ಔರಂಗಾಬಾದ್​:ಯಾವುದೇ ಸಮಾನತೆ ಬಯಸದೇ, ಪುರುಷರ ವಿರುದ್ಧ ಯಾವುದೇ ರೀತಿಯಲ್ಲಿ ಹೋರಾಟಕ್ಕಿಳಿಯದೇ ಮೌನವಾಗಿದ್ದುಕೊಂಡೇ ಅದೆಷ್ಟೋ ಮಹಿಳೆಯರು ಇಂದು ಅತ್ಯುನ್ನತ ಸ್ಥಾನವನ್ನು ಏರಿದ್ದಾರೆ. ಇರುವ ಅವಕಾಶ ಬಳಸಿಕೊಂಡು, ಯಾವ ಪುರುಷನನ್ನೂ ಹೀಗಳಿಯದೇ ತಮ್ಮ ಸ್ವಂತ ಬಲ, ಶಕ್ತಿ, ಜಾಣ್ಮೆಯ ಆಧಾರದ ಮೇಲೆ, ಬಂದಿರುವ ಎಲ್ಲಾ ಸಮಸ್ಯೆಗಳನ್ನು ಹಿಮ್ಮೆಟ್ಟಿಸಿ ಸಾಧನೆ ಮಾಡಿರುವ ಮಹಿಳೆಯರು ನಮ್ಮ ಕಣ್ಣಮುಂದಿದ್ದಾರೆ. ಪುರುಷರ ಕ್ಷೇತ್ರ ಎಂದೇ ಗುರುತಿಸಿಲ್ಪಟ್ಟಿದ್ದ ಎಷ್ಟೋ ಹುದ್ದೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ ಮಹಿಳೆಯರು.
ಅದೇ ಇನ್ನೊಂದೆಡೆ ತಮಗೆ ಪುರುಷರು ಅವಕಾಶವೇ ಕೊಡುತ್ತಿಲ್ಲ ಎಂದು ಅವರ ಮೇಲೆ ಆರೋಪಿಸುತ್ತಾ, ಬೀದಿಗಿಳಿದು ಹೋರಾಟ ಮಾಡುವವರೂ ಇದ್ದಾರೆ. ಇದೇ ಕಾರಣಕ್ಕೆ ಪುರುಷ ಎಂದರೆ ದೌರ್ಜನ್ಯ ಮಾಡುವವನು, ಮಹಿಳೆ ಎಂದರೆ ದೌರ್ಜನ್ಯ ಸಹಿಸಿಕೊಳ್ಳುವವಳು ಎಂದೇ ಬಿಂಬಿತವಾಗುವಂಥ ವಾತಾವರಣ ಸೃಷ್ಟಿಯಾಗಿದೆ. ಆದರೆ ನಾವು ದೌರ್ಜನ್ಯ ಮಾಡುವವರಲ್ಲ, ಬದಲಿಗೆ ಮಹಿಳೆಯರಿಂದ ದೌರ್ಜನ್ಯ ಸಹಿಸಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ ಎನ್ನುತ್ತಿದ್ದಾರೆ ಕೆಲವು ಪುರುಷರು. ಅದಕ್ಕಾಗಿ ಮಹಿಳೆಯರಿಗೆ ತಿರುಗೇಟು ನೀಡಲು ಅರಳಿ ಮರಕ್ಕೆ ಪೂಜೆ ಸಲ್ಲಿಸಿ ತಮ್ಮ ತಮ್ಮ ಪತ್ನಿಯ ವಿರುದ್ಧ ದೇವರಲ್ಲಿ ಮೊರೆ ಹೋಗಿರುವ ಕುತೂಹಲದ ಘಟನೆ ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ.
ವೈಫ್ ವಿಕ್ಟಿಮ್ಸ್ ಮೆನ್ಸ್ ಅಸೋಸಿಯೇಷನ್ (ಪತ್ನಿಯರಿಂದ ಸಂತ್ರಸ್ತರಾಗಿರುವ ಪುರುಷರ ಸಂಘ) ಕಾರ್ಯಕರ್ತರು ನನಗೆ ನನ್ನ ಪತ್ನಿ ಬೇಡವೆಂದು ಅರಳಿ ಮರಕ್ಕೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದ್ದಾರೆ. ತಮ್ಮ ಪತಿಗಾಗಿ ಪೂಜಿಸುವ ವಟಸಾವಿತ್ರಿ ಹುಣ್ಣಿಮೆಯ ಮುನ್ನಾ ದಿನ ಹಲವಾರು ಪುರುಷರು ಅರಳಿ ಮರಕ್ಕೆ ಪೂಜೆ ಹಾಕುವ ಮೂಲಕ, ದೇವ್ರೆ… ಪ್ಲೀಸ್​ ನನ್​ ಹೆಂಡ್ತಿಯನ್ನು ವಾಪಸ್​ ಕರೆಸಿಕೊಂಡು ಬಿಡು, ಇವಳ ಸಹವಾಸ ಸಾಕಾಗಿದೆ ಎಂದು ಪೂಜೆ ಸಲ್ಲಿಸಿದ್ದಾರೆ!
ವಟ ಸಾವಿತ್ರಿ ಪೌರ್ಣಿಮೆಯಂದು ಮಹಿಳೆಯರು ಅರಳಿ ಮರವನ್ನು ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ದೇವರ ಮುಂದೆ ಇಡುವುದು ವಾಡಿಕೆ. ಅರಳಿ ಮರವನ್ನು ಪೂಜಿಸುವ ಮೂಲಕ ಮಹಿಳೆಯರು ತಮ್ಮ ಚೆನ್ನಾಗಿ ನೋಡಿಕೊಳ್ಳುವ ಗಂಡನನ್ನು ಮುಂದಿನ ಏಳು ಜನ್ಮವೂ ನೀಡುವಂತೆ ಆ ದೇವರನ್ನು ಕೇಳುತ್ತಾರೆ. ಆದರೆ, ಕೆಲ ಮಹಿಳೆಯರಿಗೆ ಈ ಹಕ್ಕು ಇಲ್ಲ ಎಂದು ವೈಫ್ ವಿಕ್ಟಿಮ್ಸ್ ಮೆನ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಭರತ್ ಫುಲಾರಿ ಆರೋಪಿಸಿದ್ದಾರೆ.
ಈ ಸಂಘಟನೆ ಹೆಂಡತಿಯಿಂದ ತೊಂದರೆಗೊಳಗಾದ ಪುರುಷರ ಪರವಾಗಿ ಹೋರಾಡುತ್ತದೆ. ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಕಾನೂನುಗಳನ್ನು ಜಾರಿಗೆ ತರಲಾಗಿದೆ.ಆ ಕಾನೂನುಗಳನ್ನು ಆಧರಿಸಿ ಗಂಡ ಮತ್ತು ಆತನ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತದೆ. ಭಾರತವು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾಗಿದೆ. ಆದರೆ, ಈ ಏಕಪಕ್ಷೀಯ ಕಾನೂನು ಪುರುಷರನ್ನು ಮಹಿಳೆಯರ ಗುಲಾಮರನ್ನಾಗಿ ಮಾಡಿಸುತ್ತಿದೆ. ಆದ್ದರಿಂದ ಪುರುಷರು ಸಬಲರಾಗಬೇಕು ಎಂದು ವೈಫ್ ವಿಕ್ಟಿಮ್ಸ್ ಮೆನ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಭರತ್ ಫುಲಾರಿ ಆಗ್ರಹಿಸಿದ್ದಾರೆ.
ಕೆಲ್ಸಕ್ಕೆ ಹೋಗೋದು, ಬಿಡೋದು ಪತ್ನಿ ಇಷ್ಟ- ನೀವದನ್ನು ಕೇಳೋಹಾಗಿಲ್ಲ ಎಂದ ಹೈಕೋರ್ಟ್​

ತುಂಬಾ ಒಳ್ಳೆಯ ಪತಿಯಿದ್ದು, ದೈಹಿಕ ಸಂಪರ್ಕಕ್ಕೆ ಒಪ್ಪುತ್ತಿಲ್ಲ ಎಂದ ಮಾತ್ರಕ್ಕೆ ಡಿವೋರ್ಸ್​ ಸಿಗುತ್ತಾ?

ಸಚಿವನ ಪುತ್ರನ ಮೇಲೆ ರೇಪ್​, ಗರ್ಭಪಾತ ಆರೋಪ ಹೊರಿಸಿದಾಕೆಗೆ ಸಾರ್ವಜನಿಕವಾಗಿ ಮಸಿ ಬಳಿದು ವಿಕೃತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
