ಕುರ್ದಿಸ್ತಾನ್ (ಇರಾನ್​):ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಇರಾನ್​ನಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿ, ವ್ಯಾನ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆಯ ನಂತರ ಇರಾನ್​ನಲ್ಲಿ ಮಹಿಳೆಯರು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕುರ್ದಿಸ್ತಾನ್ ಪ್ರಾಂತ್ಯದ ಮಹ್ಸಾ ಆಮಿನಿ ಎಂಬ 22 ವರ್ಷದ ಯುವತಿ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವಳು. ಸಂಬಂಧಿಕರನ್ನು ಭೇಟಿಯಾಗಲು ಆಮಿನಿ ಪಶ್ಚಿಮ ಪ್ರಾಂತ್ಯವಾದ ಕುರ್ದಿಸ್ತಾನದಿಂದ ಇರಾನ್​ನ ರಾಜಧಾನಿ ತೆಹರಾನ್​ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆಯರ ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಿ ಹಿಂಸೆ ನೀಡಲಾಗಿತ್ತು. ನಂತರ ಆಕೆ ಮೃತಪಟ್ಟಿದ್ದಳು.
ಈ ಘಟನೆ ನಡೆದ ದಿನದಿಂದಲೂ ಮಹಿಳೆಯರು ಪ್ರತಿಭಟನೆ ಶುರು ಮಾಡಿದ್ದಾರೆ. ಮಹಿಳೆಯರನ್ನು ಬಂಧಿಸಿಟ್ಟಿರುವ ಈ ಹಿಜಾಬ್​, ಸಂಪ್ರದಾಯ ಎಂಬ ಹೆಸರಿನಲ್ಲಿ ಕೂದಲು ಬಿಡುವಂತೆ ಆಗ್ರಹಿಸುವುದು ಎಲ್ಲವೂ ತಪ್ಪು ಎಂದಿರುವ ಮಹಿಳೆಯರು ಬೀದಿಗಿಳಿದು ಹಿಜಾಬ್​ ಕಿತ್ತೆಸೆಯುತ್ತಿದ್ದಾರೆ, ಸಾರ್ವಜನಿಕವಾಗಿಯೇ ಕೂದಲನ್ನು ಕಟ್​ ಮಾಡಿಕೊಳ್ಳುತ್ತಿದ್ದಾರೆ. ಭಾರಿ ಪ್ರಮಾಣದ ಮಹಿಳೆಯರ ಈ ಪ್ರತಿಭಟನೆಗೆ ಮುಸ್ಲಿಂ ರಾಷ್ಟ್ರ ಇರಾನ್​ ಅಲ್ಲೋಲ ಕಲ್ಲೋಲವಾಗಿದೆ.
ಕೆಲವು ದಿನಗಳಿಂದ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ರಸ್ತೆಯ ನಡುವೆ ಬೆಂಕಿ ಹಾಕಿ ಹಿಜಾಬ್​ ಸುಡುತ್ತಿದ್ದಾರೆ. ನಡುರಸ್ತೆಯಲ್ಲಿ ಕತ್ತರಿ ತೆಗೆದುಕೊಂಡು ಕೂದಲು ಕತ್ತರಿಸಿಕೊಳ್ಳುತ್ತಿರುವ ದೃಶ್ಯ ಇರಾನ್​ನಲ್ಲಿ ಈಗ ಸಾಮಾನ್ಯವಾಗಿದೆ.
Do you really want to know how Iranian morality police killed Mahsa Amini 22 year old woman? Watch this video and do not allow anyone to normalize compulsory hijab and morality police.
The Handmaid's Tale by@MargaretAtwoodis not a fiction for us Iranian women. It’s a reality.pic.twitter.com/qRcY0KsnDk
— Masih Alinejad 🏳️ (@AlinejadMasih)September 16, 2022

ಸದ್ಯ ಇರಾನ್​ನಲ್ಲಿ ಇರುವ ಕಾನೂನಿನ ಅನ್ವಯ ಏಳು ವರ್ಷಕ್ಕಿಂತ ಮೇಲ್ಪಟ್ಟವರು ಹಿಜಾಬ್​ ಧರಿಸಬೇಕು. ಕೂದಲು ಕಾಣದಂತೆ ಸಂಪೂರ್ಣವಾಗಿ ಹಿಜಾಬ್​ ಧರಿಸಿಕೊಳ್ಳಬೇಕು, ಕೂದಲನ್ನು ಕೂಡ ಕತ್ತರಿಸಿಕೊಳ್ಳಬಾರದು ಎಂದಿದೆ. ಕೆಲ ತಿಂಗಳಿನಿಂದಲೇ ಇದರ ವಿರುದ್ಧ ಇರಾನ್​ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇದೀಗ ಯುವತಿಯ ಸಾವಿನ ನಂತರ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ.
ಸರ್ಕಾರದ ವಿರುದ್ಧ ಅಲ್ಲಿನ ಮಹಿಳೆಯರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ಸಂಬಂಧ ಕೆಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರತಿಭಟನಾಕಾರರನ್ನು ಹಿಮ್ಮೆಟ್ಟಲು ಇರಾನ್ ಪಡೆಗಳು ಅಶ್ರುವಾಯುಗಳನ್ನು ಬಳಸುತ್ತಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಲಾಗಿದೆ. ಆದರೆ ಯಾವುದಕ್ಕೂ ಮಹಿಳೆಯರು ಜಗ್ಗುತ್ತಿಲ್ಲ.(ಏಜೆನ್ಸೀಸ್​)
https://twitter.com/AlinejadMasih/status/1571479790883946500
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:six + sixteen =
Remember me
