ನವದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳ 1ನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ತೈಲ ಕಂಪೆನಿಗಳು ಪರಿಷ್ಕರಿಸುತ್ತವೆ. ಅದೇ ರೀತಿ ಇಂದು (ಸೆ.1) ಬೆಲೆ ಪರಿಷ್ಕರಣೆ ಆಗಿದೆ.
ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ 19 ಕೆಜಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರವನ್ನು 100 ರೂಪಾಯಿವರೆಗೆ ಕಡಿಮೆ ಮಾಡಲಾಗಿದೆ. ಸಿಲಿಂಡರ್ ದರ ದೆಹಲಿಯಲ್ಲಿ ರೂ 91.50, ಕೋಲ್ಕತಾದಲ್ಲಿ ರೂ 100, ಮುಂಬೈನಲ್ಲಿ ರೂ 92.50 ಮತ್ತು ಚೆನ್ನೈನಲ್ಲಿ ರೂ 96 ರಷ್ಟು ಅಗ್ಗವಾಗಿದೆ.
ಈ ಮೂಲಕ ದೆಹಲಿಯಲ್ಲಿ ನಿನ್ನೆಯವರೆಗೆ ಇದ್ದ 1976.50 ರೂ. ಈಗ 1885 ರೂಪಾಯಿಗೆ ಇಳಿಕೆಯಾಗಿದೆ. ಕೋಲ್ಕತಾದಲ್ಲಿ 2095.50 ರಿಂದ 1995.50 ಕ್ಕೆ ಬೆಲೆ ಇಳಿದಿದೆ. ಮುಂಬೈನಲ್ಲಿ 1936.50 ರಿಂದ 1844 ಹಾಗೂ ಚೆನ್ನೈನಲ್ಲಿ ರೂ.2141 ಬದಲಿಗೆ 2045 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 2,063.50 ರೂಪಾಯಿ ಇದೆ.
14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ ಗೃಹ ಬಳಕೆ ಎಲ್​ಪಿಜಿ ದರ 1055.50 ರೂಪಾಯಿಯಿದೆ. ದೆಹಲಿಯಲ್ಲಿ ಇದರ ಬೆಲೆ 1053 ರೂ, ಕೋಲ್ಕತಾದಲ್ಲಿ 1079 ರೂ, ಮುಂಬೈನಲ್ಲಿ 1052.50 ಮತ್ತು ಚೆನ್ನೈನಲ್ಲಿ 1068.50ನಲ್ಲಿ ಇದ್ದು ಅವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.(ಏಜೆನ್ಸೀಸ್​)
ಸರ್ಕಾರದ ಸವಲತ್ತಿಗಾಗಿ ಮದ್ವೆಯಾಗಿ ಕಿರುಕುಳ: ಜಾತಿನಿಂದನೆಯಿಂದ ಬೇಸತ್ತು ತುಮಕೂರಿನ ಗೃಹಿಣಿ ಆತ್ಮಹತ್ಯೆ

ಹೆಣ್ಣುಮಗುವೆಂದು ಅಪ್ಪ ಬಿಟ್ಟುಹೋದ… ಪೊಲೀಸರ ಕೈಗೆ ಸಿಕ್ಕಿಬಿದ್ದ ಫಸ್ಟ್​ ರ‍್ಯಾಂಕ್ ರಚನಾ ಬಿಚ್ಚಿಟ್ಟ ನೋವಿನ ಕಥೆ!

55ರ ವರ- 18ರ ವಧು: ‘ನನ್ನನ್ನು ಹೆಚ್ಚಿಗೆ ಭೇಟಿಯಾಗಬೇಡ’ ಎಂದು ಹಾಡುತ್ತಲೇ ಲವ್​ಗೆ ಬಿದ್ದ ಜೋಡಿಯ ಕಥೆ ಇದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
