ನವದೆಹಲಿ:17 ವರ್ಷದ ಬಾಲಕನ ತಾಯಿಯೊಬ್ಬಳು ತನ್ನ ಪ್ರಿಯಕರನಿಗೆ ಫೋನ್‌ನ ಪಾಸ್‌ವರ್ಡ್‌ ನೀಡಲು ನಿರಾಕರಿಸಿದ ಕಾರಣ, ಕೊಲೆಯಾಗಿ ಹೋದ ಭೀಕರ ಘಟನೆ ದೆಹಲಿಯ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ.
ಮಮತಾ ಶರ್ಮಾ ಎಂಬಾಕೆ ಕೊಲೆಯಾದ ಮಹಿಳೆ. ಬ್ರಹ್ಮಪಾಲ್ ಸಿಂಗ್ ಎಂಬ ವ್ಯಕ್ತಿಯ ಜತೆ ಈಕೆ ಲಿವ್‌ ಇನ್‌ ರಿಲೇಷನ್‌ನಲ್ಲಿ ಇದ್ದಳು. ಈಕೆಗೆ 17 ವರ್ಷದ ಮಗ ಕೂಡ ಇದ್ದಾನೆ. ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಮತಾ, ಮೊನ್ನೆ ಬ್ರಹ್ಮಪಾಲ್ ಮನೆಗೆ ಬಂದಾಗ ಯಾರ ಬಳಿಯೋ ಚಾಟಿಂಗ್‌ ಮಾಡುತ್ತಿದ್ದಳು.
ಇದನ್ನು ಗಮನಿಸಿದ ಬ್ರಹ್ಮಪಾಲ್‌ ಸಂದೇಹಗೊಂಡು ತಾನು ಅದನ್ನು ನೋಡಲು ಬಯಸಿದ್ದು, ಪಾಸ್‌ವರ್ಡ್‌ ನೀಡುವಂತೆ ಕೇಳಿದ್ದಾನೆ. ಆದರೆ ಆಕೆ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟುಗೊಂಡ ಆತ ಮಮತಾಳಕ್ಕೆ ಸುತ್ತಿಗೆಯನ್ನು ಭೀಕರವಾಗಿ ಹೊಡೆದು ಸಾಯಿಸಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ:35 ವರ್ಷಗಳ ಹಿಂದೆ ಬರೆದ ಲವ್‌ಲೆಟರ್‌ ನದಿಯಲ್ಲಿ ತೇಲುತ್ತ ಪ್ರೇಮಿಯ ಕೈಸೇರಿತು!
ಸಂಜೆ 17 ವರ್ಷದ ಮಗ ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಲೆ ಜಜ್ಜಿ ಹೋಗಿತ್ತು. ತಾಯಿಯ ಮೃತದೇಹದ ಪಕ್ಕದಲ್ಲಿಯೇ ಸುತ್ತಿಗೆ ಕೂಡ ಬಿದ್ದಿತ್ತು. ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಬ್ರಹ್ಮಪಾಲ್‌ಗಾಗಿ ತಡಕಾಡಿದಾಗ ಆತ ನಾಪತ್ತೆಯಾಗಿರುವುದು ತಿಳಿದುಬಂತು. ಕೂಡಲೇ ಆತನೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಸಂದೇಹ ಬಂತು.
ಅವನಿಗಾಗಿ ಜಾಲಬೀಸಿದಾಗ ಸಿಕ್ಕಿಬಿದ್ದ ಬ್ರಹ್ಮಪಾಲ್‌ ತನ್ನ ತಪ್ಪನ್ನು ಒಪ್ಪಿಕೊಂಡು ವಿಷಯ ತಿಳಿಸಿದ್ದಾನೆ. ಈಕೆ ಗಂಡನನ್ನು ಮೂರು ವರ್ಷಗಳ ಹಿಂದೆ ಬಿಟ್ಟು ಬ್ರಹ್ಮಪಾಲ್‌ ಜತೆ ಸಂಬಂಧ ಬೆಳೆಸಿಕೊಂಡಿದ್ದಳು. ಬ್ರಹ್ಮಪಾಲ್‌ಗೆ ಇದಾಗಲೇ ಮದುವೆಯಾಗಿ ಮೂರು ಮಕ್ಕಳು ಇದ್ದಾರೆ.
ಪಿಪಿಇ ಕಿಟ್‌ ಹಾಗೂ ಮುಟ್ಟಿನ ದಿನಗಳು: ಕರೊನಾ ವಾರಿಯರ್ಸ್‌ ನೋವನ್ನು ಬಿಚ್ಚಿಟ್ಟ ವೈದ್ಯೆಯರು

ಪುಲ್ವಾಮಾ ದಾಳಿ: ಪಾಕ್‌ನ ಉಗ್ರ ಮುಖ ಬಯಲು- 5 ಸಾವಿರ ಪುಟಗಳಲ್ಲಿದೆ ಮಾಹಿತಿ

ಬಾಲಿವುಡ್‌ ನಟಿಯರಿಂದ ದೂರವಾಗಿದ್ದ ದಾವೂದ್‌ಗೆ ಸಿಕ್ಕಿದೆ ಪಾಕ್‌ ಸುಂದರಿಯರ ಸಂಗ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − nine =
Remember me
