ಪ್ರಯಾಗರಾಜ (ಉತ್ತರಪ್ರದೇಶ):ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಓಡಿಹೋಗಿ ಲಿವ್‌ ಇನ್‌ ರಿಲೇಷನ್‌ನಲ್ಲಿ ಇದ್ದ ಮಹಿಳೆಯೊಬ್ಬಳು ನಂತರ ಹೈಕೋರ್ಟ್‌ ಮೊರೆ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ತನ್ನ ಪತಿ ಹೊಡೆದು ಬಡೆದು ಮಾಡುತ್ತಿದ್ದ ಎನ್ನುವ ಕಾರಣಕ್ಕೆ ತಾನು ಮನೆಬಿಟ್ಟು ಪ್ರಿಯಕರನ ಜತೆಯಲ್ಲಿ ಇದ್ದೇನೆ. ಆದರೆ ಪತಿ ಅಲ್ಲಿಗೆ ನುಗ್ಗಿ ಹಲ್ಲೆ ಮಾಡುತ್ತಿದ್ದಾರೆ. ಇದರಿಂದಾಗಿ ನಮಗೆ ತೊಂದರೆಯಾಗಿದೆ. ದಯವಿಟ್ಟು ಗಂಡನಿಂದ ರಕ್ಷಣೆ ಕೊಡಲು ಪೊಲೀಸರಿಗೆ ಆದೇಶಿಸಿ ಎಂದು ಮಹಿಳೆ ಹೈಕೋರ್ಟ್‌ ಮೊರೆ ಹೋಗಿದ್ದರು.ಇದನ್ನು ಆಲಿಸಿದ ನ್ಯಾಯಮೂರ್ತಿಗಳು, ಮಹಿಳೆಯ ಮನವಿಯನ್ನು ತಿರಸ್ಕರಿಸಿದೆ. ಮಾತ್ರವಲ್ಲದೇ ಈ ರೀತಿ ಅರ್ಜಿ ಸಲ್ಲಿಸಿ ಕೋರ್ಟ್‌ ಸಮಯ ಹಾಳು ಮಾಡಿದ್ದಕ್ಕೆ ಐದು ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.’ ಹಿಂದೂ ವಿವಾಹ ಕಾಯ್ದೆಯ ಅಡಿ ಮದುಮೆಯಾಗಿರುವ ಮಹಿಳೆ ವಿಚ್ಛೇದನ ನೀಡದೇ ಗಂಡನಿಂದ ಬೇರ್ಪಟ್ಟು ಬೇರೊಬ್ಬನ ಜತೆ ಹೋದರೆ ಅದು ಅಕ್ರಮ ಸಂಬಂಧ ಎನಿಸಿಕೊಳ್ಳುತ್ತದೆ. ಹೀಗೆ ಮಾಡಿದ ಸಂದರ್ಭದಲ್ಲಿ ಕೋರ್ಟ್‌ ಏನಾದರೂ ಆ ಮಹಿಳೆಗೆ ನ್ಯಾಯ ಕೊಟ್ಟರೆ ಅದು ಅಕ್ರಮ ಸಂಬಂಧದ ಪರವಾಗಿ ತೀರ್ಪು ಕೊಟ್ಟಂತಾಗುತ್ತದೆ. ಆದ್ದರಿಂದ ಈ ರೀತಿ ಆದೇಶ ಹೊರಡಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಕ್ರಮ ಸಂಬಂಧವನ್ನು ಒಪ್ಪಿಕೊಳ್ಳುವುದು ಸರಿಯಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.ಒಂದು ವೇಳೆ ಗಂಡ ಪ್ರಿಯಕರನ ಮನೆಗೆ ಬಂದು ಹಲ್ಲೆ ಮಾಡಿದ್ದರೆ ಅದು ಕಾನೂನಿನ ಪ್ರಕಾರ ಅಪರಾಧ. ಯಾವುದೇ ವ್ಯಕ್ತಿಯ ಮನೆಗೆ ನುಗ್ಗಿ ಹಲ್ಲೆ ಮಾಡುವುದು ಅಪರಾಧ. ಆದ್ದರಿಂದ ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸುವಂತೆ ಮಹಿಳೆಗೆ ಕೋರ್ಟ್‌ ಆದೇಶಿಸಿದೆ. ಆದರೆ ಅಕ್ರಮ ಸಂಬಂಧವಾಗಿರುವ ಕಾರಣ, ರಕ್ಷಣೆ ಕೊಡುವ ತೀರ್ಪನ್ನು ತಾನು ಪ್ರಕಟಿಸುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
