ಚಂದ್ರಾಪುರ (ಮಹಾರಾಷ್ಟ್ರ):ಕೋವಿಡ್‌ ಲಸಿಕೆ ಹಾಕಿಸಿಕೊಂಡರೆ ಎಲ್‌ಇಡಿ ಟಿವಿ, ಫ್ರಿಜ್‌, ವಾಷಿಂಗ್‌ ಮಷಿನ್‌ ಪಡೆಯುವ ಭಾಗ್ಯ ದೊರಕಲಿದೆ. ಆದ್ದರಿಂದ ಲಸಿಕೆ ಹಾಕಿಸಿಕೊಳ್ಳಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ…
ಹೀಗೆಂದು ಆಫರ್‌ ನೀಡಿರುವುದು ಮಹಾರಾಷ್ಟ್ರದ ಚಂದ್ರಾಪುರ ನಗರಸಭೆ. ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಜನರು ಇಂದಿಗೂ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ಜನರನ್ನು ಹೆಚ್ಚು ಹೆಚ್ಚು ಉತ್ತೇಜಿಸುವ ಸಲುವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ನಗರಸಭೆ ಹೀಗೊಂದು ಆಫರ್‌ ನೀಡಿದೆ.
ಏನಿದು ಆಫರ್‌?ನಗರಸಭೆ ವತಿಯಿಂದ ಲಕ್ಕಿಡ್ರಾ ಶುರುಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಟಿಕೆಟ್‌ ನೀಡಲಾಗುವುದು. ನ.12 ರಿಂದ 24ರವರೆಗೆ ಈ ಲಕ್ಕಿಡ್ರಾ ಯೋಜನೆ ಚಾಲ್ತಿಯಲ್ಲಿ ಇರಲಿದೆ. ನಂತರ ಅದನ್ನು ಡ್ರಾ ಮಾಡಲಾಗುವುದು. ಮೊದಲ ಬಹುಮಾನವಾಗಿ ರೆಫ್ರಿಜರೇಟರ್‌, ಎರಡನೇ ಬಹುಮಾನವಾಗಿ ವಾಷಿಂಗ್‌ ಮಷಿನ್‌ ಮತ್ತು ಮೂರನೇ ಬಹುಮಾನವಾಗಿ ಎಲ್‌ಇಡಿ ಟಿವಿ ಇಡಲಾಗಿದೆ. ಮಾತ್ರವಲ್ಲದೇ ಸಮಾಧಾನಕರ ಬಹುಮಾನವಾಗಿ 10 ಜನರಿಗೆ ಮಿಕ್ಸರ್‌-ಗ್ರೈಂಡರ್‌ ನೀಡಲಾಗುವುದು.
ಚಂದ್ರಾಪುರದಲ್ಲಿ 1.93 ಲಕ್ಷ ಜನರು ಕೋವಿಡ್ ಮೊದಲ ಡೋಸ್‌ ಹಾಗೂ 99 ಸಾವಿರ ಜನ ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ ಅನೇಕ ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಈ ಆಫರ್‌ ನೀಡಲಾಗಿದೆ.
ಗುಂಡು ಹಾರಿಸಿಕೊಂಡು ಶಾಸಕನ ಮಗ ಆತ್ಮಹತ್ಯೆ: ಸಾಯುವ ಮುನ್ನ ಗೆಳೆಯರಿಗೆ ಕರೆ ಮಾಡಿದ್ದ ಯುವಕ

ಈಗಾಗ್ಲೇ ನಾಲ್ಕು ಮಕ್ಕಳಿವೆ… ಮನೆಯಲ್ಲಿದ್ದರೆ ಇನ್ನೂ ಹೆಚ್ಚಾಗೋ ಭಯ ಎಂದ ನಟ ಸೈಫ್‌ ಅಲಿ ಖಾನ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − sixteen =
Remember me
