ಮಧುರೈ:ದೀಪದ ಹಬ್ಬ ದೀಪಾವಳಿಯ ಸಂಭ್ರಮದ ನಡುವೆ ಚೆನ್ನೈದ ಮಧುರೈನಲ್ಲಿ ಭಾರಿ ಅಗ್ನಿದುರಂತ ಸಂಭವಿಸಿದೆ. ಬಟ್ಟೆ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಹಾನಿಯಾಗಿದೆ.
ದುರದೃಷ್ಟಕರದ ಸಂಗತಿಯೆಂದರೆ ಬೆಂಕಿಯನ್ನು ನಂದಿಸಲು ಹೋದ ಅಗ್ನಿಶಾಮಕದಳದ ಇಬ್ಬರು ಸಿಬ್ಬಂದಿ ಸಜೀವವಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಸಂಸದೆ ಸುಮಲತಾ ನಡೆ ಟೀಕಿಸಿ ಗಂಭೀರ ಆರೋಪ ಮಾಡಿದ ಸಂಸದ ಪ್ರತಾಪ್​ ಸಿಂಹ..!
‌ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ನವಬತ್ಕಾನಾ ಪ್ರದೇಶದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿತ್ತು.
ರಕ್ಷಣಾ ಕಾರ್ಯಾಚರಣೆ ಮಾಡಲು ಸಿಬ್ಬಂದಿ ಧಾವಿಸಿದ್ದರು. ಕೂಡಲೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅವರು ತೊಡಗಿದ್ದರು. ಆದರೆ ಈ ವೇಳೆಯಲ್ಲೇ ಏಕಾಏಕಿ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡದ ಕೆಳಗೆ ಸಿಲುಕಿದ ಇಬ್ಬರು ಸಿಬ್ಬಂದಿ ಸಜೀವವಾಗಿ ದಹಿಸಿಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.
ಸತತ ಕಾರ್ಯಾಚರಣೆ ನಂತರ ಬೆಂಕಿಯನ್ನು ನಂದಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಜೈಲಿನ ಬಾತ್​ರೂಂನಲ್ಲಿ ಕ್ಯಾಮೆರಾ ಹಾಕಿದ್ದರು- ಪಾಕ್​ನ ಕರಾಳ ಮುಖ ಬಿಚ್ಚಿಟ್ಟ ನವಾಜ್​ ಷರೀಫ್​ ಪುತ್ರಿ

ಒಬ್ಬ ಮಗನ ವಿರುದ್ಧ ಡ್ರಗ್ಸ್​ ಕೇಸ್​, ಇನ್ನೊಬ್ಬನದ್ದು ರೇಪ್​ ಕೇಸ್​: ಅಂತೂ ರಾಜೀನಾಮೆ ನೀಡಿದ ಕೋಡಿಯೇರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − ten =
Remember me
