ಟೋಕಿಯೊ:ಗಾಯಕಿ ಸುನಿಧಿ ಚೌಹಾಣ್‌ ಅವರ ಕಂಠದಿಂದ ಬಂದ ನಟಿ ಮಾಧುರಿ ದೀಕ್ಷಿತ್‌ ಅವರು ನರ್ತಿಸಿರುವ ಸುಪ್ರಸಿದ್ಧ ಹಾಡು ಆಜಾ ನಾಚಲೆ ಸಿನಿಮಾದ ‘ಆಜಾ ನಾಚಲೆ ನಾಚಲೆ ಮೇರಿ ಯಾರ್‌ ನಾಚಲೆ’ ಒಲಿಂಪಿಕ್ಸ್‌ ಈಜುಕೊಳದಲ್ಲಿ ಸದ್ದು ಮಾಡಿದೆ.
ಇಸ್ರೇಲಿ ಈಜುಪಟುಗಳಾದ ಎಡೇನ್​ ಬ್ಲೆಚಾರ್​ ಹಾಗೂ ಶೆಲ್ಲಿ ಬೋಬ್ರಿಟ್ಸ್ಕಿ ಅವರು ಈ ಹಾಡಿಗೆ ತಕ್ಕಂತೆ ಈಜುಕೊಳದಲ್ಲಿ ಪ್ರದರ್ಶನ ನೀಡಿದ್ದು, ಇದು ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ನಾಚಲೆ, ನಾಚಲೆ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ಗೆ ಈ ಈಜುಪಟುಗಳು ಕೊಳದಲ್ಲಿ ನರ್ತಿಸುವ ಮೂಲಕ ಪ್ರದರ್ಶನ ನೀಡಿದ್ದಾರೆ. ಇದು ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಟೋಕಿಯೊದಲ್ಲಿ ಬಾಲಿವುಡ್‌ ಹಾಡು ಕೇಳಿ ಭಾರತೀಯರೂ ಖುಷಿ ಪಟ್ಟಿದ್ದಾರೆ. ಆರ್ಟಿಸ್ಟಿಕ್​​ ಸ್ವಿಮ್ಮಿಂಗ್​ ಡ್ಯೂಯಟ್​​ ಫ್ರೀ ಪೂರ್ವಭಾವಿ ಆವೃತ್ತಿಯಲ್ಲಿ ಈ ಪ್ರದರ್ಶನ ನೀಡಿದ್ದಾರೆ.
ಶೆಲ್ಲಿ ಹಾಗೂ ಈಡೆನ್​​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ. ಆದರೆ ಭಾರತೀಯ ಸಿನಿಪ್ರಿಯರ ಮನಸ್ಸಂತೂ ಗೆದ್ದಿದ್ದಾರೆ. ಇದರ ವಿಡಿಯೋ ಇದೀಗ ವೈರಲ್‌ ಆಗಿದೆ.
ನೀವೂ ನೋಡಿ ವಿಡಿಯೋ:
Thank you so much Team Israel for this!!! You have no idea how excited I was to hear and see this!! AAJA NACHLE!!!#ArtisticSwimming#Olympics#Tokyo2020pic.twitter.com/lZ5mUq1qZP— 𝒜𝓃𝓃𝑒 𝒟𝒶𝓃𝒶𝓂 (@AnneDanam)August 4, 2021
Thank you so much Team Israel for this!!! You have no idea how excited I was to hear and see this!! AAJA NACHLE!!!#ArtisticSwimming#Olympics#Tokyo2020pic.twitter.com/lZ5mUq1qZP
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 1 =
Remember me
