ಗ್ವಾಲಿಯರ್​ (ಮಧ್ಯಪ್ರದೇಶ):ಚಹ ಎಂದರೆ ಬಹುತೇಕ ಮಂದಿಗೆ ಬಹಳ ಪ್ರೀತಿ. ಬೆಳಗ್ಗೆ ಎದ್ದು ಒಂದು ಲೋಟ ಚಹ ಕುಡಿದಿಲ್ಲ ಎಂದರೆ ಇಡೀ ದಿನದ ಮೂಡ್​ ಹಾಳಾಗುತ್ತದೆ ಎನ್ನುವವರು ಹಲವರಿದ್ದಾರೆ. ತಲೆನೋವು ಬಂದರೆ, ಕೆಲಸ ಮಾಡುವಾಗ ನಿದ್ದೆ ಬಂದರೆ, ಮೂಡ್​ ಸರಿ ಮಾಡಲು… ಹೀಗೆ ಅನೇಕ ರೀತಿಯ ಕೆಲಸ ಕಾರ್ಯಗಳಿಗೆ ಚಹದ ಚಟಕ್ಕೆ ಬಿದ್ದವರು ಇದ್ದಾರೆ.
ಇದೇ ಕಾರಣಕ್ಕೆ ಥಹರೇವಾರಿ ರೀತಿಯ ಚಹ ಮಾಡಿ ಮಾರಾಟ ಮಾಡುವುದು ಈಗ ಸರ್ವೇ ಸಾಮಾನ್ಯ. ಜಿಂಜರ್ ಟೀ​, ಮಿಂಟ್​ ಟೀ, ಬ್ಲ್ಯಾಕ್​ ಟಿ, ಗ್ರೀನ್​ ಟೀ, ಕೇಟಿ… ಹೀಗೆ ಒಂದಾ… ಎರಡಾ… ಚಹದಲ್ಲಿಯೇ ಹತ್ತಾರು ಬಗೆಯ ಚಹಾಗಳು ಇದೀಗ ಲಭ್ಯ.
ಇವೆಲ್ಲಾ ಚಹಗಳನ್ನು ಎಲ್ಲರೂ ಸಾಮಾನ್ಯವಾಗಿ ಕೇಳಿ ಇರ್ತೀರಾ. ಆದರೆ ಉತ್ತರ ಪ್ರದೇಶದ ಗ್ಯಾಲಿಯರ್​ನ ಟೀಸ್ಟಾಲ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಹದ ವಿಷಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಸಾಮಾನ್ಯವಾಗಿ ಯಾರೂ ಕಂಡು ಕೇಳರಿಯದ ಟೀಗಳನ್ನು ತಾವು ಮಾಡಿಕೊಡುತ್ತಿರುವುದಾಗಿ ಈ ಸ್ಟಾಲ್​ ಮುಂದೆ ಬೋರ್ಡ್​ ಹಾಕಲಾಗಿದೆ.
ಅಷ್ಟಕ್ಕೂ ಇಲ್ಲಿಯ ಚಹದ ವಿಶೇಷವೇನೆಂದು ನೀವೇ ಈ ಚಿತ್ರದಲ್ಲಿ ನೋಡಿ…

ಗ್ವಾಲಿಯರ್​ನ ಹನುಮಂತನಗರದ ಕಾಲೂ ಬೇವಫಾ ಚಾಯ್​ವಾಲಾ ಎನ್ನುವ ಟೀ ಸ್ಟಾಲ್​ ಮುಂದಿರುವ ಈ ಲಿಸ್ಟ್​ನಲ್ಲಿ ಕುತೂಹಲ ಎನಿಸುವಂಥ ಚಹಗಳ ಲಿಸ್ಟ್​ ಮಾಡಲಾಗಿದೆ.
ಸಿಂಗಲ್​ ಆಗಿದ್ದರೆ, ಜೋಡಿ ಜತೆ ಬಂದರೆ, ಲವ್​ ಫೇಲ್ಯೂಯರ್​ ಆಗಿದ್ದರೆ, ಹೊಸದಾಗಿ ಪ್ರೇಮಾಂಕುರವಾಗಿದ್ದರೆ, ಪ್ರೇಮಿ ಕೈಕೊಟ್ಟು ಓಡಿ ಹೋಗಿದ್ದರೆ, ಒಂಟಿಗನ ಕಾಡುತ್ತಿದ್ದರೆ … ಹೀಗೆ ಎಲ್ಲದ್ದಕ್ಕೂ ಇಲ್ಲಿ ವಿಶೇಷ ಚಹ ಸಿಗುತ್ತದೆ ಎಂದು ಬೋರ್ಡ್​ನಲ್ಲಿ ಹಾಕಲಾಗಿದ್ದು, ಒಂದೊಂದು ಟೀಗೆ ಒಂದೊಂದು ರೇಟ್​ ಫಿಕ್ಸ್ ಮಾಡಲಾಗಿದೆ.
ಪ್ರೀತಿಯಲ್ಲಿ ಮೋಸ ಹೋಗಿದ್ದರೆ ರೂ.5, ಹೊಸ ಲವ್​ ಶುರುವಾದ್ರೆ ರೂ. 10, ಲವರ್​ ಬಿಟ್ಟು ಹೋಗಿದ್ದರೆ ರೂ. 15… ಹೀಗೆ ರೇಟ್​ ಫಿಕ್ಸ್​ ಆಗಿದೆ. ನಿಮ್ಮಿಷ್ಟದ ಪ್ರೇಮಿ ಸಿಗಲು ಅತಿ ಹೆಚ್ಚು ರೇಟ್​ ಫಿಕ್ಸ್ ಮಾಡಲಾಗಿದೆ. ಇದಕ್ಕೆ 49 ರೂಪಾಯಿ ಇದೆ. ಒಂಟಿತನ ಹೋಗಲಾಡಿಸಲು 20 ರೂಪಾಯಿ ಫಿಕ್ಸ್​ ಮಾಡಲಾಗಿದೆ.
ಇನ್ನೂ ವಿಶೇಷ ಎಂದರೆ, ಹೆಂಡತಿಯನ್ನು ಕರೆದುಕೊಂಡು ಬಂದು ಇಲ್ಲಿಯ ಚಹದ ಡೆಮೋ ತೋರಿಸಿದರೆ ಅಂಥವರಿಗೆ ಉಚಿತವಾಗಿ ಚಹ ನೀಡಲಾಗುವುದು ಎಂದೂ ಬರೆಯಲಾಗಿದೆ!
ಈ ಟೀ ಸ್ಟಾಲ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಸ್ಟಾಲ್​ಗೆ ಭಾರಿ ಡಿಮಾಂಡ್​ ಬಂದಿದೆಯಂತೆ.
ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?

ಎಲ್ಲರಂಥಲ್ಲ ಈ ವೈದ್ಯೆ: 10 ರೂಪಾಯಿ ಕೊಟ್ಟರೆ ಸಾಕು, ಕಾಯಿಲೆಗಳೆಲ್ಲವೂ ವಾಸಿ!

ನಾಯಿಗಳನ್ನು ಕೊಂದು ಮರದ ಮೇಲೆ ನೇತುಹಾಕಿರುವ ಭಯಾನಕ ವಿಡಿಯೋ ವೈರಲ್​

VIDEO: ಪತ್ನಿ ಹುಟ್ಟುಹಬ್ಬಕ್ಕೆ ವಿದೇಶ ಪ್ರವಾಸದ ಬದಲು ಪ್ರತಿಭಟನಾ ರೈತರಿಗೆ ಉಚಿತ ಕ್ಷೌರ, ಮಸಾಜ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 12 =
Remember me
