ಖಗರಿಯಾ (ಬಿಹಾರ) :ಇದು ನಾಲ್ಕು ಮಕ್ಕಳ ತಾಯಿಯಾಗಿರುವ 41 ವರ್ಷದ ಮಹಿಳೆ ಹಾಗೂ 21 ವರ್ಷದ ಯುವಕ ಪ್ರೀತಿಗೆ ಬಿದ್ದಿರುವ ಘಟನೆ. ಗಂಡ ಮೃತಪಟ್ಟ ಬಳಿಕ ಒಂಟಿಯಾಗಿದ್ದ ಈ ಮಹಿಳೆ ಯುವಕನ ಬಲೆಗೆ ಬಿದ್ದು ಇದೀಗ ಗ್ರಾಮಸ್ಥರು ಸೇರಿ ಮದುವೆ ಮಾಡಿಸಿರುವ ಘಟನೆ ಇದು.ಇದು ನಡೆದಿರುವುದು ಬಿಹಾರದ ಖಗರಿಯಾ ಜಿಲ್ಲೆಯ ಪರಬಟ್ಟಾ ಬ್ಲಾಕ್​ ವ್ಯಾಪ್ತಿಯ ದರಿಯಾಪುರದಲ್ಲಿ. ಸಾಮಾಜಿಕ ಜಾಲತಾಣದಲ್ಲಿ ಮನಟ್ಟಿ ದೇವಿ ಎಂಬ ಮಹಿಳೆ ಮತ್ತು ಯುವಕ ರವಿಕುಮಾರ್​ನ ಪ್ರೇಮ ಕಹಾನಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ವಿಧವೆಯಾಗಿರುವ ಮನಟ್ಟಿ ದೇವಿ ಜತೆ ರಾಮಕುಮಾರ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದಾನೆ. ಆಗಾಗ್ಗೆ ಮನೆಗೆ ಬಂದು ಯುವಕ ಮಹಿಳೆಯನ್ನು ಭೇಟಿಯಾಗುತ್ತಿದ್ದ. ಗ್ರಾಮಸ್ಥರು ಇದನ್ನು ನೋಡಿದರೂ ಅಷ್ಟು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಏಕೆಂದರೆ ಆಕೆ ನಾಲ್ಕು ಮಕ್ಕಳ ತಾಯಿಯಾಗಿದ್ದು, ಅವನಿನ್ನೂ ಚಿಕ್ಕವನು ಎನ್ನುವ ಕಾರಣಕ್ಕೆ. ಆದರೆ ಅಕ್ಕ ಪಕ್ಕದ ಮನೆಯವರಿಗೆ ಇವರ ಸಂಬಂಧದ ಬಗ್ಗೆ ಗುಮಾನಿ ಶುರುವಾಗಿತ್ತು.ಕೆಲ ದಿನಗಳಿಂದ ಇಲ್ಲಿ ಭಾರಿ ಮಳೆ ಸುರಿದು ಪ್ರವಾಹ ಭೀತಿ ಉಂಟಾಗಿತ್ತು. ಮನಟ್ಟಿದೇವಿಯ ಮನೆ ಕೂಡ ಭಾಗಶಃ ಪ್ರವಾಹದಲ್ಲಿ ಸಿಲುಕಿತ್ತು. ಆಕೆಯನ್ನು ವಿಚಾರಿಸುವ ನೆಪದಲ್ಲಿ ಯುವಕ ಅವಳ ಮನೆಗೆ ಬಂದಿದ್ದ. ಜೋರು ಮಳೆ, ಪ್ರವಾಹದ ಭೀತಿ ಇರುವಾಗಲೇ ಒಳಗಡೆ ಇವರಿಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು. ಇದನ್ನು ಗಮನಿಸುತ್ತಿದ್ದ ಅಕ್ಕಪಕ್ಕದ ಮನೆಯವರು ಕೂಡಲೇ ಒಳಕ್ಕೆ ನುಗ್ಗಿದ್ದಾರೆ.ನೋಡಬಾರದ ಸ್ಥಿತಿಯಲ್ಲಿ ಅವರಿಬ್ಬರೂ ಇದ್ದರು. ನಂತರ ಹೀಗೆ ಅಕ್ರಮ ಸಂಬಂಧ ಹೊಂದುತ್ತಾ ಇರುವುದು ಸರಿಯಲ್ಲ ಎಂದು ಇಬ್ಬರಿಗೂ ಬುದ್ಧಿಹೇಳಿದ ಗ್ರಾಮಸ್ಥರು ಮುಂದೆ ನಿಂತು ಇಬ್ಬರ ಮದುವೆ ಮಾಡಿಸಿದ್ದಾರೆ. ನಾಲ್ವರು ಗಂಡುಮಕ್ಕಳ ಪೈಕಿ ಇಬ್ಬರನ್ನು ತಮ್ಮ ಜತೆ ಇರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇನ್ನಿಬ್ಬರನ್ನು ಅಜ್ಜಿಯ ಜತೆ ಇರಿಸುವುದಾಗಿ ತೀರ್ಮಾನಿಸಿದ್ದಾರೆ.
ಏಳು ಮಕ್ಕಳ ತಂದೆಯ ಪ್ರೀತಿಗೆ ಸಿಲುಕಿದ 19ರ ಯುವತಿ! ಗಂಡ ಬೇಡ ಇವನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್‌ ಮೊರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
