ಹೈದರಾಬಾದ್:ದುರಂತಮಯ ಪ್ರಸಿದ್ಧ ಪ್ರೇಮ ಕಥೆಗಳು ಇದಾಗಲೇ ಸಾಕಷ್ಟು ಪ್ರಚಾರದಲ್ಲಿ ಇವೆ. ಅಂಥದ್ದೇ ಒಂದು ನೋವಿನ ಪ್ರೀತಿಯ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪ್ರಿಯತಮೆ ಮೃತಪಟ್ಟ ನಂತರ, ಆಕೆಯಿಲ್ಲದ ಜೀವನವನ್ನು ಅರಗಿಸಿಕೊಳ್ಳಲಾಗದ ಪ್ರಿಯತಮನೊಬ್ಬ ಆಕೆಯ ಸಮಾಧಿ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೆಲಂಗಾಣದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಮಹದೇವಪುರ ಮಂಡಲದ ಕುದುರುಪಲ್ಲಿಯಲ್ಲಿ ನಡೆದಿದೆ. 24 ವರ್ಷದ ಚೆಲ್ಲಾ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ತೆಲಂಗಾಣ ರಾಜ್ಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ಇದನ್ನೂ ಓದಿ:ನಮ್ಮ ಮನೆಯಲ್ಲಿ ತುಳಸಿ ಬೆಳೆಯುವುದು ಆಕೆಗೆ ಗೊತ್ತಿಲ್ಲ- ಕಂಗನಾ ವಿರುದ್ಧ ಉದ್ಧವ್​ ಗರಂ
ಆದರೆ ಹುಡುಗಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆಕೆಯ ಸಾವಿನ ನಂತರ ಮಹೇಶ್​ ಖಿನ್ನತೆಗೆ ಜಾರಿದ್ದ. ಆಕೆಯಿಲ್ಲದ ಮೇಲೆ ತಾನು ಬದುಕಿದ್ದು ಪ್ರಯೋಜನವಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದಾನೆ. ಇದೇ ಕಾರಣಕ್ಕೆ ಯುವತಿಯ ಸಮಾಧಿ ಬಳಿ ಆಗಮಿಸಿದ ಮಹೇಶ್, ಅಲ್ಲಿಯೇ ಸಮೀಪ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೀತಿಸಿದ ಹುಡುಗಿ ಇಲ್ಲದೆ ಬದುಕಲು ಸಾಧ್ಯವಿಲ್ಲವೆಂದು ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿಯೂ ಹಾಕಿಕೊಂಡಿದ್ದಾನೆ. ಇದು ನಂತರ ಬೆಳಕಿಗೆ ಬಂದಿದೆ. ದಸರಾ ಹಬ್ಬದ ಸಡಗರದಲ್ಲಿದ್ದ ಮಹೇಶ್​ ಕುಟುಂಬಸ್ಥರಿಗೆ ಆತನ ಸಾವಿನ ಸುದ್ದಿ ತಿಳಿದಿದೆ. ಯುವತಿಯನ್ನು ಮಹೇಶ್​ ತುಂಬಾ ಪ್ರೀತಿಸುತ್ತಿದ್ದ, ಮದುವೆಗೂ ಅರೇಂಜ್​ ಮಾಡಿಕೊಂಡಿದ್ದ. ಆಕೆಯ ಸಾವಿನ ನಂತರ ತುಂಬಾ ನೊಂದುಕೊಂಡು ಖಿನ್ನತೆಗೆ ಜಾರಿದ್ದ ಎಂದು ಕುಟುಂಬದವರು ಹೇಳಿದ್ದಾರೆ.
ಈಕೆಯ ಎದೆಹಾಲಿಗೆ ಲಕ್ಷ ಲಕ್ಷ ರೂಪಾಯಿ- ಮನೆಯಲ್ಲೇ ಕೂತು ಸಿಕ್ಕಾಪಟ್ಟೆ ಸಂಪಾದನೆ!

ಉಗ್ರರ ಉರುಳಿಸಲು ಒಂದೇ ಸೆಕೆಂಡ್​ ಸಾಕಿತ್ತು ಯೋಧರಿಗೆ… ಆದರೆ ಅಲ್ಲಿ ಆದದ್ದೇ ಪವಾಡ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 1 =
Remember me
