ನವದೆಹಲಿ:ಯಾವುದೇ ವಿಷಯ ಬೇಕಾದರೂ ಗೂಗಲ್‌ನಲ್ಲಿ ಸರ್ಚ್‌ ಮಾಡುವುದು ಇಂದು ಸರ್ವೇ ಸಾಮಾನ್ಯ. ಹಾಗಿದ್ದರೆ ಈ ವರ್ಷ ಪುರುಷರು ಅತಿ ಹೆಚ್ಚಾಗಿ ಗೂಗಲ್‌ನಲ್ಲಿ ಸರ್ಚ್‌ ಮಾಡಿರುವ ವಿಷಯ ಯಾವುದು ಎಂಬ ಕುತೂಹಲವನ್ನು ಸಮೀಕ್ಷೆಯೊಂದು ಬಹಿರಂಗ ಮಾಡಿದೆ.
ಫ್ರಾಮರ್ಸ್‌ ಡಾಟ್‌ ಕಾಮ್‌ ಎಂಬ ಈ ಸಮೀಕ್ಷೆ ಮಾಡಿದೆ. ಪುರುಷರ ಮನಸ್ಸನ್ನು ತಿಳಿಯುವ ಪ್ರಯತ್ನ ಮಾಡಿರುವ ಫ್ರಾಮರ್ಸ್‌, ಐದು ವಿಷಯಗಳ ಬಗ್ಗೆ ಮಾಹಿತಿ ನೀಡಿದೆ. ಹಾಗಿದ್ದರೆ ಸಮೀಕ್ಷೆಯಿಂದ ತಿಳಿದುಬಂದಿರುವ ಅಂಶಗಳು ಯಾವುವು ಎಂದು ಇಲ್ಲಿದೆ ನೋಡಿ:
ಟಾಪ್‌ 1 ಸ್ಥಾನದಲ್ಲಿ ಇರುವುದು ನಪುಂಸಕತೆಯ ಬಗ್ಗೆ ಎಂದಿದೆ ಈ ವರದಿ. ಹೆಚ್ಚಿನ ಪುರುಷರಿಗೆ ತಾವು ನಪುಂಸಕರಾದರೆ ಎಂಬ ಭಯವಂತೆ. ಅದೇ ಕಾರಣಕ್ಕೆ ಅವರು ನಪುಂಸಕತೆಯ ಲಕ್ಷಣಗಳು ಯಾವುವು ಎಂಬ ಬಗ್ಗೆ ಹೆಚ್ಚಿನ ಪುರುಷರು ಹುಡುಕಾಡುತ್ತಿರುತ್ತಾರೆ ಎಂದಿದೆ ವರದಿ. ಪುರುಷರು ತಮ್ಮ ಲೈಂಗಿಕತೆಯ ಬಗ್ಗೆ ಬಹಳ ಕಾಳಜಿ ವಹಿಸಿದ್ದು, ಸರಿ ಸುಮಾರು 68,600 ಜನರು ನಪುಂಸಕತೆಯ ಲಕ್ಷಣ ಹೊಂದಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿರುವುದಾಗಿ ವರದಿ ಹೇಳಿದೆ.
ಇನ್ನು ಸೌಂದರ್ಯ ಎಂದರೆ ಮಹಿಳೆಯರಷ್ಟೇ ಕಣ್ಮುಂದೆ ಬರುತ್ತಾರೆ. ಆದರೆ ಪುರುಷರು ಸೌಂದರ್ಯದ ಕುರಿತ ವಿಷಯ ತಿಳಿದುಕೊಳ್ಳುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಶೇವಿಂಗ್ ಬಗ್ಗೆ ತಿಳಿದುಕೊಳ್ಳಲು ಹೆಚ್ಚಾಗಿ ಇವರು ಕುತೂಹಲ ತೋರಿದ್ದಾರೆ. ಶೇವಿಂಗ್ ನಂತರ ಹೆಚ್ಚಿನ ಕೂದಲು ಬೆಳೆಯುವ ಸಾಧ್ಯತೆಯಿದೆಯಾ ಎಂಬುದನ್ನು ಸರ್ಚ್ ಮಾಡಿದ್ದಾರೆ. 68,400 ಜನರು ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಇದನ್ನು ಬಿಟ್ಟರೆ ಇವರ ಯೋಚನೆ ಇರುವುದು ತಲೆಗೂದಲಿನ ಸಮಸ್ಯೆ ಬಗ್ಗೆ. ಅದೂ ಜುಟ್ಟಿನ ಬಗ್ಗೆ ಇವರಿಗೆ ಅತಿ ಹೆಚ್ಚು ಪ್ರೀತಿಯಂತೆ. ಇದೇ ಕಾರಣಕ್ಕೆ ಜುಟ್ಟ ಕಟ್ಟಿದ್ರೆ ಅಥವಾ ಟೋಪಿ ಹಾಕಿದ್ರೆ ಕೂದಲು ಉದುರುತ್ತಾ ಎಂಬ ಪ್ರಶ್ನೆಗೂ ಉತ್ತರ ಹುಡುಕುವ ಪ್ರಯತ್ನ ನಡೆದಿದೆ. 52,100 ಜನರು ಗೂಗಲ್‌ನಲ್ಲಿ ಈ ವಿಷಯದ ಕುರಿತು ಹುಡುಕಾಟ ನಡೆಸಿದ್ದಾರೆ ಎಂದಿದೆ ಸಮೀಕ್ಷೆ.
ಸ್ತನ ಕ್ಯಾನ್ಸರ್‌ ಕುರಿತು ಮಹಿಳೆಯರಿಗೆ ಭಾರಿ ಹೆದರಿಕೆ ಇರುವುದು ಸಹಜ. ಆದರೆ ಸ್ತನ ಕ್ಯಾನ್ಸರ್‌ ಪುರುಷರಿಗೂ ಬರುತ್ತದೆ. ಆದ್ದರಿಂದ ಈ ಬಗ್ಗೆಯೂ ಪುರುಷರಿಗೆ ಭಯವಿದೆಯಂತೆ. ಇದೇ ಕಾರಣಕ್ಕೆ 61,200 ಜನರು ಗೂಗಲ್‌ನಲ್ಲಿ ಈ ಬಗ್ಗೆ ಹುಡುಕಿದ್ದಾರೆ. 60 ವರ್ಷದ ನಂತರ ಪುರುಷರು ಈ ಸಮಸ್ಯೆಯಿಂದ ಬಳಲುವುದು ಹೆಚ್ಚು. ಆದ್ದರಿಂದ ಆರಂಭಿಕ ರೋಗ ಲಕ್ಷಣವನ್ನು ತಿಳಿದುಕೊಳ್ಳಲು ಗೂಗಲ್‌ ಮೊರೆ ಹೋಗಿದ್ದಾರೆ.
ಇನ್ನು ಫಿಟ್‌ನೆಸ್‌ನಲ್ಲಿಯೂ ಪುರುಷರು ಹಿಂದೆ ಬಿದ್ದಿಲ್ಲ. ಅವರು ಹೆಚ್ಚಾಗಿ ಹುಡುಕುವುದು, ವ್ಯಾಯಾಮ ಮುಗಿದ ಕೂಡಲೇ ಪ್ರೋಟೀನ್ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ತಿಳಿಯಲು ಬಯಸ್ತಾರೆ. ಹಾಗೆ ಯಾವ ಪ್ರೋಟೀನ್ ಬೆಸ್ಟ್ ಎಂಬುದನ್ನೂ ತಿಳಿಯುವ ಪ್ರಯತ್ನ ನಡೆಸಿದ್ದಾರೆ.
ಬೆಳಗಾವಿ ಬೀದಿ ಕಾಮಣ್ಣನಿಗೆ ಮಹಿಳೆಯಿಂದ ಗೂಸಾ: ಚಪ್ಪಲಿ ಏಟು ತಿಂದವ ಏನ್‌ ಮಾಡಿದ ನೋಡಿ…

ಆಮೀರ್‌ ಡಿವೋರ್ಸ್‌ ಬೆನ್ನಲ್ಲೇ ಸದ್ದು ಮಾಡುತ್ತಿದೆ ‘ಲವ್‌ ಜಿಹಾದ್‌’: ಶಾರುಖ್‌, ಸೈಫ್‌ ಹೆಸರೂ ಮುನ್ನೆಲೆಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
