ಭೋಪಾಲ್​ (ಮಧ್ಯಪ್ರದೇಶ):ಇತ್ತೀಚಿನ ದಿನಗಳಲ್ಲಿ ಲವ್​ ಜಿಹಾದ್​ ಎಂಬ ಪ್ರಕರಣಗಳು ಹೆಚ್ಚುತ್ತಿರುವುದು ವರದಿಯಾಗುತ್ತಿದೆ. ಒಂದು ಧರ್ಮದವರು ಇನ್ನೊಂದು ಧರ್ಮದ ಹೆಣ್ಣುಮಕ್ಕಳನ್ನು ಬಲವಂತದಿಂದ, ಮೋಸದಿಂದ ಅಥವಾ ಅಮಿಷ ಒಡ್ಡಿ ಮದುವೆಯಾಗುವ ಪ್ರಕರಣಗಳು ಹಾಗೂ ಇಂಥ ಮದುವೆಗಳಿಗೆ ಪ್ರಚೋದನೆ ನೀಡುತ್ತಿರುವುದು ಹೆಚ್ಚುತ್ತಲೇ ಮಧ್ಯಪ್ರದೇಶ ಸರ್ಕಾರ ಜಾಗೃತವಾಗಿದೆ.
ಬಲವಂತದ ಮತ್ತು ಮೋಸದಿಂದ ಅಂತರ್​ಧರ್ಮದವರನ್ನು ಮದುವೆಯಾದರೆ, ಅಂಥವರಿಗೆ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸುವ ಕುರಿತು ಇಂದು ಸರ್ಕಾರ ಪ್ರಕಟಿಸಿದೆ. ಇಂಥ ಮದುವೆಯಲ್ಲಿ ಭಾಗಿಯಾಗುವ ಇಲ್ಲವೇ ಇಂಥ ಘಟನೆಗಳಿಗೆ ಉತ್ತೇಜಿಸುವವರಿಗೂ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಮಧ್ಯಪ್ರದೇಶದ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಲವ್​ ಜಿಹಾದ್​ ಏನು ಎಂಬ ಬಗ್ಗೆ ವಿವರಣೆ ನೀಡಿರುವ ಅವರು, ಒಂದು ಧರ್ಮದ ಹೆಣ್ಣನ್ನು ಇನ್ನೊಂದು ಧರ್ಮದವರು ಬಲವಂತವಾಗಿ ಇಲ್ಲವೇ ಆಮಿಷ ಒಡ್ಡಿ ಮದುವೆಯಾಗುವುದು ಅಥವಾ ತಮ್ಮ ಧರ್ಮಕ್ಕೆ ಮತಾಂತರಗೊಳ್ಳಲು ಹಿಂಸಿಸುವುದು ಇವೆಲ್ಲವೂ ಸೇರಿದೆ ಎಂದಿದ್ದಾರೆ.
ಇದನ್ನೂ ಓದಿ:ಕುತೂಹಲದ ಕೇಂದ್ರವಾದ ಬ್ರಿಕ್ಸ್​ ಶೃಂಗಸಭೆ: ಮೋದಿ- ಜಿನ್‌ಪಿಂಗ್‌ ​ಪುನಃ ಮುಖಾಮುಖಿ!
ಕಠಿಣ ಕಾನೂನಿನ ಕ್ರಮಕ್ಕೆ ನಮ್ಮ ಸರ್ಕಾರ ಮುಮದಾಗಿದೆ. ಬಲವಂತವಾಗಿ ಮತಾಂತರ ಮಾಡುವುದು, ಮದುವೆಯಾಗುವುದು ಇವುಗಳು ಜಾಮೀನುರಹಿತ ಅಪರಾಧವಾಗಿರುತ್ತದೆ. ಒಂದು ವೇಳೆ ಈ ರೀತಿ ಒತ್ತಾಯವಾಗಿ ಮದುವೆಯಾದರೆ ಅಂಥ ಮದುವೆಗಳನ್ನು ಅನೂರ್ಜಿತ ಅಥವಾ ಶೂನ್ಯವಿವಾಹ ಎಂದು ಘೋಷಿಸಲು ಕಾನೂನಿನ ಅಡಿ ಅವಕಾಶವಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಎಲ್ಲಾ ಅಂತರ್​ಧರ್ಮೀಯ ವಿವಾಹಕ್ಕೆ ಇದು ಅನ್ವಯ ಆಗುವುದಿಲ್ಲ, ಬದಲಾಗಿ ಮೊದಲೇ ಹೇಳಿದರೆ “ಲವ್​ ಜಿಹಾದ್​” ಅಂದರೆ ಬಲವಂತದ ಮದುವೆ, ಮತಾಂತರಕ್ಕೆ ಇದು ಅನ್ವಯ ಆಗಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಇಷ್ಟ ಪಟ್ಟು ಮದುವೆಗೆ ಮತಾಂತರಗೊಳ್ಳಲು ಬಯಸುವ ಯಾವುದೇ ವ್ಯಕ್ತಿ ಒಂದು ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು. ಅಂದಾಗ ಮಾತ್ರ ಇದು ಒತ್ತಾಯಪೂರ್ವಕವಲ್ಲದ ಮತಾಂತರ ಎಂದು ತಿಳಿಯಲಾಗುವುದು ಎಂದಿದ್ದಾರೆ.
ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಮತ್ತು ಹರಿಯಾಣ ಕೂಡ ಇದೇ ರೀತಿಯ ಶಾಸನವನ್ನು ತರುವ ಭರವಸೆ ನೀಡಲಾಗಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ನವೆಂಬರ್ 2 ರಂದು ಮಸೂದೆಯನ್ನು ಪರಿಚಯಿಸುವ ತಮ್ಮ ಸರ್ಕಾರದ ಯೋಜನೆಯನ್ನು ಮೊದಲು ಘೋಷಿಸಿದ್ದರು.
ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ಪಾಲಕರಿಗೆ ಗೊತ್ತಾದದ್ದು 27 ವರ್ಷಗಳ ಬಳಿಕ!

ವರ್ಷಗಟ್ಟಲೆ ಒಂದೇ ಮನೆಯಲ್ಲಿದ್ವಿ… ತನು-ಮನ ಎಲ್ಲಾ ಹಂಚಿಕೊಂಡ್ವಿ… ಆದ್ರೆ ಈಗ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 2 =
Remember me
