ನಗಾಂವ್ (ಅಸ್ಸಾಂ):ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಬೀಳಿಸಿ ಮದುವೆಯಾಗಿ ನಂತರ ಮತಾಂತರ ಮಾಡುತ್ತಿರುವ ಲವ್‌ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅಂಥದ್ದೇ ಒಂದು ಕೇಸ್‌ ಈಗ ಅಸ್ಸಾಂನಲ್ಲಿಯೂ ನಡೆದಿದೆ.
ಮುಸ್ಲಿಂ ಯುವಕನೊಬ್ಬ ತಾನು ಹಿಂದೂ ಎಂದು ಹೇಳಿಕೊಂಡು ಯುವತಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದಾನೆ. ನಂತರ ಆಕೆಯನ್ನು ಮದುವೆಯಾಗಿ ನೀಡಬಾರದ ಚಿತ್ರಹಿಂಸೆ ನೀಡಿದ್ದಾನೆ. ಪತಿಯ ಅಸಲಿಯತ್ತು ಗೊತ್ತಾಗಿದ್ದು ತಿಳಿಯುತ್ತಲೇ ಆತ ಆಕೆಯ ಕೊಲೆಗೂ ಯತ್ನಿಸಿದ್ದಾನೆ. ನಂತರ ಹಿಂಸೆ ತಾಳದೇ ಯುವತಿ ಪೊಲೀಸರ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ? ಮಹಿಳೆಯು ಅಸ್ಸಾಂ ದೀಮಾಜಿ ಜಿಲ್ಲೆಯವರು. ಆರೋಪಿಯು ಲಂಬ್ಡಿಂಗ್‌ ನಿವಾಸಿ. ಇವರಿಬ್ಬರೂ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಪರಿಚಯವಾಗಿತ್ತು. ಆಕೆಯನ್ನು ಮದುವೆಯಾಗಿ ಮತಾಂತರಗೊಳಿಸುವ ಉದ್ದೇಶದಿಂದ ಈ ಯುವಕ ತನ್ನನ್ನು ಹಿಂದೂ ಧರ್ಮದವನು ಎಂದು ಪರಿಚಯಿಸಿಕೊಂಡಿದ್ದ. ಮಾತ್ರವಲ್ಲದೇ ಹಿಂದೂ ಹೆಸರನ್ನೇ ಹೇಳಿದ್ದ. ನಂತರ ಯುವತಿಯ ಜತೆ ಸಲುಗೆ ಬೆಳೆಸಿ ಮದುವೆಯಾಗಲೂ ಒಪ್ಪಿಸಿದ್ದ.
ಮದುವೆಯ ನಂತರ ಆತನ ವರ್ತನೆಯಲ್ಲಿ ಬದಲಾವಣೆಯಾಗತೊಡಗಿತು. ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಡಲು ಶುರು ಮಾಡಿದ. ಬರಬರುತ್ತಾ ಯುವತಿಗೆ ತನ್ನ ಗಂಡ ಮುಸ್ಲಿಂ ಎಂದು ತಿಳಿಯಿತು. ಅಸಲಿಯತ್ತು ತಿಳಿದ ನಂತರ ಆತನ ಹಿಂಸೆ ಇನ್ನಷ್ಟು ಕ್ರೂರವಾಯಿತು. ಪತ್ನಿ ತನ್ನ ವಿರುದ್ಧ ಹೋಗುತ್ತಿದ್ದಾಳೆ ಎಂದು ತಿಳಿಯುತ್ತಲೇ ಆಕೆಯ ಬಳಿಯಿದ್ದ ಚಿನ್ನಾಭರಣ ದೋಚಿ ಪರಾರಿಯಾದ.
ನಂತರ ಯುವರಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಅಸ್ಸಾಂ ಹೋಜಾಯ್‌ ಜಿಲ್ಲೆಯಲ್ಲಿ ಸದ್ಯ ಯುಕನನ್ನು ಬಂಧಿಸಲಾಗಿದೆ ಎಂದು ಲಂಬ್ಡಿಂಗ್‌ ಠಾಣಾಧಿಕಾರಿ ಎಸ್‌.ಕೆ.ಶರ್ಮಾ ಮಾಹಿತಿ ನೀಡಿದ್ದಾರೆ. ಕೂಡಲೇ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಲವ್‌ ಜಿಹಾದ್‌ ಪ್ರಕರಣ ದಾಖಲಾಗಿದೆ.
ಮೋಹಿನಿ ವೇಷ ತೊಟ್ಟು ಹೆದರಿಸಲು ಹೋಗಿ ಭಯಾನಕವಾಗಿ ಸಾವು ಕಂಡ ಯುವತಿ!

20 ವರ್ಷ ಮರದಲ್ಲಿ ಕಾದುಕುಳಿತು ಉದ್ಯಮಿಯ ಬಲಿಪಡೆದ ಗುಂಡು- ನಂಬಲಸಾಧ್ಯ ಘಟನೆಯಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + nine =
Remember me
