ಕೋಲ್ಕತಾ:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ಪಕ್ಷದ ನಾಯಕರ ವಿರುದ್ಧ ಭಾರಿ ಗರಂ ಆದಂತಿದೆ.
ಇದಾಗಲೇ ಕೆಲವರು ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಭಾರಿ ಆಕ್ರೋಶ ಪಟ್ಟುಕೊಂಡಿರುವ ದೀದಿ ಶಾಸಕರ ವಿರುದ್ಧ ಕಿಡಿ ಕಾರಿದ್ದಾರೆ.ಪ್ರತಿಪಕ್ಷಗಳೊಂದಿಗೆ ಸಂಪರ್ಕದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸುವ ಬದಲು ಪಕ್ಷ ಬಿಟ್ಟು ಬೇಕಿದ್ದರೆ ತೊಲಗಬಹುದು ಎಂದು ಹೇಳಿದ್ದಾರೆ.
ಪಕ್ಷದ ಮುಖಂಡರ ಜತೆ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ ಮಮತಾ ಈ ರೀತಿ ಹೇಳಿದ್ದಾರೆ. ಸಚಿವ ಸುವೆಂಡು ಅಧಿಕಾರಿ ರಾಜ್ಯ ಸಚಿವ ಸಂಪುಟದಿಂದ ಹೊರಬಂದ ಒಂದು ವಾರದ ನಂತರ ಭಾರಿ ಅಸಮಾಧಾನದಿಂದ ಇರುವ ಮಮತಾ, ಯಾರು ಬೇಕಾದರೂ, ಪಕ್ಷ ಬಿಟ್ಟು ಹೋಗಬಹುದು, ನನ್ನದೇನೂ ಅಡ್ಡಿಯಿಲ್ಲ, ಪಕ್ಷದ ಒಳಗೇ ಇದ್ದು, ಇಲ್ಲಸಲ್ಲದ್ದನ್ನು ಮಾಡಬೇಡಿ ಎಂದಿದ್ದಾರೆ. ಟಿಎಂಸಿ ಶಾಸಕ ಮಿಹಿರ್ ಗೋಸ್ವಾಮಿ ಕಳೆದ ವಾರ ಬಿಜೆಪಿ ಸೇರಿದ್ದರು.
ಇದನ್ನೂ ಓದಿ:ದೀದಿಗೆ ಶಾಕ್​ ಮೇಲೆ ಶಾಕ್​: ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ರಾಜೀನಾಮೆ
ಈಗಾಗಲೇ ಯಾರ್ಯಾರು ಪಕ್ಷ ಬಿಟ್ಟು ಹೋಗಿದ್ದಾರೆ ಅದರ ಬಗ್ಗೆ ನನಗೆ ಚಿಂತೆ ಇಲ್ಲ, ಅವರನ್ನು ನಾನು ಇಷ್ಟಪಡುವುದೂ ಇಲ್ಲ ಎಂದಿರುವ ಮಮತಾ ಬ್ಯಾನರ್ಜಿ, ಪಕ್ಷದ ಒಳಗೆ ಇದ್ದವರು ಹೋರಾಡಬೇಕಿದೆ. ಪಕ್ಷ ಬಿಟ್ಟು ಹೋಗುವವರು ನಾನು ಸಾಯಲಿ ಎಂದು ಪ್ರಾರ್ಥಿಸಿಕೊಂಡು ಹೋಗಿ ಎಂದಿದ್ದಾರೆ!
ಪಕ್ಷ ವಿರೋಧಿ ಚಟುವಟಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಅಂಥವರ ವಿರುದ್ಧ ಪಕ್ಷವು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಆದ್ದರಿಂದ ನನಗೂ ಯಾರೂ ಭಯಪಡಬೇಕಿಲ್ಲ, ಇಷ್ಟವಿಲ್ಲದಿದ್ದರೆ ಹೋಗಬಹುದು. ಯಾರು ಹೋದರೂ ಪಕ್ಷಕ್ಕೆ ನಷ್ಟ ಆಗುವುದಿಲ್ಲ, ಅಂಥ ಸಾವಿರಾರು ಮಂದಿಯನ್ನು ಸೃಷ್ಟಿ ಮಾಡಬಹುದು ಎಂದು ಪಕ್ಷ ಬಿಟ್ಟು ಹೋದವರಿಗೆ ಪರೋಕ್ಷವಾಗಿ ಚುಚ್ಚಿದರು.
ಲಸಿಕೆ ಮೂಲಕ ಸೈನಿಕರಿಗೆ ಅತಿಮಾನುಷ ಶಕ್ತಿ ತುಂಬಲಿದೆ ಚೀನಾ- ವಿಶ್ವಕ್ಕೇ ಕಂಟಕ!

ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

ಮದುವೆ ದಿಬ್ಬಣದ ಟ್ರ್ಯಾಕ್ಟರ್​ ಪಲ್ಟಿ: ಮದುಮಗ, ಅಪ್ಪ-ಅಮ್ಮ ಸೇರಿ 6 ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
