ನವದೆಹಲಿ:ಇಂದು ಆಗಸ್ಟ್​ 1. ಪ್ರತಿ ತಿಂಗಳ ಮೊದಲ ದಿನ ಎಲ್​ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗುವಂತೆ, ಇವತ್ತು ಕೂಡ ಬೆಲೆ ಪರಿಷ್ಕರಣೆಯಾಗಿದ್ದು, ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 36 ರೂಪಾಯಿಗಳ ಕಡಿತವಾಗಿದೆ. ಈ ಹೊಸ ಬೆಲೆ ಇವತ್ತಿನಿಂದಲೇ ಜಾರಿಗೆ ಬರಲಿದೆ.
ಒಂದು ತಿಂಗಳ ಅವಧಿಯಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುತ್ತಿರೋದು ಇದು ಮೂರನೇ ಬಾರಿ. ಜುಲೈ 1ರಂದು 19 ಕೆಜಿ ಎಲ್​ಪಿಜಿ ವಾಣಿಕ್ಯ ಬಳಕೆಗೆ ಸಿಲಿಂಡರ್ ಬೆಲೆಯಲ್ಲಿ 198ರೂ. ಇಳಿಕೆ ಮಾಡಲಾಗಿತ್ತು. ಜುಲೈ 6ರಂದು 8.50ರೂ. ಇಳಿಕೆ ಮಾಡಲಾಗಿತ್ತು. ಇದರಿಂದಾಗಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಕಡಿತದಿಂದ ರೆಸ್ಟೊರೆಂಟ್​, ಹೊಟೆಲ್ ಮಾಲೀಕರಿಗೆ ಅನುಕೂಲವಾಗಲಿದೆ.
ಆದರೆ ಈ ಸಿಹಿ ಸುದ್ದಿ 14.2 ಕೆಜಿ ಗೃಹ ಬಳಕೆ ಸಿಲಿಂಡರ್​ ಗ್ರಾಹಕರಿಗೆ ಇಲ್ಲ. ಏಕೆಂದರೆ ದರದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಜುಲೈ 6ರಂದು ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 50ರೂ. ಹೆಚ್ಚಳ ಮಾಡಲಾಗಿತ್ತು. ಮೇನಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು. ಮೇ 7ರಂದು 50 ರೂ. ಹೆಚ್ಚಳ ಮಾಡಿದ್ದರೆ, ಮೇ 19 ರಂದು 3.50 ರೂ. ಏರಿಕೆ ಮಾಡಲಾಗಿತ್ತು. ಇದರ ಬೆಲೆಯಲ್ಲಿ ಸದ್ಯ ಯಾವುದೇ ವ್ಯತ್ಯಾಸವಿಲ್ಲ.
ಕಮರ್ಷಿಯಲ್ ಸಿಲಿಂಡರ್ ಕುರಿತು ಹೇಳುವುದಾದರೆ, ನವದೆಹಲಿಯಲ್ಲಿ 19 ಕೆಜಿ ಎಲ್​ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 1,976ರೂ. ಇರಲಿದೆ. ಕೋಲ್ಕತ್ತದಲ್ಲಿ 2,095.50ರೂ., ಮುಂಬೈನಲ್ಲಿ 1,936.50 ರೂ. ಹಾಗೂ ಚೆನ್ನೈನಲ್ಲಿ 2,141ರೂ. ಇರಲಿದೆ. ವ್ಯಾಟ್ ಸೇರಿದಂತೆ ಸ್ಥಳೀಯ ತೆರಿಗೆಗಳನ್ನು ಆಧರಿಸಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಅಧಿಕ ತೆರಿಗೆಯಿರುವ ರಾಜ್ಯದಲ್ಲಿ ಸಹಜವಾಗಿ ಬೆಲೆ ಹೆಚ್ಚಿರುತ್ತದೆ.
ಇನ್ನು ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ಬೆಂಗಳೂರಿನಲ್ಲಿ ದರ ಪರಿಷ್ಕರಣೆಗೆ ಮೊದಲು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯು 2,100 ರೂಪಾಯಿ ಇತ್ತು. 36 ರೂಪಾಯಿ ಕಡಿತದ ನಂತರ 2,063.50 ರೂಪಾಯಿ ಆಗಿದೆ. (ಏಜೆನ್ಸೀಸ್​)
ಜ್ಞಾನವಾಪಿ ಕೇಸ್​ನಲ್ಲಿ ಮುಸ್ಲಿಂ ಪರ ವಾದಿಸುತ್ತಿದ್ದ ವಕೀಲ ಯಾದವ್​ಗೆ​ ಹೃದಯಾಘಾತ: ಕೋರ್ಟ್​ಗೆ ಉತ್ತರಿಸುವ ಮುನ್ನವೇ ನಿಧನ

ಹಾಡು ಕೇಳಲು ಹಾಕಿದ್ದ ಡಿಜೆ ಸಿಸ್ಟಮ್​ 10 ಮಂದಿಯ ಬಲಿ ಪಡೆಯಿತು! ಪಿಕಪ್​ ವಾಹನದಲ್ಲಿ ದುರ್ಘಟನೆ

ಪುರುಷನ ಆ ಅಂಗದ ಮೇಲೆ 99ರ ಅಜ್ಜಿಗೆ ಇದೆಂಥ ಪ್ರೀತಿ! ಕೊನೆಯ ಆಸೆ ಕೇಳಿ ಎಲ್ಲರೂ ಶಾಕ್​, ಈಡೇರಿಸಿದರು ಬಯಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − one =
Remember me
