ಮುಂಬೈ:ತನ್ನನ್ನು ಬಿಟ್ಟು ಹೋದ ಪ್ರಿಯಕರನನ್ನು ವಾಪಸ್​ ಪಡೆಯುವುದಕ್ಕಾಗಿ ಮಂತ್ರವಾದಿಯ ಮೊರೆ ಹೋದ ಯುವತಿಯೊಬ್ಬಳು 4.57 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನವಿಮುಂಬೈನಲ್ಲಿ ನಡೆದಿದೆ.ಉತ್ತರಪ್ರದೇಶದ ಮೀರತ್ ಮೂಲದ ಬಾಬಾ ಕರೀಂ ಖಾನ್ ಬೆಂಗಾಲಿ ಅಲಿಯಾಸ್ ವಾಸಿಂ ಖಾನ್ ಎಂಬಾತನಿಗೆ ಖರ್ಗಾರ್​ನ ನಿವಾಸಿಯಾಗಿರುವ 26 ವರ್ಷದ ಯುವತಿ ಹಣ ನೀಡಿ ಮೋಸಹೋಗಿದ್ದಾಳೆ. ಯುವತಿ ಒಬ್ಬಾತನನ್ನು ಪ್ರೀತಿಸುತ್ತಿದ್ದಳು. ಅವನು ಬಿಟ್ಟುಹೋಗಿದ್ದ.
ಆತ ವಾಪಸ್​ ಬರಬೇಕು ಎಂದು ಕೋರಿದ್ದ ಯುವತಿಗೆ ಸಿಕ್ಕಿದ್ದು ಈ ಬಾಬಾ. ಪ್ರಿಯಕರ ಬಂದೇ ಬರುತ್ತಾನೆ. ಅದಕ್ಕಾಗಿ ವಿಶೇಷ ಪೂಜೆ ಮಾಡಿಕೊಡುವೆ ಎಂದು ನಂಬಿಸಿ ಆಕೆಯಿಂದ ಕಂತುಗಳಲ್ಲಿ 4.57 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದಾನೆ. ಆದರೆ ಪ್ರಿಯಕರನೂ ಬರಲಿಲ್ಲ. ಲಕ್ಷಾಂತರ ದುಡ್ಡು ವಾಪಸ್ಸಾಗಲಿಲ್ಲ. ನಂತರ ಯುವತಿಗೆ ಮೋಸ ಹೋಗಿದ್ದು ತಿಳಿದು ದೂರು ನೀಡಿದ್ದಾಳೆ.
ರೈಲುಗಳ ಒಳಗೆ ಈ ಬಾಬಾನ ಪೋಸ್ಟರ್​ ನೋಡಿದ್ದ ಯುವತಿ ಬ್ಲ್ಯಾಕ್​ ಮ್ಯಾಜಿಕ್ ಮಾಡಿ ತನ್ನ ಪ್ರಿಯಕರನನ್ನು ಮರಳಿ ಪಡೆಯಬಹುದೆಂದು ನಂಬಿ ಈತನ ಬಳಿ ಹೋಗಿರುವುದಾಗಿ ಹೇಳಿದ್ದಾಳೆ. ದುಡ್ಡನ್ನು ವಾಪಸ್ ಕೊಡುವಂತೆ ಸಂತ್ರಸ್ತೆಗೆ ಕೇಳಿದಾಗ ಆಕೆ ಬೆದರಿಕೆಯೊಡ್ಡಿ ಪೊಲೀಸರಿಗೆ ದೂರು ಕೊಟ್ಟಲ್ಲಿ ರಸ್ತೆ ಅಪಘಾತದಲ್ಲಿ ಸಾಯುವಂತೆ ಮಾಟ ಮಾಡುವುದಾಗಿ ಹೆದರಿಸಿದ್ದ ಎಂದು ವಿವರಿಸಿದ್ದಾಳೆ.
ಜೈಲಿನ ಸಿಬ್ಬಂದಿ ಮುಖಕ್ಕೆ ಕಾರದ ಪುಡಿ ಎರಚಿ ಏಳು ಮಂದಿ ಕೈದಿಗಳು ಎಸ್ಕೇಪ್‌

ಭಾರತದಲ್ಲಿ ಜನಸಂಖ್ಯಾ ಸ್ಫೋಟ- ನಟ ಆಮೀರ್‌ ಖಾನ್‌ ವಿರುದ್ಧ ಬೊಟ್ಟು ಮಾಡಿದ ಸಂಸದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
