ಮುಂಬೈ:ಸದಾ ತುಂಡುಡುಗೆ ಧರಿಸುತ್ತಲೇ ಪ್ರಸಿದ್ಧಿ ಪಡೆದಿರುವ ನಟಿ ಮಲ್ಲಿಕಾ ಶೆರಾವತ್‌ ಇದೀಗ ಸೀರೆ ಧರಿಸಿ ಬಂದು ನೀಡಿದ್ದ ಪೋಸ್‌ನಿಂದ ಭಾರಿ ಟ್ರೋಲ್‌ ಆಗಿದ್ದಾರೆ. ಇವರ ಸೀರೆಯ ಅವತಾರ ನೋಡಿ ಜನರು ಸುಸ್ತಾಗಿದ್ದಾರೆ.
ಅಷ್ಟಕ್ಕೂ ಆ ಸೀರೆಯ ವಿಶೇಷತೆ ಏನು ಎಂದರೆ, ದೂರದಿಂದ ನೋಡಿದರೆ ಸೀರೆಯ ರೂಪದಲ್ಲಿ ಇದು ಇದ್ದರೂ ಕೆಳಭಾಗದಲ್ಲಿ ಕಾಲಿನ ಸಂಪೂರ್ಣ ಪ್ರದರ್ಶನ ಮಾಡಿದ್ದಾರೆ. ಇದು ಸೀರೆಯೋ ಇಲ್ಲವೇ ತುಂಡುಡುಗೆಯೋ ಎಂದು ತಿಳಿಯದ ವಿನ್ಯಾಸದ ಸೀರೆ ಇದಾಗಿದೆ.
ಖಾಸಗಿ ವಾಹಿನಿಯ ಕಾಮಿಡಿ ಶೋ ಜಡ್ಜ್ ಆಗಿರೋ ಮಲ್ಲಿಕಾ ಈ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ವಿಚಿತ್ರ ಸೀರೆಯಲ್ಲಿ ಅವರು ಕಾಣಿಸಿಕೊಂಡಿದ್ದು, ನೋಡುಗರು ಮೇಲಿನಿಂದ ಕೆಳಕ್ಕೆ ಇನ್ನೊಮ್ಮೆ ನೋಡುವಂತೆ ಮಾಡಿದ್ದಾರೆ.
ಇದು ಮಾಡರ್ನ್ ಲುಕ್ ಸೀರೆ ಎಂದು ಹೇಳಿಕೊಂಡಿರುವ ಮಲ್ಲಿಕಾ ಸದ್ಯ ಜಾಲತಾಣದಲ್ಲಿ ಸೀರೆ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರೀತಿ ಸೀರೆ ಉಟ್ಟು ಭಾರತೀಯ ಸಂಪ್ರದಾಯದ ಸೀರೆಗೆ ಇರುವ ಮರ್ಯಾದೆಯನ್ನು ಕಳೆಯಬೇಡಿ ಎಂದು ಟೀಕಿಸಿದ್ದಾರೆ. ಸದಾ ಸೆಕ್ಸಿ ಉಡುಪು ತೊಟ್ಟು ಪೋಸ್‌ ಕೊಡುವ ನೀವು ಸೀರೆಗೆ ಈ ರೀತಿ ಅವಹೇಳನ ಮಾಡುವುದು ಸರಿಯಲ್ಲ ಎಂದು ಹಲವು ಮಂದಿ ಕೆಂಡ ಕಾರಿದ್ದಾರೆ.
ಸದ್ಯ ಸಿನಿಮಾದಿಂದ ದೂರವಾಗಿ ವಿದೇಶದಲ್ಲಿ ನೆಲೆಸಿದ್ದ ಮಲ್ಲಿಕಾ ಪುನಃ ಭಾರತಕ್ಕೆ ವಾಪಸಾಗಿದ್ದು, ಇಲ್ಲಿಯ ರಿಯಾಲಿಟಿ ಷೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2017ರ ಜೀನತ್ ಸಿನಿಮಾದಲ್ಲಿ ಮಲ್ಲಿಕಾ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ನಂತರ ಒಟಿಟಿ ಪ್ಲಾಟ್‍ಪಾರಂ ದಿ ಸ್ಟೋರಿ ವೆಬ್ ಸಿರೀಸ್ ಮೂಲಕ ಕಮ್ ಬ್ಯಾಕ್ ಮಾಡಿದ್ದರು.


A post shared by Bollywood Pap (@bollywoodpap)

ಪ್ಲೀಸ್‌ ಗಂಡನಿಂದ ರಕ್ಷಿಸಿ ಎಂದರೂ ಕಿವಿಗೊಡದ ಪೊಲೀಸರು: ಹಲವಾರು ಕನಸು ಕಂಡಿದ್ದ ಯುವತಿ ನೇಣಿಗೆ ಶರಣು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
