ಕೋಲ್ಕತಾ:ಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿರುವ ಬೆನ್ನಲ್ಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದ್ದರಿಂದ ಕಾಲು ಮುರಿದುಹೋಗಿದೆ ಎಂದೇ ಸುದ್ದಿ ಮಾಡಿ, ಕೊನೆಗೆ ಇಲ್ಲ ಇದು ಅಕಸ್ಮಾತ್ತಾಗಿ ಕಾಲುಜಾರಿ ಬಿದ್ದು ಮಾಡಿಕೊಂಡ ಅವಘಡ ಎಂದು ಸತ್ಯಾಂಶ ಹೊರಬರುತ್ತಿದ್ದಂತೆಯೇ ಬಂಗಾಳದ ದೀದಿ ಇದೀಗ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ಶುರು ಮಾಡಿದ್ದಾರೆ.
ಬಿಜೆಪಿ ದೆಹಲಿಯಿಂದ ಎಷ್ಟೇ ನಾಯಕರನ್ನು ಕರೆತಂದರೂ ಇಲ್ಲಿ ಏನನ್ನೂ ಸಾಧಿಸಲಾರರು ಎಂದರು. ಸ್ವಲ್ಪ ದಿನ ಕಾಯ್ದು ನೋಡಿ ಅಷ್ಟೇ. ಸದ್ಯ ನನ್ನ ಕಾಲು ಸರಿಯಾಗುತ್ತಲಿವೆ. ಸಂಪೂರ್ಣವಾಗಿ ಸರಿಯಾದ ಮೇಲೆ ನಿಮ್ಮ ಕಾಲುಗಳನ್ನು ನೋಡಿಕೊಳ್ಳುತ್ತೇನೆ. ಎಷ್ಟು ಮುಕ್ತವಾಗಿ ಬಂಗಾಳದಲ್ಲಿ ಓಡಾಡುತ್ತವೆ ಅವು ಎಂಬುದನ್ನು ನೋಡುತ್ತೇನೆ ಎಂದರು.
‘ನನ್ನ ಹೃದಯದ ಬಡಿತ ಇರುವವರೆಗೆ ನಾನು ಬಿಜೆಪಿಯ ವಿರುದ್ಧ ಹೋರಾಟ ಮಾಡುತ್ತೇನೆ. ನನ್ನ ದನಿಪೆಟ್ಟಿಗೆ ಎಲ್ಲಿಯವರೆಗೆ ನನಗೆ ಸಾಥ್‌ ನೀಡುತ್ತಿದೆಯೋ, ಅದು ಬಿಜೆಪಿ ವಿರುದ್ಧದ ಹೋರಾಟಕ್ಕೆ ಮೀಸಲು ಇರುತ್ತದೆ. ನನ್ನ ಶರೀರಕ್ಕೆ ಏನೇ ಗಾಯವಾಗಲಿ, ನನ್ನ ವಿರುದ್ಧ ಏನೇ ಸಂಚು ನಡೆಯಲಿ ಇವಾವುದೂ ಬಿಜೆಪಿ ವಿರುದ್ಧದ ಹೋರಾಟಕ್ಕೆ ತಡೆಯಾಗಲಾರದು ಎಂದು ಮಮತಾ ಗುಡುಗಿದ್ದಾರೆ.
ಪುರುಲಿಯಾದಲ್ಲಿ ಚುನಾವಣಾ ರ್‍ಯಾಲಿ ಕೈಗೊಂಡಿದ್ದ ಅವರು, ‘ಜಗತ್ತಿನ ಯಾವ ಸರ್ಕಾರವೂ ಮಾಡದಷ್ಟು ಉತ್ತರ ಕಾರ್ಯ, ಅಭಿವೃದ್ಧಿಪರ ಯೋಜನೆಗಳನ್ನು ನಮ್ಮ ಸರ್ಕಾರ ಮಾಡಿದೆ. ಇದು ಸಂಪೂರ್ಣ ಜಗತ್ತಿಗೇ ಗೊತ್ತಿದೆ. ಆದ್ದರಿಂದ ಬಿಜೆಪಿ ನನ್ನಿಂದ ಏನನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದು ಎಷ್ಟೇ ಪ್ರಚಾರ ಮಾಡಿದರೂ ಇಲ್ಲಿ ಗೆಲ್ಲಲು ಆಗುವುದಿಲ್ಲ ಎಂದಿದ್ದಾರೆ.
ಇದೇ ವೇಳೆ, ‘ಮಮತಾ ಅವರು ತಮ್ಮ ನಾಮಪತ್ರದ ಜತೆಗೆ ಸಲ್ಲಿಸಿರುವ ಮಾಹಿತಿಯಲ್ಲಿ, ಅವರ ವಿರುದ್ಧ ಇರುವ ಆರು ಅಪರಾಧ‌ ಪ್ರಕರಣಗಳನ್ನು ಉಲ್ಲೇಖಿಸಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು’ ಎಂದು ನಂದಿಗ್ರಾಮ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಸುವೇಂದು ಅಧಿಕಾರಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
“ಪೆಟ್ಟು ಬಿದ್ದ ಹುಲಿ ಹೆಚ್ಚು ಅಪಾಯಕಾರಿ” : ಮಮತಾ ಬ್ಯಾನರ್ಜಿ ಎಚ್ಚರಿಕೆ

ಮಮತಾ ಮೇಲೆ ‘ಅಟ್ಯಾಕ್​’ ಆಗಿದೆ ಅನ್ನೋಕೆ ಪುರಾವೆ ಇಲ್ಲ : ಚುನಾವಣಾ ಆಯೋಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − fifteen =
Remember me
