ಕೋಲ್ಕತಾ:ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣಾ ಕಾವು ಜೋರಾಗಿ ನಡೆದಿದೆ. ಈ ನಡುವೆಯೇ, ಬಿಜೆಪಿ ಒಂದೆಡೆ ಬಂಗಾಳದ ಮೇಲೆ ಜಯ ಸಾಧಿಸಲು ಸಜ್ಜಾಗಿದ್ದರೆ, ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಈ ಬಾರಿಯೂ ಗದ್ದುಗೆ ಏರಲು ಶತಾಯುಗತಾಯ ಪ್ರಯತ್ನ ಮಾಡುತ್ತಿದ್ದಾರೆ.
ಈ ನಡುವೆಯೇ, ಅಪಘಾತವೊಂದರಲ್ಲಿ ಕಾಲು ಊನ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಮತಾ ಬ್ಯಾನರ್ಜಿ ಕಾಲಿಗೆ ಪ್ಲಾಸ್ಟರ್​ ಹಾಕಿಕೊಂಡೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಮವಾರ ಮೂರನೆಯ ಹಂತದ ಮತದಾನ ಪ್ರಚಾರ ಕಾರ್ಯ ನಡೆಸಿದ ಅವರು, “ನಾನು ಒಂದೇ ಕಾಲಿನಲ್ಲಿ ಬಂಗಾಳದ ಚುನಾವಣೆ ಗೆಲ್ಲುತ್ತೇನೆ. ಮುಂದೆ ಎರಡು ಕಾಲಿನ ಸಹಾಯದಿಂದ ದೆಹಲಿ ಮೇಲೂ ಜಯ ಸಾಧಿಸಲಿದ್ದೇನೆ” ಎನ್ನುವ ಮೂಲಕ ಬಿಜೆಪಿಗೆ ಸವಾಲು ಎಸೆದಿದ್ದಾರೆ.
I will win Bengal on one leg and in the future, will get victory in Delhi on two legs: West Bengal CM and TMC leader Mamata Banerjee in Debanandapur, Hooghly#WestBengalElections2021pic.twitter.com/ZC0IsnYStO
— ANI (@ANI)April 5, 2021

ಹೂಗ್ಲಿ ಜಿಲ್ಲೆಯ ದೇಬಾನಂದಪುರ ಗ್ರಾಮದಲ್ಲಿ ಅವರು ಚುನಾವಣಾ ರ್ಯಾಲಿ ನಡೆಸಿ ಅಲ್ಲಿ ಮಾತನಾಡುತ್ತಿದ್ದರು. ತಮಗಾಗಿರುವ ಏಟಿನ ಕುರಿತು ಮಾತನಾಡಿದ ಅವರು, ಒಂದೇ ಕಾಲಿಟ್ಟುಕೊಂಡು ಬಂಗಾಳದಲ್ಲಿ ಗೆಲ್ಲಲು ನನಗೆ ಸಾಧ್ಯವಿದೆ. ಭವಿಷ್ಯದಲ್ಲಿ ಎರಡೂ ಕಾಲುಗಳೂರಿ ದೆಹಲಿಯಲ್ಲಿ ವಿಜಯ ಸಾಧಿಸುತ್ತೇನೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈ ಬಗ್ಗೆ ಮಮತಾ ಕಿರಿ ಕಾರಿದ್ದಾರೆ. ಕರೊನಾದ ಈ ಸಮಯದಲ್ಲಿ ಕಡಿಮೆ ಹಂತದ ಮತದಾನ ಇಡಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ಎಂಟು ಹಂತದಲ್ಲಿ ಇಟ್ಟಿದೆ. ಏನೇ ಆದರೂ ಒಂದೇ ಕಾಲಿನಲ್ಲಿಯೇ ನಾನು ಗೆದ್ದು ಬರುವೆ ಎಂದಿದ್ದಾರೆ.
ಏಪ್ರಿಲ್ 6ರಂದು 31 ವಿಧಾನಸಭಾ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಹೂಗ್ಲಿ ಜಿಲ್ಲೆಯ ಎಂಟು, ಹೌರಾಹ್‌ನಲ್ಲಿನ ಏಳು, ಸೌತ್ 24 ಪರಗಣ ಜಿಲ್ಲೆಯ ಹದಿನಾರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಎರಡು ಹಂತದ ಚುನಾವಣೆಗಳು ಮುಕ್ತಾಯವಾಗಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.
ಸಿಡಿ ಕೇಸ್​ನಲ್ಲಿ ಸಿಕ್ಕಾಕೊಂಡಿರೋ ಆಂಟಿ ನನ್ನನ್ನು ಪ್ರೀತಿಸ್ತೇನೆ ಅಂತ ದುಂಬಾಲು ಬಿದ್ದಿದ್ದಾಳೆ- ಹೇಗೆ ತಪ್ಪಿಸಿಕೊಳ್ಳಲಿ?

ಗಂಡನ ಮನೆಯಲ್ಲಿ ಹಿಂಸೆ- ಹೊಂದಿಕೊಂಡು ಹೋಗು ಎನ್ನುವ ತಾಯಿ… ಪ್ಲೀಸ್​ ನನಗೆ ದಾರಿ ತೋರಿ…

ಇಸ್ರೋದಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್​ ನ್ಯೂಸ್​: ವಿವಿಧ ಘಟಕಗಳಲ್ಲಿ ಭರ್ಜರಿ ಉದ್ಯೋಗಾವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
