ನವದೆಹಲಿ:ಮಹೀಂದ್ರಾ ಗ್ರೂಪ್​ ಭರ್ಜರಿ ಆಫರ್​ ನೀಡಿದೆ. ಉಚಿತವಾಗಿ  ಮಹೀಂದ್ರಾ ವಾಹನದ ಸ್ಕೇಲ್​ ಮಾಡೆಲ್​ (ಪ್ರತಿಕೃತಿ) ನಿಮ್ಮದಾಗಿಸಿಕೊಳ್ಳುವ ಯೋಜನೆಯೊಂದನ್ನು ಮಹೀಂದ್ರಾ ನೀಡಿದ್ದು, ಈ ಬಗ್ಗೆ ತನ್ನ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.
ಅದಕ್ಕೆ ನೀವು ಹೆಚ್ಚೇನೂ ಮಾಡಬೇಕಿಲ್ಲ. ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಆಯಿತು. ಅದೇನೆಂದರೆ, ಇಲ್ಲಿ ಇರುವ ಕೋತಿಯ ಚಿತ್ರಕ್ಕೆ ನೀವೊಂದು ಕ್ಯಾಪ್ಷನ್​ (ಶೀರ್ಷಿಕೆ) ನೀಡಬೇಕು. ಫೋಟೋದಲ್ಲಿ ಮಂಗವೊಂದು ಡಿಶ್​ ಮೇಲೆ ಕುಳಿತುಕೊಂಡಿದೆ. ಈ ಫೋಟೋ ನೋಡಿದ ತಕ್ಷಣ ನಿಮಗೆ ಏನು ಹೊಳೆಯುತ್ತದೆ ಎಂಬ ಬಗ್ಗೆ ಮಹೀಂದ್ರಾ ಅವರು ಶೇರ್​ ಮಾಡಿರುವ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಬೇಕು.
In times like these, I can’t think of a better pic for my next caption competition. As always, will look for 2 winners: in Hindi and in English. Again, winners receive scale models of a Mahindra vehicle..Short deadline; all answers to be submitted before 2pm IST 11th Octoberpic.twitter.com/fv6qdcejOl
— anand mahindra (@anandmahindra)October 10, 2020

ಒಂದು ವೇಳೆ ನಿಮ್ಮ ಶೀರ್ಷಿಕೆ ಮಹೀಂದ್ರಾ ಗ್ರೂಪ್​ ಅಧಿಕಾರಿಗಳಿಗೆ ಮೆಚ್ಚುಗೆಯಾದರೆ ನಿಮಗೆ ವಾಹನದ ಸ್ಕೇಲ್​ ಮಾಡೆಲ್​ ಉಚಿತವಾಗಿ ನೀಡಲಿದ್ದಾರಂತೆ. ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ನೀಡಲಾಗಿದೆ.
ಉತ್ತಮ ಶೀರ್ಷಿಕೆಯನ್ನು ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ನೀಡಬೇಕು. ತಮಗೆ ಮೆಚ್ಚುಗೆಯಾಗುವ ಇಬ್ಬರಿಗೆ (ಒಂದು ಹಿಂದಿ ಹಾಗೂ ಇನ್ನೊಂದು ಇಂಗ್ಲಿಷ್​) ಮಹೀಂದ್ರಾ ಕಾರನ್ನು ನೀಡಲಾಗುತ್ತದೆ ಎಂದು ಟ್ವಿಟರ್​ನಲ್ಲಿ ತಿಳಿಸಲಾಗಿದೆ.
ಅಂದ ಹಾಗೆ ಈ ಸ್ಪರ್ಧೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಅಂದರೆ ಇಂದು 2 ಗಂಟೆಗೆ ಸ್ಪರ್ಧೆ ಕ್ಲೋಸ್​. ಆದ್ದರಿಂದ ಬೇಗ ಬೇಗ ಶೀರ್ಷಿಕೆಯನ್ನು ಕೊಟ್ಟು ಅದೃಷ್ಟ ಪರೀಕ್ಷಿಸಿಕೊಳ್ಳಿ.
9ನೇ ಕ್ಲಾಸ್‌ ಹುಡುಗ ಕಿಡ್‌ನ್ಯಾಪ್‌: ‘ಅಪಹರಣಕಾರ’ರನ್ನು ನೋಡಿದ ಪಾಲಕರು, ಪೊಲೀಸರು ಕಕ್ಕಾಬಿಕ್ಕಿ!

ಚಿಂತೆಗೀಡಾಗಿದ್ದ ಆರೋಪಿ ಡಿಕೆಶಿ ಸಂಬಂಧಿಕರಿಗೆ ಹೈಕೋರ್ಟ್‌ನಿಂದ ಸಿಕ್ತು ತಾತ್ಕಾಲಿಕ ರಿಲೀಫ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 1 =
Remember me
