ಚೆನ್ನೈ:ಇಬ್ಬರು ಯುವತಿಯರ ನಡುವೆ ಪ್ರೇಮ ಪ್ರಕರಣ ಇದೀಗ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳೇ ಸ್ವಲ್ಪ ಗೊಂದಲಕ್ಕೀಡಾದ ಘಟನೆ ನಡೆದಿದೆ.
ಬಿ.ಎಸ್ಸಿ ಮುಗಿಸಿ, ಪ್ರಸ್ತುತ ಎಂಬಿಎ ವ್ಯಾಸಂಗ ಮಾಡುತ್ತಿರುವ 22 ವರ್ಷದ ಯುವತಿ ಹಾಗೂ ಇನ್ನೊಬ್ಬಳು 20 ವರ್ಷದಾಕೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಈ ಸಲಿಂಗಿಗಳ ಪ್ರೇಮ ವಿವಾಹಕ್ಕೆ ಮನೆಯವರ ವಿರೋಧವಿದೆ. ಅದಕ್ಕಾಗಿ ಪಾಲಕರಿಂದ ರಕ್ಷಣೆ ಕೋರಿ ಇಬ್ಬರೂ ಕೋರ್ಟ್​ ಮೊರೆ ಹೋಗಿದ್ದಾರೆ.
ಒಂದೆಡೆ ಜಪ್ಪಯ್ಯ ಎಂದರೂ ಒಬ್ಬರನ್ನೊಬ್ಬರು ಬಿಟ್ಟುಕೊಡದ ಈ ಸಲಿಂಗಿ ಪ್ರೇಮಿಗಳು, ಇನ್ನೊಂದೆಡೆ ತಮ್ಮ ಮಕ್ಕಳ ಇಂಥ ಸ್ಥಿತಿ ಕಂಡು ರೋಧಿಸುತ್ತಿರುವ ಪಾಲಕರು… ಇವರ ನಡುವೆ ನ್ಯಾಯಮೂರ್ತಿಗಳಿಗೆ ಸ್ವಲ್ಪ ಗೊಂದಲವಾಗಿದ್ದು, ಸದ್ಯ ವಿಚಾರಣೆಯನ್ನು ಮುಂದೂಡಿದ್ದಾರೆ.
ಈ ಪ್ರಕರಣದಲ್ಲಿ ದಿಢೀರ್​ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಈ ಇಬ್ಬರು ಯುವತಿಯರ ಜತೆಗೆ ಪಾಲಕರಿಗೂ ಕೌನ್ಸೆಲಿಂಗ್​ ಅಗತ್ಯವಿದೆ. ಆದ್ದರಿಂದ ಕೌನ್ಸೆಲಿಂಗ್​ ನೀಡಲಾಗುವುದು. ಯುವತಿಯರು ಹಾಗೂ ಅವರ ಹೆತ್ತವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುವುದು. ಅದರ ಬಳಿಕವೇ ಪ್ರಕರಣದ ಬಗ್ಗೆ ತೀರ್ಪು ನೀಡಲಾಗುವುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಈ ಇಬ್ಬರು ಯುವತಿಯರು ಕಳೆದ 2 ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯವಿದ್ದು, ಇಬ್ಬರ ನಡುವಿನ ಸ್ನೇಹವು ಕ್ರಮೇಣ ಪ್ರೀತಿಗೆ ತಿರುಗಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸುತ್ತಿರುವುದಾಗಿ ಕೋರ್ಟ್​ಗೆ ಹೇಳಿದ್ದಾರೆ. ಆದರೆ ಇದನ್ನು ಪಾಲಕರು ಒಪ್ಪದೇ ವಾಪಸ್​ ಮನೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಈ ಇಬ್ಬರು ಯುವತಿಯರು ಎಲ್ಲಿ ನೆಲೆಸಿದ್ದರೂ ಅಲ್ಲಿಗೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಕಾರಣ, ರಕ್ಷಣೆ ಕೋರಿ ಇಬ್ಬರೂ ಕೋರ್ಟ್​ ಮೊರೆ ಹೋಗಿದ್ದಾರೆ.
ಪ್ರಸಿದ್ಧ ಕೌನ್ಸೆಲರ್​ ಹಾಗೂ ಮನೋಶಾಸ್ತ್ರಜ್ಱರಾಗಿರುವ ಡಾ.ವಿದ್ಯಾ ದಿನಕರನ್​ ಅವರ ಬಳಿಗೆ ಯುವತಿಯರು ಹಾಗೂ ಪಾಲಕರನ್ನು ಕಳುಹಿಸಿರುವ ನ್ಯಾಯಮೂರ್ತಿಗಳು ಕೌನ್ಸೆಲಿಂಗ್​ ನೆರವೇರಿಸಿ ಆ ಬಗ್ಗೆ ಕೋರ್ಟ್​ಗೆ ವರದಿ ನೀಡುವಂತೆ ಹೇಳಿದ್ದಾರೆ.(ಏಜೆನ್ಸೀಸ್​)
ಮಸ್ಕಿ ಉಪಚುನಾವಣೆ ಗುದ್ದಾಟ- ಸಚಿವರನ್ನು ಹೊರಕ್ಕಿಡಿ ಎಂದ ಕಾಂಗ್ರೆಸ್​ನಿಂದ ಚುನಾವಣಾ ಆಯೋಗಕ್ಕೆ ದೂರು

10ನೇ ತರಗತಿ ಪಾಸ್​ ಆಗಿದ್ದೀರಾ? ಹಾಗಿದ್ದರೆ ನರೇಗಾ ಯೋಜನೆ ಅಡಿ ಕಾಯಕಮಿತ್ರ ಹುದ್ದೆಗಳಿಗೆ ಆಹ್ವಾನ

ಮಾರುಕಟ್ಟೆ ಪ್ರವೇಶಕ್ಕೆ ಐದು ರೂಪಾಯಿ ಶುಲ್ಕ- ಒಂದು ಗಂಟೆಗಿಂತ ಹೆಚ್ಚಿಗೆ ಇದ್ದರೆ 500 ರೂ ದಂಡ!

ಅಂಗದಾನಕ್ಕೆ ವೈದ್ಯರು ಸಜ್ಜಾಗುತ್ತಿದ್ದಂತೆಯೇ ಎದ್ದು ಕುಳಿತ ‘ಮೃತ’ ಯುವಕ- ಕಂಗಾಲಾದ ಡಾಕ್ಟರ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 2 =
Remember me
