಯಾರು ಎಂದು ಕೇಳುತ್ತಿದ್ದಾನೆ ಎಂದಿದ್ದಾರೆ.
ಸದ್ಯ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಆ ವ್ಯಕ್ತಿಯ ಜತೆ ಇವರಿಗೆ ಅನುವು ಮಾಡಿಕೊಟ್ಟ ಜೈಲಾಧಿಕಾರಿಯೂ ಈಗ ಪೇಚಿಗೆ ಸಿಲುಕಿದ್ದಾನೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ.
ಏಳು ತಿಂಗಳಲ್ಲಿ ಮೂರು ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ!

ಕುಡಿದ ಅಮಲಲ್ಲಿ ಮರ್ಮಾಂಗವನ್ನೇ ಕಚ್ಚಿ ತುಂಡರಿಸಿದ ಭೂಪ- ಅದನ್ನು ಹಿಡಿದುಕೊಂಡೇ ಆಸ್ಪತ್ರೆಗೆ ದಾಖಲು

ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​

ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಅಷ್ಟು ಒಳ್ಳೆಯವ ನಾನು- ಆದ್ರೆ ಹೆಂಡ್ತಿಗೆ ಕೋಪ… ಪ್ಲೀಸ್​ ಪರಿಹಾರ ಹೇಳಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 18 =
Remember me
