ಛತರ್‌ಪುರ:ಇಬ್ಬರು ಹೆಣ್ಣುಮಕ್ಕಳೇ ಹುಟ್ಟಿದ್ದರಿಂದ ಪತ್ನಿಯ ಮೇಲೆ ಕೋಪಗೊಂಡ ಪಾಪಿಯೊಬ್ಬ ಪತ್ನಿ ಮಾತ್ರವಲ್ಲದೇ ಇಬ್ಬರು ಹೆಣ್ಣುಮಕ್ಕಳನ್ನೂ ಬಾವಿಗೆ ಎಸೆದಿರುವ ಭಯಾನಕ ಘಟನೆ ಮಧ್ಯಪ್ರದೇಶದ ಛತರ್‌ಪುರದಲ್ಲಿ ನಡೆದಿದೆ.
ಘಟನೆಯಲ್ಲಿ ಒಂದು ಮಗು ಪ್ರಾಣ ಕಳೆದುಕೊಂಡಿದೆ. ಪತ್ನಿ ತನ್ನ ಆರು ತಿಂಗಳ ಮಗುವಿನ ಜತೆ ಪ್ರಾಣ ಪಣಕ್ಕಿಟ್ಟು ಬಾವಿಯಿಂದ ಮೇಲೆ ಹತ್ತಿಬರುವಲ್ಲಿ ಯಶಸ್ವಿಯಾಗಿದ್ದಾಳೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ರಾಜಾ ಭಯ್ಯಾ ಯಾದವ್‌ ಎಂಬ ಪಾಪಿ ಈ ಕೃತ್ಯ ಎಸಗಿದ್ದಾನೆ.
ಮೊದಲನೆಯದ್ದು ಹೆಣ್ಣುಮಗುವಾಗಿತ್ತು. ಎರಡನೆಯ ಗರ್ಭಿಣಿಯಿದ್ದಾಗ ಪುನಃ ಹೆಣ್ಣುಮಗು ಹುಟ್ಟಿದರೆ ಎಲ್ಲರನ್ನೂ ಸಾಯಿಸುವುದಾಗಿ ರಾಜಾ ಹೇಳುತ್ತಿದ್ದ. ಹೆರಿಗೆಗೆಂದು ಮಹಿಳೆ ತವರಿಗೆ ಹೋಗಿದ್ದಳು. ಅದು ಕೂಡ ಹೆಣ್ಣುಮಗುವಾಗಿದ್ದರಿಂದ ರಾಜಾ ಸಿಟ್ಟುಗೊಂಡಿದ್ದ. ಪತ್ನಿ ಮತ್ತು ಮಕ್ಕಳನ್ನು ವಾಪಸ್‌ ಕರೆತರುವ ನೆಪದಲ್ಲಿ ದಾರಿಮಧ್ಯೆ ಎಲ್ಲರನ್ನೂ ಬಾವಿಗೆ ನೂಕಿದ್ದಾನೆ.
ಬೈಕ್‌ ಅನ್ನು ಬಾವಿ ಸಮೀಪ ನಿಲ್ಲಿಸಿ ಎಲ್ಲರನ್ನೂ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಅರ್ಧ ನಿರ್ಮಾಣದ ಬಾವಿಯಲ್ಲಿ ಬಿದ್ದ ಎಲ್ಲರೂ ಸಹಾಯಕ್ಕಾಗಿ ಕೂಗಾಡಿದ್ದಾರೆ. ಆದರೆ ಸಮೀಪದಲ್ಲಿ ಯಾರೂ ಇಲ್ಲದಿದ್ದರಿಂದ ಸಹಾಯಕ್ಕೆ ಯಾರೂ ಬರಲಿಲ್ಲ. ಕೊನೆಗೆ ಮಹಿಳೆ ತನ್ನ ಎರಡನೆಯ ಮಗುವಿನ ಜತೆ ಏರಲು ಯಶಸ್ವಿಯಾಗಿದ್ದು, ಮೊದಲ ಮಗು ಮೃತಪಟ್ಟಿದೆ. ಕೂಡಲೇ ಪೊಲೀಸ್‌ ಠಾಣೆಗೆ ಧಾವಿಸಿದ ಮಹಿಳೆ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ.
ಆಗ ಅಜಯ್‌- ಶಿಖಾ… ಈಗ ಗೌತಮ್‌- ಅಶ್ವತಿ: ಇದು ಮೈಸೂರು- ಮಂಡ್ಯ ಜಿಲ್ಲಾಧಿಕಾರಿಗಳ ವಿಶೇಷತೆ!

VIDEO: ಕ್ಷಣ ಕ್ಷಣವೂ ದೊಡ್ಡದಾಗುತ್ತಾ ಮನೆಗಳನ್ನು ನುಂಗಿಹಾಕ್ತಿದೆ ಭಯಾನಕ ಗುಂಡಿ: ಬೆಚ್ಚಿಬಿದ್ದ ಜನತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
