ಭೋಪಾಲ್:ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ದಿಟ್ಟ ನಿರ್ಧಾರ ತೆಗೆದುಕೊಂಡು, ಇಂಥ ಕೃತ್ಯ ಎಸಗುವವರಿಗೆ ನಡುಕ ಹುಟ್ಟಿಸಿರುವ ಉತ್ತರ ಪ್ರದೇಶ ಇನ್ನೂ ಸುದ್ದಿಯಲ್ಲಿ ಇರುವಾಗಲೇ ಇದೀಗ ಮಧ್ಯಪ್ರದೇಶವೂ ಇಂಥದ್ದೇ ಕಾನೂನು ಜಾರಿಗೊಳಿಸಲು ಮುಂದಾಗಿದೆ.
ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ವಿವಾಹದ ಮೂಲಕ ಅಥವಾ ಇನ್ನಾವುದೇ ಮೂಲಗಳಿಂದ ಮೋಸದಿಂದ ಮತಾಂತರ ಮಾಡುವವರಿಗೆ ಗರಿಷ್ಠ 10 ವರ್ಷಗಳ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಹೇಳಿದ್ದಾರೆ.
ವ್ಯಕ್ತಿಯನ್ನು ಮತಾಂತರಗೊಳಿಸುವ ಉದ್ದೇಶದಿಂದ ಮಾತ್ರ ವಿವಾಹವಾದರೆ ಆ ವಿವಾಹವನ್ನು ಶೂನ್ಯವಿವಾಹ ಎಂದು ಘೋಷಿಸಲಾಗುವುದು, ಜತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಯುವತಿಯನ್ನು ಅಪಹರಿಸಿ ಮತಾಂತರಕ್ಕೆ ಯತ್ನ: ಲವ್​ ಜಿಹಾದ್​ ಕಾಯ್ದೆಯಡಿ ಏಳು ಮಂದಿ ಅರೆಸ್ಟ್​
ಒಂದು ವೇಳೆ ಯಾವುದೇ ವ್ಯಕ್ತಿ ಸ್ವ ಇಚ್ಛೆಯಿಂದ ಮತಾಂತರವಾಗಲು ಬಯಸಿದ್ದೇ ಆದಲ್ಲಿ ಆಕೆ ಅಥವಾ ಆತ ಮತಾಂತರ ಪ್ರಕ್ರಿಯೆಗೆ ಚಾಲನೆ ಕೊಡುವ ಒಂದು ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಯ ಮುಂದೆ ಘೋಷಣೆ ಮಾಡಬೇಕಾಗುತ್ತದೆ. ನಂತರ ಇದರ ಸಾಧಕ ಬಾಧಕಗಳನ್ನು ವಿಚಾರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಉದ್ದೇಶಿತ ಕಾನೂನಿನ ಕುರಿತು ಚರ್ಚಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಶನಿವಾರ ಸಭೆ ನಡೆಸಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತಾವಿತ ಕಾನೂನಿನಡಿಯಲ್ಲಿ, ರಾಜ್ಯದ ಯಾವುದೇ ವ್ಯಕ್ತಿಗೆ ಯಾರನ್ನೂ ನೇರವಾಗಿ ಅಥವಾ ಬೇರೆ ರೀತಿಯಲ್ಲಿ ಮದುವೆಯ ಮೂಲಕ ಅಥವಾ ಬೇರೆ ಯಾವುದೇ ಮೋಸದ ಮೂಲಕ ಯಾರನ್ನೂ ಆಮಿಷವೊಡ್ಡುವ ಅಥವಾ ಬೆದರಿಸುವ ಮೂಲಕ ಪರಿವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.
ದಾರಿತಪ್ಪಿಸುವ, ಆಮಿಷವೊಡ್ಡುವ, ಬೆದರಿಕೆ ಹಾಕುವ ಮೂಲಕ ಅಥವಾ ವಿವಾಹದ ಮೂಲಕ ಇನ್ನೊಬ್ಬ ವ್ಯಕ್ತಿಯನ್ನು ಮತಾಂತರಗೊಳಿಸುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಪ್ರಾಪ್ತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರ ಧಾರ್ಮಿಕ ಮತಾಂತರದ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ ವಿಧಿಸಲು ಚಿಂತನೆ ನಡೆಸಲಾಗಿದೆ.
ಇಂತಹ ಧಾರ್ಮಿಕ ಮತಾಂತರಕ್ಕೆ ಬಲಿಯಾದವರ ಪಾಲಕರು ಸೇರಿದಂತೆ ರಕ್ತ ಸಂಬಂಧಿಗಳು ದೂರು ದಾಖಲಿಸಲು ಅವಕಾಶವಿದೆ. ಈ ರೀತಿ ದೂರು ದಾಖಲಾದರೆ ಸಬ್ ಇನ್ಸ್‌ಪೆಕ್ಟರ್‌ಗಳ ಶ್ರೇಣಿಗಿಂತ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿ ತನಿಖೆ ಮಾಡುತ್ತಾರೆ.
ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ಕರಾಳತೆ ಬಿಚ್ಚಿಟ್ಟ 94ರ ಅಜ್ಜಿ- ಪರಿಹಾರಕ್ಕೆ ಕೋರಿ ‘ಸುಪ್ರೀಂ’ ಮೊರೆ!

ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!

ಸಿಬಿಐ ವಶದಲ್ಲಿರುವ ಬಿಜೆಪಿ ಕೌನ್ಸಲರ್​ ಅಮಾನತು- ಭ್ರಷ್ಟಾಚಾರಿಗಳನ್ನು ಸಹಿಸಲ್ಲ ಎಂದ ಪಕ್ಷ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
