
ಮುಂಬೈ:ಸಿನಿ ರಂಗದಲ್ಲಿ ಕಾಸ್ಟಿಂಗ್​ ಕೌಚ್ ಕುರಿತು ಇದಾಗಲೇ ಹಲವಾರು ನಟ-ನಟಿಯರು ಬಾಯಿ ಬಿಟ್ಟಿದ್ದು, ಇದೀಗ ನಟಿ ಮಲ್ಲಿಕಾ ಶೆರಾವತ್​ ಸರದಿ. ಮೈಚಳಿ ಬಿಟ್ಟು ನಟಿಸುವ ಮೂಲಕ ಸಕತ್​ ಹಾಟ್​ ತಾರೆ ಎಂದೇ ಪ್ರಸಿದ್ಧಿ ಪಡೆದಿರುವ ಮಲ್ಲಿಕಾ ಇದೀಗ ಬಾಲಿವುಡ್​ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಟಾಪ್​ ಹೀರೋಗಳ ಮೇಲೆಯೂ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂಧಾನಕ್ಕೆ ಒಪ್ಪಿಕೊಳ್ಳದಿದ್ದಕ್ಕೆ ಸಾಕಷ್ಟು ಸಿನಿಮಾಗಳಿಂದ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್​ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್​ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು ಎಂದಿದ್ದಾರೆ ನಟಿ.ಒಬ್ಬ ಹೀರೋ ನಿಮಗೆ ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರಲು ಹೇಳುತ್ತಾನೆ. ಆತನ ಜೊತೆ ನೀವು ಸಿನಿಮಾ ಮಾಡುತ್ತಿರುತ್ತೀರಿ. ಅವರದೇ ಸರ್ಕಲ್​ನಲ್ಲಿ ಇರುತ್ತೀರಿ. ಆತ ಮಧ್ಯರಾತ್ರಿ ಕರೆದಾಗ ನೀವು ಹೋಗದಿದ್ದರೆ ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ ಎಂದಿದ್ದಾರೆ.
ನಾನು ಹಲವಾರು ಚಿತ್ರಗಳಲ್ಲಿ ಬೋಲ್ಡ್​ ಆಗಿ ನಟಿಸಿದ್ದೇನೆ. ಹಾಗೆಂದು ಮಂಚದ ವಿಷಯದಲ್ಲಿ ನಾನು ರಾಜಿ ಆಗುತ್ತೇನೆ ಎಂದು ಅರ್ಥವಲ್ಲ. ಎಲ್ಲ ಎ ದರ್ಜೆಯ ನಟರು ನನ್ನೊಂದಿಗೆ ನಟಿಸಲು ನಿರಾಕರಿಸುತ್ತಾರೆ. ಯಾಕೆಂದರೆ ನಾನು ಅವರೊಂದಿಗೆ ರಾಜಿ ಆಗಲಿಲ್ಲ. ಯಾವ ನಟಿಯನ್ನು ತಾವು ಕಂಟ್ರೋಲ್​ ಮಾಡಬಹುದು, ಯಾವ ನಟಿ ತಮ್ಮೊಂದಿಗೆ ರಾಜಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅಂಥವರನ್ನು ಹೀರೋಗಳು ಇಷ್ಟಪಡುತ್ತಾರೆ. ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ನಾನು ಇನ್ನೊಬ್ಬರ ಲೈಂಗಿಕಾಸಕ್ತಿಯ ವಿಷಯವಾಗಲು ಬಯಸುವುದಿಲ್ಲ ಎಂದು ಮಲ್ಲಿಕಾ ಹೇಳಿದ್ದಾರೆ.ಅಂದಹಾಗೆ, 2002ರಲ್ಲಿ ಮಲ್ಲಿಕಾ ಶೆರಾವತ್​ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ದೊಡ್ಡ ಬ್ರೇಕ್​ ಸಿಕ್ಕಿದ್ದು 2004ರ ‘ಮರ್ಡರ್​’ ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದರು. ಜೋಗಿ ಪ್ರೇಮ್ ಅವರ ‘ಈ ಪ್ರೀತಿ ಏಕೆ ಭೂಮಿ ಮೇಲಿದೆ..’ ಚಿತ್ರದ ಐಟಂ ಸಾಂಗ್‌ನಲ್ಲೂ ಮಲ್ಲಿಕಾ ಹೆಜ್ಜೆ ಹಾಕಿದ್ದರು. 2011ರ ನಂತರ ಮಲ್ಲಿಕಾ ಅವರ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಾ ಹೋಯಿತು. ಈ ಮಧ್ಯೆ ಅವರು ಚೈನೀಸ್, ಹಾಲಿವುಡ್‌ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಅವರಿಗೆ ಈಗ 45 ವರ್ಷ ವಯಸ್ಸು. ಈಗ ಅಷ್ಟೇನೂ ಬೇಡಿಕೆ ಇಲ್ಲ. ಕಳೆದ 10 ವರ್ಷಗಳಲ್ಲಿ ಅವರು ನಟಿಸಿರುವುದು ಬರೀ 7 ಸಿನಿಮಾಗಳಲ್ಲಿ ಮಾತ್ರ.
ನಾನು ಸಾಧ್ಯವಾದಷ್ಟು ಒಳ್ಳೆಯ ಪಾತ್ರಗಳನ್ನು ಹುಡುಕಲು ಪ್ರಯತ್ನಿಸಿದೆ. ಎಲ್ಲರೂ ಮಾಡುವಂತೆ ನಾನು ಕೂಡ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ಪಾತ್ರಗಳು ಚೆನ್ನಾಗಿದ್ದವು, ಕೆಲವು ಚೆನ್ನಾಗಿಲ್ಲ. ಇದು ನಟ-ನಟಿಯ ಪ್ರಯಾಣದ ಭಾಗವಾಗಿದೆ, ಆದರೆ ಒಟ್ಟಾರೆಯಾಗಿ ನನ್ನ ಜರ್ನಿ ಅದ್ಭುತವಾಗಿದೆ ಎಂದು ಮಲ್ಲಿಕಾ ಹೇಳಿದ್ದಾರೆ.(ಏಜೆನ್ಸೀಸ್​)
ಅವನು ಇಲ್ಲಿ ಬರಲಾರ, ಇವಳು ಅಲ್ಲಿ ಹೋಗಲಾರಳು: ಪೇಚಿಗೆ ಸಿಲುಕಿದ ಪ್ರೇಮಿಗಳ ಆನ್​ಲೈನ್​ ಮದುವೆಗೆ ಹೈಕೋರ್ಟ್ ಅಸ್ತು
‘ಕೊಲೆಯಾದ’ ಪತ್ನಿ ಪ್ರೇಮಿಯ ತೋಳಲ್ಲಿ: ಅಮಾಯಕ ಪತಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಾ ಜೈಲಲ್ಲಿ!
ರೇಪ್​ ಆರೋಪ ಮಾಡಿದ ನಾಲ್ಕು ಮಕ್ಕಳ ತಾಯಿಗೆ ಗ್ರಹಚಾರ ಬಿಡಿಸಿದ ಹೈಕೋರ್ಟ್​- ನೀಡಿತು ಇಂಥದ್ದೊಂದು ಶಿಕ್ಷೆ
VIDEO: ಬ್ಯಾಗ್​ ಕೆಳಗಿಟ್ಟು ಟ್ರೋಲ್ ಆದ ಸಂಸದೆ!​ ಕ್ಯಾಮೆರಾ ಕಣ್ಣಿಗೆ ಬಿದ್ದು ರಟ್ಟಾಗೋಯ್ತು ಈ ಗುಟ್ಟು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
