ಮುಂಬೈ:ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಕ್ಷಣ ಕ್ಷಣಕ್ಕೂ ಕುತೂಹಲದ ತಿರುವು ಪಡೆದುಕೊಳ್ಳುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಬಂಡಾಯವೆದ್ದಿರುವ ಒಬ್ಬರೇ ಒಬ್ಬ ಶಾಸಕ ಹೇಳಿದರೂ ನಾನು ರಾಜೀನಾಮೆ ಕೊಡಲು ಸಿದ್ಧ ಎಂದಿದ್ದಾರೆ.
ಈ ನಡುವೆಯೇ, ಕುತೂಹಲದ ಘಟ್ಟವೊಂದರಲ್ಲಿ, ಮಹಾರಾಷ್ಟ್ರ ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಗುಂಪಿನಿಂದ ಇನ್ನೋರ್ವ ಶಾಸಕ ತಪ್ಪಿಸಿಕೊಂಡು ಬಂದಿದ್ದಾರೆ. ರಾತ್ರೋರಾತ್ರಿ ಕಾಣೆಯಾಗಿದ್ದು ಶಿಂಧೆ ಜತೆಯಲ್ಲಿ ಕಾಣಿಸಿಕೊಂಡಿದ್ದ ಶಿವಸೇನೆ ಶಾಸಕ ನಿತಿನ್‌ ದೇಶ್‌ಮುಖ್‌ ಏಕಾಏಕಿ ಪ್ರತ್ಯಕ್ಷರಾಗಿದ್ದು, ಉದ್ಧವ್‌ ಠಾಕ್ರೆ ಬಳಿ ಬಂದಿದ್ದಾರೆ. ತಾವು ಠಾಕ್ರೆ ಪರ ಎಂದು ಹೇಳಿಕೊಂಡಿದ್ದರು.
ನಾನು ಶಿಂಧೆ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನನ್ನನ್ನು ಕಿಡ್ನ್ಯಾಪ್‌ ಮಾಡಿಕೊಂಡು ಗುಜರಾತ್‌ನ ಸೂರತ್‌ಗೆ ಕರೆದುಕೊಡು ಹೋಗಿದ್ದರು. ಮಧ್ಯರಾತ್ರಿ ಹೇಗೋ ತಪ್ಪಿಸಿಕೊಂಡು ಬಂದೆ. ನಸುಕಿನ 3 ಗಂಟೆ ವೇಳೆ ರಸ್ತೆ ಬದಿಗೆ ಬಂದು, ವಾಹನಕ್ಕಾಗಿ ಕಾಯುತ್ತಿದ್ದೆ. ಈ ಸಂದರ್ಭದಲ್ಲಿ ನೂರಾರು ಪೊಲೀಸರು ಸುತ್ತುವರಿದು ಆಸ್ಪತ್ರೆ ಸೇರಿಸಿದರು. ನನಗೆ ಹೃದಯಾಘಾತ ಆಗಿದೆ ನಾಟಕ ಮಾಡಿ ನನ್ನನ್ನು ಉಪಚರಿಸಿದಂತೆ ನಾಟಕ ಮಾಡಿದರು. ನನಗೆ ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಅವರು ನನ್ನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು’ ಎಂದು ದೇಶ್‌ಮುಖ್‌ ತಿಳಿಸಿದ್ದರು.
ಇದರ ನಡುವೆ ಇದೀಗ, ಮತ್ತೋರ್ವ ಶಾಸಕ ಕೈಲಾಸ್​ ಪಾಟೀಲ್​ ಕೂಡ ಶಿಂಧೆ ಹಿಡಿತದಿಂದ ವಾಪಸ್​ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಕೈಲಾಸ್​ ಪಾಟೀಲ್​ ಹೇಳಿದ್ದೇನು?ತಮಗೆ ಅರಿವಿಲ್ಲದೇ ಶಿಂಧೆಯವರು ತಮ್ಮನ್ನು ಕರೆದುಕೊಂಡು ಹೋಗಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ನಾನು ಮೊದಲು ನಮ್ಮನ್ನು ಥಾಣೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಭಾವಿಸಿದ್ದೆ. ನನ್ನ ಜತೆ ಇನ್ನೂ ಹಲವು ಶಾಸಕರು ಇದ್ದರು. ಆದರೆ ಎಲ್ಲೋ ಏನೋ ಎಡವಟ್ಟಾಗುತ್ತಿದೆ ಎಂದು ತಿಳಿದದ್ದು ನಮ್ಮ ವಾಹನ ದಾರಿಯನ್ನು ಬದಲಿಸಿದಾಗ.
ಮೀರಾ ರಸ್ತೆಯ ಘೋಡ್‌ಬಂದರ್ ರಸ್ತೆಯಿಂದ ಗುಜರಾತ್ ಕಡೆಗೆ ಗಾಡಿ ಸಾಗಿತು. ಆಗಲೇ ನನಗೆ ಅನುಮಾನ ಶುರುವಾಯಿತು. ಬಿಜೆಪಿ ಆಡಳಿತದ ಪಕ್ಕದ ರಾಜ್ಯ ಗುಜರಾತ್​ಗೆ ಪ್ರವೇಶಿಸುವ ಮೊದಲೇ ನಾನು ಮಹಾರಾಷ್ಟ್ರ-ಗುಜರಾತ್ ಗಡಿಯ ಚೆಕ್ ಪೋಸ್ಟ್ ಬಳಿ ಇಳಿದೆ. ನಂತರ ಅಲ್ಲಿಂದ ಕತ್ತಲೆಯಲ್ಲಿ ಮುಂಬೈ ಕಡೆಗೆ ಐದು ಕಿಲೋ ಮೀಟರ್‌ಗಳಷ್ಟು ದೂರ ನಡೆದುಕೊಂಡೇ ಬಂದೆ. ನಂತರ ಬೈಕ್​ನಲ್ಲಿ ಮುಂಬೈ ಬಂದು ಸೇರಿದ್ದೇನೆ ಎಂದಿದ್ದಾರೆ.
ಮುಂಬೈಗೆ ಬಂದ ಬಳಿಕ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರನ್ನು ಬಿಗಿ ಭದ್ರತೆಯಲ್ಲಿ ತೆರಳಿ ಭೇಟಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ರಾಜೀನಾಮೆ ಕೊಡಲು ಸಿದ್ಧ, ಆದರೆ… ಫೇಸ್​ಬುಕ್​ ಲೈವ್​ನಲ್ಲಿ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದೇನು ನೋಡಿ…
‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eleven =
Remember me
