ಕಾನ್ಪುರ: ತಾಯಿ ಮತ್ತು ಮಗಳು ಒಬ್ಬನನ್ನೇ ಪ್ರೀತಿಸುತ್ತಿದ್ದು, ಆತನ ಜತೆ ಅಕ್ರಮ ಸಂಬಂಧ ಹೊಂದಿದ್ದು, ಅದನ್ನು ಕಂಡುಹಿಡಿಯಲು ಹೋದ ಯುವಕ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ತಮ್ಮ ಈ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಯುವಕನ್ನು ತಾಯಿ, ಮಗಳು ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ತಾಯಿ-ಮಗಳು ಇಬ್ಬರು ಒಬ್ಬನೊಂದಿಗೆಯೇ ಅನೈತಿಕ ಸಂಬಂಧ ಹೊಂದಿದ್ದರು. ಭರತ್​ ಎಂಬ ಯುವಕನಿಗೆ ತನ್ನ ತಾಯಿ ಮತ್ತು ಸಹೋದರಿಯ ಈ ಸಂಬಂಧದ ಬಗ್ಗೆ ತಿಳಿಯಿತು.
ಆದ್ದರಿಂದ ಇದು ಹೌದೋ ಅಲ್ಲವೋ ಎಂದು ತಿಳಿಯುವ ಸಲುವಾಗಿ ಈ ಬಗ್ಗೆ ಪತ್ತೆ ಮಾಡಲು ನವೀನ್‍ ಎಂಬಾತನಿಗೆ ಸೂಚಿಸಿದ್ದನು. ಈ ಹಿನ್ನೆಲೆಯಲ್ಲಿ ನವೀನ್​ ತಾಯಿ-ಮಗಳ ಹಿಂದೆ ಹೋಗುತ್ತಿದ್ದನು. ಈ ವಿಷಯ ಹೇಗೋ ಅಮ್ಮ- ಮಗಳಿಗೆ ತಿಳಿದಿದೆ. ಅವರು ತಮ್ಮ ಕಾಮನ್​ ಗೆಳೆಯ ರಂಜಿತ್ ಪಾಲ್‍ಗೆ ವಿಷಯ ತಿಳಿಸಿ ಕೊಲ್ಲಲು ಪ್ಲ್ಯಾನ್​ ಮಾಡಿದ್ದಾರೆ.
ಅದರಂತೆ ರಂಜಿತ್, ಮೊದಲಿಗೆ ನವೀನ್ ಸ್ನೇಹ ಸಂಪಾದಿಸಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಪೊಲೀಸರು ತನಿಖೆ ಕೈಗೊಂಡಾಗ ರಂಜಿತ್ ಪಾಲ್ ಸಿಕ್ಕಿಬಿದ್ದಿದ್ದಾನೆ. ನಂತರ ಕೊಲೆಯ ವಿಷಯ ಬಾಯಿಬಿಟ್ಟಿದ್ದಾನೆ. ರಂಜಿತ್ ಹೇಳಿಕೆಯ ಮೇಲೆ ಇದೀಗ ಪೊಲೀಸರು ತಾಯಿ-ಮಗಳನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮೈಸೂರು ಅರಸರಿಗೆ ಸುಪ್ರೀಂನಲ್ಲಿ ಜಯಭೇರಿ: ಸರ್ಕಾರಕ್ಕೆ ದಕ್ಕದ ಸಾವಿರಾರು ಎಕರೆ ಜಮೀನು

ಸರ್ಕಾರ ಉರುಳಿಸಿದ್ರೆ ಸಚಿವ ಸ್ಥಾನ ಕೊಡಿಸೋ ಆಫರ್​ ಬಂದಿತ್ತು ಎಂದ ಕಾಂಗ್ರೆಸ್​ ಶಾಸಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 16 =
Remember me
