ಕೊಲ್ಹಾಪುರ (ಮಹಾರಾಷ್ಟ್ರ):ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ಜಲಾಶಯ ಗೇಟ್ ರಿಪೇರಿ ವೇಳೆ ಅವಘಡ ಸಂಭವಿಸಿದ್ದು, ತಾಂತ್ರಿಕ ದೋಷದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದುಬಂದಿದೆ.
ಸುಮಾರು 18 ಅಡಿಗಳಷ್ಟು ಗೇಟ್ ಎತ್ತರಿಸಿ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ, ಅಧಿಕಾರಿಗಳ ಎಡವಟ್ಟಿನಿಂದ ನದಿ ತೀರದ ಜನರು ಕಂಗೆಟ್ಟು ಹೋಗಿದ್ದು, ಇಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.
ವೇದಗಂಗಾ ನದಿ ತೀರದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಕಂಗಾಲಾಗಿ ಹೋಗಿದ್ದಾರೆ. ಅಧಿಕಾರಿಗಳು ಮಾಡಿರುವ ಈ ಎಡವಟ್ಟಿನಿಂದ ಕರ್ನಾಟಕದತ್ತ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಒಟ್ಟಾರೆ ಎಂಟು ಟಿ ಎಂ‌ ಸಿ ಸಾಮರ್ಥ್ಯ ಇರುವ ಜಲಾಶಯ ಇದಾಗಿದೆ. ಆರು ಗೇಟ್‌ಗಳ ಪೈಕಿ ಒಂದು ಗೇಟ್ ದುರಸ್ಥಿ ಮಾಡುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.(ದಿಗ್ವಿಜಯ ನ್ಯೂಸ್‌)
ಇಲ್ಲಿದೆ ನೋಡಿ ವಿಡಿಯೋ:
ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ಜಲಾಶಯ ಗೇಟ್ ರಿಪೇರಿ ವೇಳೆ ಅವಘಡ ಸಂಭವಿಸಿದ್ದು, ತಾಂತ್ರಿಕ ದೋಷದಿಂದ ಅಪಾರ ಪ್ರಮಾಣದ ನೀರು ಕರ್ನಾಟಕದತ್ತ ಧಾವಿಸಿ ಬರುತ್ತಿದೆ.pic.twitter.com/2KjyNeevy1
— Vijayavani (@VVani4U)December 29, 2021

ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…

‘ನಮಗೆ ಕೋಟಿಯಷ್ಟು ಮತಹಾಕಿ, 50-70 ರೂ.ಗೆ ಕ್ವಾರ್ಟರ್‌ ಬಾಟಲ್‌ ತಗೊಂಡು ಎನ್‌ಜಾಯ್‌ ಮಾಡಿ…’

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × four =
Remember me
