ಮುಂಬೈ:ಹಿಂದೂ- ಮುಸ್ಲಿಂ ನಡುವಿನ ಪ್ರೇಮದ ವಿಷಯ. ಹುಡುಗ- ಹುಡುಗಿ ಒಪ್ಪಿದರು, ಮನೆಯವರೂ ಓಕೆ ಅಂದರು. ಆದರೆ ಅವರಿವರ ಬಾಯಲ್ಲಿ ಈ ವಿವಾಹ ಲವ್​ ಜಿಹಾದ್​ ರೂಪ ಪಡೆದು ಮದುವೆ ಆಮಂತ್ರಣ ಪತ್ರಿಕೆ ಪ್ರಿಂಟ್​ ಆದ ಮೇಲೆ ವಿವಾಹ ಕ್ಯಾನ್ಸಲ್​ ಆಗಿರುವ ದುರಂತ ನಡೆದಿದೆ!
ಮಹಾರಾಷ್ಟ್ರದ ನಾಸಿಕ್​ನ ರಸಿಕಾ (28) ಮತ್ತು ಆಸೀಫ್ ಮದುವೆ ನಿಶ್ಚಯವಾಗಿತ್ತು. ಪರಸ್ಪರ ಪ್ರೇಮಿಸಿದ್ದ ಅವರ ಮದುವೆಗೆ ಮನೆಯವರೂ ಒಪ್ಪಿದ್ದರು. ಮದುವೆಗೆ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದರೆ ಮದುವೆ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಬಳಿಕ ದೊಡ್ಡ ಗಲಾಟೆ ಶುರುವಾಗಿದ್ದರಿಂದ ಮದುವೆ ಕ್ಯಾನ್ಸಲ್​ ಮಾಡಬೇಕಾಗಿ ಬಂದಿದೆ.
ಈ ಕುರಿತು ದುಃಖ ತೋಡಿಕೊಂಡಿರುವ ಯುವತಿಯ ತಂದೆ ಪ್ರಸಾದ್​, ರಸಿಕಾ ಅಂಗವಿಕಲೆ. ಆದ್ದರಿಂದ ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನನ್ನ ಮಗಳು ದಿವ್ಯಾಂಗ ಆಗಿರೋದರಿಂದ ಆಕೆಯ ಮದುವೆ ವಿಳಂಬವಾಗಿತ್ತು. ಕೊನೆಗೆ ಮಗಳು ತನ್ನ ಇಚ್ಛೆಯನ್ನು ನಮ್ಮ ಮುಂದೆ ಹೇಳಿಕೊಂಡಿದ್ದಳು. ಆಸೀಫ್ ಕುಟುಂಬಸ್ಥರು ಕೂಡ ಈಕೆಯನ್ನು ಸೊಸೆ ಮಾಡಿಕೊಳ್ಳಲು ಒಪ್ಪಿದ್ದರು. ಇಲ್ಲಿ ಯಾವುದೇ ಬಲವಂತ ಧರ್ಮ ಪರಿವರ್ತನೆ ನಡೆಯುತ್ತಿಲ್ಲ. ಆದರೂ ಹೀಗಾಯಿತು ಎಂದು ನೋವು ತೋಡಿಕೊಂಡರು.
ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲು ಒಪ್ಪಿಗೆ ಸೂಚಿಸಿರುವ ಕಾರಣ ಇದು ವೈರಲ್​ ಆಗಿತ್ತು. ಇದೇನು ದೊಡ್ಡ ವಿಷಯವಲ್ಲ, ಆದರೂ ಹೀಗೆ ಏಕೆ ಆಯಿತು ಎಂದು ಕುಟುಂಬಸ್ಥರು ವಿಷಾದಿಸುತ್ತಿದ್ದಾರೆ.
VIDEO: ಗೆಳೆಯನ ಜತೆಗೆ ಆಮೀರ್​ಖಾನ್​ ಪುತ್ರಿ ಕಳೆದ ಮೋಜಿನ ಕ್ಷಣಗಳ ವಿಡಿಯೋ ವೈರಲ್

ಮನೆಬಾಗಿಲಿಗೆ ಎಸ್​ಬಿಐ ಸೇವೆ: ಏನೇನು ಸಿಗಲಿದೆ? ಯಾರೆಲ್ಲಾ ಅರ್ಹರು? ಹೇಗೆ ಪಡೆಯುವುದು? ಇಲ್ಲಿದೆ ಡಿಟೇಲ್ಸ್​

ಪ್ರಿಯಕರ ಬೇರೊಬ್ಬಳ ಹಿಂದೆ ಹೋಗಬಾರದೆಂದು ಈ ಕೆಲಸಕ್ಕಿಳಿದಳಾ ಯುವತಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:6 − four =
Remember me
