ಮುಂಬೈ:ಒಂದು ರೀತಿಯ ವಿಚಿತ್ರ ಕೇಸ್​ ಮಹಾರಾಷ್ಟ್ರದಲ್ಲಿ ನಡೆದಿದೆ. ಕಾಂಗ್ರೆಸ್​ನ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ್ ಮುಂಡೆ ವಿರುದ್ಧ ಕೇಳಿಬಂದಿರುವ ಅತ್ಯಾಚಾರದ ಕೇಸ್​ ಇದು. ಇವರ ವಿರುದ್ಧ ಗಾಯಕಿ ರೇಣು ಶರ್ಮಾ ದೂರು ದಾಖಲು ಮಾಡಿದ್ದರೆ, ಇದಕ್ಕೆ ಪ್ರತಿಯಾಗಿ ಸಚಿವರು ಇನ್ನೊಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ಅದೇನೆಂದರೆ ಗಾಯಕಿ ರೇಣು ಅವರು, ಮುಂಡೆ ವಿರುದ್ಧ ಅತ್ಯಾಚಾರದ ಕೇಸ್​ ದಾಖಲು ಮಾಡಿದ್ದಾರೆ. ಸಚಿವರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವೀಸ್​ ಅವರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ನನಗೆ ಜೀವಬೆದರಿಕೆ ಇದೆ. ಪ್ರಭಾವ ಬಳಸಿ ಕಾಂಗ್ರೆಸ್​ ಸಚಿವ ಮುಂಡೆ ನನ್ನ ಜೀವಕ್ಕೆ ಅಪಾಯ ತಂದಿಟ್ಟಿದ್ದಾರೆ ಎಂದು ಗಾಯಕಿ ದೂರಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ವಿಷಯವನ್ನು ಅವರು ಶೇರ್​ ಮಾಡಿದ್ದಾರೆ.
I have lodged complaint of Rape@MumbaiPolice@CPMumbaiPoliceagainst#DhananjayMundeno action till now@PawarSpeaks@supriya_sule@UdhavThackeray. Oshiwara police station is not even accepting my written complaint@Dev_Fadnavismy life is in threat please help@narendramodipic.twitter.com/mf4ZlHxd6A
— renu sharma (@renusharma018)January 11, 2021

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಮುಂಡೆ, ಗಾಯಕಿ ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದ್ದಾರೆ.2003ರವರೆಗೂ ನಾನು ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದೆ, ನಮಗೆ ಇಬ್ಬರು ಮಕ್ಕಳಿದ್ದಾರೆ. ಮನೆಯವರೂ ಕೂಡ ನಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದ್ದರು. ಇದೀಗ ಅಕ್ಕ-ತಂಗಿ ಸೇರಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಧನಂಜಯ್ ಮುಂಡೆ ಹೇಳಿದ್ದಾರೆ.
ಈ ಕುರಿತು ತಾವು ಕೂಡ ಪೊಲೀಸರಲ್ಲಿ ದೂರು ದಾಖಲು ಮಾಡಿರುವುದಾಗಿ ಹೇಳಿದ್ದಾರೆ. ಈ ನಡುವೆಯೇ ತಮ್ಮಿಬ್ಬರ ನಡುವೆ ದೈಹಿಕ ಸಂಪರ್ಕ ಇತ್ತು ಎಂದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಬಿಜೆಪಿ ಮಹಿಳಾ ಘಟಕದವರು ಸಿಎಂ ಉದ್ಧವ್ ಠಾಕ್ರೆಯವರಿಗೆ ಪತ್ರೆ ಬರೆದಿದ್ದು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದ್ದಾರೆ.
ಹಕ್ಕಿಜ್ವರದ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ: ಶುರುವಾಗಿದೆ ಟೆನ್ಷನ್​!

ತವರಿಗೆ ಹೋದ ವಧುವಿಗಾಗಿ ಇತ್ತ ವರ ಕಾಯುತ್ತಿದ್ದರೆ, ಅತ್ತ ಆಕೆ ಲವರ್​ ಜತೆ ಎಸ್ಕೇಪ್​!

VIDEO: ಬೆಲ್ಲಿ ಡಾನ್ಸ್​ ಹರಿಬಿಟ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ ನಟಿ ಜಾಹ್ನವಿ ಕಪೂರ್​

ಕೆಜಿಎಫ್ 2 ಟೀಸರ್​ ಬಿಡುಗಡೆ ಬೆನ್ನಲ್ಲೇ ಯಶ್​ಗೆ ಬಿಗ್​ ಶಾಕ್​- ನೋಟಿಸ್​ ನೀಡಿದ ಆರೋಗ್ಯ ಇಲಾಖೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
