ನವದೆಹಲಿ: ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಾಣದಲ್ಲೀಗ ಭಾರಿ ಟ್ರೋಲ್​ ಆಗ್ತಿದ್ದಾರೆ. ಅದಕ್ಕೆ ಕಾರಣ, ಲೋಕಸಭೆಯಲ್ಲಿ ತಮ್ಮ ಬ್ಯಾಗ್​ ಕೆಳಕ್ಕೆ ಇಟ್ಟಿರುವುದು! ಬ್ಯಾಗ್​ ಕೆಳಕ್ಕಿಟ್ಟರೆ ಟ್ರೋಲ್​ ಆಗುವುದ್ಯಾಕೆ ಅಂತೀರಾ? ಅಲ್ಲೇ ಇರೋದು ವಿಶೇಷ.
ಕೇಂದ್ರ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದಾಗಿ ವಿಪಕ್ಷಗಳು ಲೋಕಸಭೆಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದವು. ಈ ಸಂದರ್ಭದಲ್ಲಿ ಟಿಎಂಸಿಯ ಕಾಕೋಲಿ ಘೋಷ್ ದಸ್ತಿದಾರ್ ಅವರು ಭಾರಿ ಜೋಶ್​ನಲ್ಲಿ ಬೆಲೆ ಏರಿಕೆ ಕುರಿತು ಮಾತನಾಡುತ್ತಿದ್ದರು. ಇಂದಿನ ಬೆಲೆ ಏರಿಕೆಯಿಂದಾಗಿ ಯಾವ ವಸ್ತುಗಳನ್ನೂ ಕೊಂಡುಕೊಳ್ಳುವುದು ಅಸಾಧ್ಯವಾಗಿದೆ. ದುಬಾರಿ ವಸ್ತುಗಳು ದೂರದ ಮಾತು, ದಿನನಿತ್ಯದ ವಸ್ತುಗಳನ್ನೂ ಕೊಂಡುಕೊಳ್ಳುವುದು ಕಷ್ಟವಾಗಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ಇವರ ಮೇಲೆ ಸಹಜವಾಗಿ ಕ್ಯಾಮೆರಾ ಫೋಕಸ್​ ಆಗಿತ್ತು. ಅವರು ಹೀಗೆ ಮಾತನಾಡುತ್ತಿದ್ದಂತೆಯೇ ಅವರ ಪಕ್ಕದಲ್ಲಿ ಕುಳಿತಿದ್ದ ಸಂಸದೆ ಮಹುವಾ ಮೊಯಿತ್ರಾ ತಮ್ಮ ಪಕ್ಕದಲ್ಲಿ ಇಟ್ಟುಕೊಂಡಿದ್ದ ಬ್ಯಾಗ್​ ಅನ್ನು ನಿಧಾನವಾಗಿ ಯಾರಿಗೂ ಕಾಣಿಸದಂತೆ ಕೆಳಕ್ಕಿಟ್ಟರು. ಇದಕ್ಕೆ ಕಾರಣ, ಅವರ ಈ ಹ್ಯಾಂಡ್​ಬ್ಯಾಗ್​ ಒಂದೂವರೆ ಲಕ್ಷ ರೂಪಾಯಿ ಬೆಲೆಬಾಳುವುದ್ದಾಗಿತ್ತು!
ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿರುವಾಗ ತಮ್ಮ ಹ್ಯಾಂಡ್​ಬ್ಯಾಗ್​ ಇಷ್ಟೊಂದು ದುಬಾರಿಯದ್ದು ಎಂದು ಯಾರಾದರೂ ಅಂದುಬಿಟ್ಟರೆ ಎನ್ನುವ ಕಾರಣಕ್ಕೆ ಸಂಸದೆ ಹೀಗೆ ಮಾಡಿದರು. ಆದರೆ ಅಸಲಿಗೆ ಅವರು ಸುಮ್ಮನೇ ಇದ್ದಿದ್ದರೆ ಬಹುಶಃ ಯಾರಿಗೂ ಅವರ ಹ್ಯಾಂಡ್​ಬ್ಯಾಗ್ ಅಥವಾ ಅದರ ಬೆಲೆ ಕುರಿತು ಗಮನ ಹೋಗುತ್ತಿರಲಿಲ್ಲವೇನೋ. ಆದರೆ ಅವರು ಬ್ಯಾಗ್​ ಕೆಳಗಿಟ್ಟು ಅದನ್ನು ಜಗಜ್ಜಾಹೀರಮಾಡಿ ಈಗ ಟ್ರೋಲ್​ ಆಗುತ್ತಿದ್ದಾರೆ! ಈ ವಿಡಿಯೋ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.
ಅಂದಹಾಗೆ ಇದೇ ಸಂಸದೆ ಇತ್ತೀಚೆಗೆ ಕಾಳಿ ದೇವಿಯ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಕಾಳಿಯನ್ನು ಮಾಂಸ ತಿನ್ನುವ, ಮದ್ಯವನ್ನು ಸ್ವೀಕರಿಸುವ ದೇವತೆ ಎಂದು ಕರೆದು ರಾಜಕೀಯ ಬಿರುಗಾಳಿ ಎಬ್ಬಿಸಿದ್ದರು.(ಏಜೆನ್ಸೀಸ್​)
@MahuaMoitrahiding her $2500 ( 2,00,000) louis vuitton bag during price rise debate..😂😂@PoliticalKida@ARanganathan72@smitadeshmukh@Spoof_Junkey@delhichatter@pic.twitter.com/D82a9ph2HM— JaiShriRam ©️ (@thesaviour78)August 1, 2022
@MahuaMoitrahiding her $2500 ( 2,00,000) louis vuitton bag during price rise debate..😂😂@PoliticalKida@ARanganathan72@smitadeshmukh@Spoof_Junkey@delhichatter@pic.twitter.com/D82a9ph2HM
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 7 =
Remember me
