ನವದೆಹಲಿ:ಅಫ್ಘಾನಿಸ್ತಾನದ ಯುವತಿ ಹಾಗೂ ಫ್ರಾನ್ಸ್​ನ ಯುವಕ ನಡುವೆ ಭಾರತದಲ್ಲಿ ಪ್ರೀತಿ ಚಿಗುರಿ ಕೊನೆಗೆ ಇಲ್ಲಿಯೇ ಹೈಕೋರ್ಟ್​ನಿಂದ ಇವರ ಲವ್​ ಸ್ಟೋರಿ ಸುಖಾಂತ್ಯಗೊಂಡಿರುವ ಘಟನೆ ನಡೆದಿದೆ.
ಇವರಿಬ್ಬರೂ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದರು. ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು, ಸಲುಗೆಯಾಗಿ, ಅದು ಪ್ರೀತಿಗೆ ತಿರುಗಿ ಮದುವೆಯವರೆಗೂ ಬಂದಿದ್ದಾರೆ. ನಂತರ ಇವರು ದೆಹಲಿಯ ಮಸೀದಿವೊಂದರಲ್ಲಿ ವಿವಾಹವಾಗಿದ್ದರು.
ಆದರ ದುರದೃಷ್ಟವಶಾತ್​ ಇವರು ವಾಪಸ್​ ಹೋಗಲು ಆಗಲಿಲ್ಲ. ಇದಕ್ಕೆ ಕಾನೂನು ಅಡಚಣೆ ಉಂಟಾಯಿತು. ಏಕೆಂದರೆ ಈ ವೇಳೆಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದ್ದು, ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ನೂತನ ಜೋಡಿ ಫ್ರಾನ್ಸ್​ಗೆ ಹೋಗಲು ಬಯಸಿದರು. ಆದರೆ ಅಫ್ಘಾನಿಸ್ತಾನ ಮೂಲದ ಪತ್ನಿಯ ವೀಸಾಕ್ಕಾಗಿ ಫ್ರೆಂಚ್​​ ರಾಯಭಾರ ಕಚೇರಿಗೆ ತೆರಳಿದಾಗ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡದೇ ವೀಸಾ ನೀಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿತು.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮದುವೆಯಾಗಿರುವ ಕಾರಣ, ಈ ಜೋಡಿ ವಿವಾಹ ನೋಂದಣಿಗಾಗಿ ದೆಹಲಿ ಸರ್ಕಾರದ ವೆಬ್​ಸೈಟ್​​ಗೆ ಮೊರೆ ಹೋಗಿದ್ದಾರೆ. ಅಲ್ಲೂ ಅದೃಷ್ಟ ಕೈಗೂಡಲಿಲ್ಲ. ಏಕೆಂದರೆ ಕಡ್ಡಾಯವಾಗಿ ಆಧಾರ್​ ಕಾರ್ಡ್​​ ಮತ್ತು ವೋಟಿಂಗ್ ಕಾರ್ಡ್ ಬೇಕು ಎಂದು ಅದರಲ್ಲಿ ಉಲ್ಲೇಖವಾಗಿತ್ತು. ಆದ್ದರಿಂದ ಜೋಡಿ ದೆಹಲಿಯ ಪ್ರಸಿದ್ಧ ವಕೀಲ ದಿವ್ಯಾಂಶು ಪಾಂಡೆ ಎಂಬ ವಕೀಲರನ್ನು ಭೇಟಿಯಾದರು.
ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಸಲಹೆ ನೀಡಿದರು. ನಂತರ ಅರ್ಜಿ ಸಲ್ಲಿಸಿದ ಅವರು ಸಂವಿಧಾನದ 14ನೇ ಪರಿಚ್ಛೇದ ಉಲ್ಲೇಖ ಮಾಡಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡುವಂತೆ ಕೋರಿದ್ದಾರೆ. ವಾದ ಆಲಿಸಿದ ಹೈಕೋರ್ಟ್​ ಈ ಬಗ್ಗೆ ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡುವ ಮೂಲಕ ಪ್ರತಿಕ್ರಿಯೆ ಕೇಳಿದೆ. ಇದಕ್ಕೆ ದೆಹಲಿ ಸರ್ಕಾರ ಸಮ್ಮಿತಿ ನೀಡಿದೆ. ಆದ್ದರಿಂದ ಇಬ್ಬರಿಗೂ ವಿಶೇಷ ವಿವಾಹ ಕಾಯ್ದೆಯಡಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಜೋಡಿಯ ಕಥೆ ಸುಖಾಂತ್ಯಗೊಂಡಿದ್ದು, ಮುಂದಿನ ತಿಂಗಳು ಇವರು ಫ್ರಾನ್ಸ್​ಗೆ ತೆರಳಲಿದ್ದಾರೆ.
ಬಲವಂತದ ಸಂಭೋಗದಿಂದ ಪಾರ್ಶ್ವವಾಯುವಿಗೆ ತುತ್ತಾದ ಪತ್ನಿ: ಪತಿಗೆ ಹಕ್ಕಿದೆ ಎಂದ ಕೋರ್ಟ್​!

ಏಳು ಮಕ್ಕಳ ತಂದೆಯ ಪ್ರೀತಿಗೆ ಸಿಲುಕಿದ 19ರ ಯುವತಿ! ಗಂಡ ಬೇಡ ಇವನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್‌ ಮೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
