ಚೆನ್ನೈ:ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಚೆನ್ನೈನ ಯುವತಿಯೊಬ್ಬಳು ದಿಢೀರ್‌ ಕಾಣೆಯಾಗಿದ್ದು, ಕೆಲ ದಿನಗಳಿಂದ ಇದು ಭಾರಿ ಕೋಲಾಹಲ ಸೃಷ್ಟಿಸಿದೆ.
ತನಿಖೆಯ ವೇಳೆ ಬಾಂಗ್ಲಾದೇಶದ ದುಷ್ಕರ್ಮಿಗಳು ಈಕೆಯನ್ನು ಅಪಹರಣ ಮಾಡಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕೆ ಪಟ್ಟಿತ್ತು. ಅದೇ ಇನ್ನೊಂದೆಡೆ ಇದು ಲವ್‌ ಜಿಹಾದ್‌ ಪ್ರಕರಣ ಇರಬಹುದು ಎಂಬ ಬಗ್ಗೆಯೂ ತನಿಖೆ ಶುರುವಾಗಿತ್ತು. ಯುವತಿ ನಾಪತ್ತೆಯಾಗುವ ಹಿಂದೆ ಲವ್‌ ಜಿಹಾದ್‌ ಅಂಶ ಇರುವುದು ತನಿಖಾ ತಂಡಕ್ಕೆ ಸುಳಿವು ಸಿಕ್ಕಿತ್ತು.
ಕಳೆದ ಮೇ ತಿಂಗಳಲ್ಲಿ ಚೆನ್ನೈ ಮೂಲದ ಉದ್ಯಮಿಯು ಲಂಡನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರಿಯನ್ನು ಬಾಂಗ್ಲಾದೇಶೀಯರು ಅಪಹರಿಸಿದ್ದಾರೆ ಎಂದು ಯುವತಿಯ ತಂದೆ ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿದ್ದ ಎನ್‌ಐಎಗೆ ಈ ಅಂಶ ಬೆಳಕಿಗೆ ಬಂತು.
ತಮ್ಮ ಪುತ್ರಿಯನ್ನು ತೀವ್ರಗಾಮಿತ್ವದ ಕಡೆಗೆ ಆಕರ್ಷಿತಳಾಗುವಂತೆ ಮಾಡಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಒತ್ತಾಯ ಪೂರ್ವಕವಾಗಿ ಮತಾಂತರಿಸಲಾಗಿದೆ ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು. ಹೀಗಾಗಿ ಲವ್‌ ಜಿಹಾದ್‌ ಆ್ಯಂಗಲ್‌ನಲ್ಲಿಯೂ ತನಿಖೆ ಶುರುವಾಗಿತ್ತು.
ಇದನ್ನೂ ಓದಿ:ಅಂತ್ಯಕ್ರಿಯೆ ವೇಳೆ ಪೆಟ್ಟಿಗೆಯಲ್ಲಿದ್ದ ಯುವತಿಯ ‘ಶವ’ ಅಲುಗಾಡಿ ಮೇಲೆದ್ದು ಬಂತು!
ಆದರೆ ಇದೀಗ, ಇಸ್ಲಾಮಿಕ್‌ ಧರ್ಮಬೋಧಕ ಝಾಕೀರ್‌ ನಾಯ್ಕ್‌ಗೂ ಸಂಬಂಧವಿದೆ ಎಂಬ ಬಗ್ಗೆ ಅನುಮಾನ ಶುರುವಾಗಿದೆ. ಯುವತಿಯ ಅಪಹರಣದಲ್ಲಿ ಝಾಕೀರ್‌ ನಾಯ್ಕ್‌ ಜತೆ ನಂಟು ಹೊಂದಿರುವ ಬಾಂಗ್ಲಾದ ಸಂಘಟಿತ ಗ್ಯಾಂಗ್‌ವೊಂದರ ಪಾತ್ರವಿದೆ ಎಂಬ ಅನುಮಾನದ ಮೇರೆಗೆ ಎನ್‌ಐಎ ಇದೀಗ ತನಿಖೆ ಆರಂಭಿಸಿದೆ.
ಬಾಂಗ್ಲಾದ ಮಾಜಿ ಸಂಸದ ಸರ್ದಾರ್‌ ಶೇಖಾವತ್‌ ಹುಸೇನ್‌ ಬೊಕುಲ್‌ ಅವರ ಪುತ್ರ ನಾದ ನಫೀಸ್‌ನನ್ನು ಪ್ರಮುಖ ಆರೋಪಿ ಎಂದು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ.
ಬಿಡಿಸಲಾಗದ ಕಿಮ್‌ ರಹಸ್ಯ: ಸತ್ತೇ ಹೋದ ಎಂದ ಸರ್ವಾಧಿಕಾರಿ ಮತ್ತೊಮ್ಮೆ ಪ್ರತ್ಯಕ್ಷ!

ನಿಮ್ಮ ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eight =
Remember me
