ಮಲೇಷಿಯಾ:ಸೆಲ್ಫಿ ತೆಗೆದುಕೊಳ್ಳುವಾಗ ಸಾಮಾನ್ಯವಾಗಿ ಎಲ್ಲರೂ ಮಂಗನ ಮೂತಿ ಮಾಡುವುದು ಸಾಮಾನ್ಯ. ಅದ್ಯಾಕೆ ಈ ರೀತಿ ಮೂತಿ ಮಾಡುವ ಸೆಲ್ಫಿ ಟ್ರೆಂಡ್​ ಆಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸೆಲ್ಫಿ ಎಂದಾಕ್ಷಣ ಬಹುತೇಕ ಮಂದಿ ಇದೇ ರೀತಿಯ ಪೋಸ್​ ಕೊಡುತ್ತಾರೆ.
ಆದರೆ ಇಲ್ಲೊಂದು ಪ್ರಕರಣದಲ್ಲಿ, ಯುವಕನೊಬ್ಬನ ಕಳೆದುಹೋದ ಮೊಬೈಲ್​ ವಾಪಸ್​ ಸಿಕ್ಕಾಗ ಅದರಲ್ಲಿನ ಗ್ಯಾಲರಿ ಓಪನ್​ ಮಾಡಿದಾಗ ಯುವಕ ಶಾಕ್​ ಆಗಿಹೋಗಿದ್ದಾನೆ. ಏಕೆಂದರೆ ಅಲ್ಲಿಯೂ ಮಂಗನಮೂತಿಯ ಸೆಲ್ಫಿ ಕಂಡಿದೆ. ಒಮ್ಮೆ ನೋಡಿದರೆ ಭಯಾನಕ ಎನಿಸುವಂತಿದ್ದ ಈ ಸೆಲ್ಫಿಯನ್ನು ಸೂಕ್ಷ್ಮವಾಗಿ ನೋಡಿದ ಯುವಕನಿಗೆ ತಿಳಿದದ್ದು ಇದು ನಿಜವಾಗಿಯೂ ಮಂಗ ಖುದ್ದು ತೆಗೆದುಕೊಂಡಿರುವ ಸೆಲ್ಫಿ ಎಂದು!’
Something yang korang takkan jumpa setiap abad. Semalam pagi tido bangun bangun tengahari phone hilang. Cari cari satu rumah geledah sana sini semua takde then last last jumpa casing phone je tinggal bawah katil tapi phonenya takde. Sambung bawah.pic.twitter.com/0x54giujnY
— zack (@Zackrydz)September 13, 2020

ಇದು ನಡೆದಿರುವುದು ಮಲೇಷಿಯಾದಲ್ಲಿ. ಝಾಕ್ರಿಡ್ಜ‌ ರೊಡ್ಜಿ ಎನ್ನುವ 20 ವರ್ಷದ ಯುವಕ ಮನೆಯ ಸಮೀಪ ವಿಹಾರಕ್ಕೆ ಹೋಗಿದ್ದಾಗ ಮೊಬೈಲ್​ ಫೋನ್​ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗಿದ್ದಾನೆ. ಮಾರನೆಯ ದಿನ ನೋಡಿದಾಗ ಪಕ್ಕದಲ್ಲಿ ಫೋನ್​ ಬರಲಿಲ್ಲ.
ಆತಂಕಗೊಂಡ ಆತ ಎಲ್ಲೆಡೆ ಹುಡುಕಾಡಿದರೂ ಅದು ಸಿಗಲಿಲ್ಲ. ಆ ನಂತರ ಇನ್ನೊಂದು ಫೋನ್​ನಿಂದ ಕಳೆದುಹೋದ ಫೋನ್​ಗೆ ರಿಂಗ್ ಮಾಡಿದ್ದಾನೆ. ಆಗ ಅಲ್ಲಿಯೇ ಸಮೀಪವೇ ರಿಂಗ್​ಟೋನ್​ ಕೇಳಿದೆ. ಮಂಗವೊಂದು ಅದನ್ನು ಹಿಡಿದುಕೊಂಡಿತ್ತು.
ಮಂಗ ಓಡಿ ಹೋಗದಂತೆ ಬಹಳ ಕಷ್ಟಪಟ್ಟು, ಹರಸಾಹಸದಿಂದ ಅದರ ಕೈಯಲ್ಲಿದ್ದ ಫೋನ್​ ಅನ್ನು ಪಡೆದುಕೊಳ್ಳುವಲ್ಲಿ ಯುವಕ ಯಶಸ್ವಿಯಾಗಿದ್ದಾನೆ.
ಮಂಗನ ಕೈಯಲ್ಲಿದ್ದ ಫೋನ್​ ಸರಿಯಾಗಿಯೋ, ಇಲ್ಲವೋ ಎಂದು ಪರೀಕ್ಷೆ ಮಾಡುವಾಗ ಅದರ ಫೋಟೋ ಗ್ಯಾಲರಿ ಓಪನ್​ ಮಾಡಿದಾಗ, ಒಮ್ಮೆಲೆ ಬೆಚ್ಚಿಬಿದ್ದಿದ್ದಾನೆ. ಏಕೆಂದರೆ, ಅದರಲ್ಲಿ ಮಂಗ ಸೆಲ್ಫಿ ಫೋಟೋ, ವಿಡಿಯೋ ಎಲ್ಲಾ ತೆಗೆದುಕೊಂಡಿರುವುದು ದಾಖಲಾಗಿದೆ.ಇದನ್ನು ಯುವಕ, ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಇದೀಗ ಅದು ಭಾರಿ ವಯರಲ್​ ಆಗಿದೆ.
ಸುಮ್ಮನಿರದೇ ಇರುವೆ ಬಿಟ್ಟುಕೊಂಡ ಪ್ರೇಮಿಗಳು: ಕೋರ್ಟ್​ನಿಂದ ಬಿತ್ತು ₹50 ಸಾವಿರ ದಂಡ!

ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − eight =
Remember me
