ಘಾಜಿಯಾಬಾದ್​​:ಈ ಚಿತ್ರದಲ್ಲಿ ಕಾಣಿಸುತ್ತಿರುವ ವ್ಯಕ್ತಿಯ ಹೆಸರು ಇರ್ಫಾನ್​ ಅಲಿಯಾಸ್​ ಉಜಾಲ್​. ಉತ್ತರ ಪ್ರದೇಶದ ಘಾಜಿಯಾಬಾದ್‌ ನಿವಾಸಿಯಾಗಿರುವ ಈತ ವಿವಾಹಿತ. ಆದರೆ ಈತನಿಗೆ ಇದ್ದುದು ಒಂದಲ್ಲ, ಎರಡಲ್ಲ… 10 ಮಂದಿ ಗರ್ಲ್‌ಫ್ರೆಂಡ್ಸ್‌. ಈ ಎಲ್ಲರನ್ನೂ ತೃಪ್ತಿಪಡಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಚ್ಚರಿಯ ವಿಷಯ ಎಂದರೆ ಇವನಿಗೆ ಪತ್ನಿಯೇ ಸಾಥ್‌ ಕೊಡುತ್ತಿದ್ದು, ಅವಳನ್ನೂ ಪೊಲೀಸರು ಬಂಧಿಸಿದ್ದಾರೆ.
ಈತ ಮಾಡುತ್ತಿದ್ದುದು ಏನೆಂದರೆ ಒಂದೆಡೆ ಪತ್ನಿ, ಇನ್ನೊಂದೆಡೆ 10 ಮಂದಿ ಗರ್ಲ್‌ಫ್ರೆಂಡ್ಸ್‌. ಎಲ್ಲರನ್ನೂ ಒಟ್ಟಿಗೆ ನಿಭಾಯಿಸಿ ಎಲ್ಲರನ್ನೂ ಸಮಾಧಾನ ಪಡಿಸಬೇಕಿತ್ತು ಇವನು. ಸಿರಿವಂತರಂತೆ ಪೋಸ್‌ ನೀಡುತ್ತಿದ್ದ ಈತನಿಗೆ ಹುಡುಗಿಯರು ಸುಲಭವಾಗಿ ಮರುಳಾಗುತ್ತಿದ್ದುದರಿಂದ ಹೀಗೆ ಸದ್ಯ 10 ಮಂದಿಯನ್ನು ಈತ ಒಟ್ಟಿಗೇ ನಿಭಾಯಿಸುತ್ತಿದ್ದ. ಇದಕ್ಕಾಗಿ ಆತ ಸಿರಿವಂತರ ಮನೆಗೆ ಕನ್ನ ಹಾಕುತ್ತಿದ್ದ.
ಈತನ ವಿರುದ್ಧ ಹಲವಾರು ಕೇಸ್‌ಗಳು ದಾಖಲಾಗಿದ್ದರೂ ಆತ ಸಿಕ್ಕಿಬಿದ್ದಿರಲಿಲ್ಲ. ಇದೀಗ ಕೊನೆಗೂ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನದೇನೂ ತಪ್ಪಿಲ್ಲ. 10 ಮಂದಿಯ ಆಸೆಯನ್ನು ಪೂರೈಸುವುದಕ್ಕಾಗಿ ಹೀಗೆ ಕನ್ನ ಹಾಕುತ್ತಿದ್ದೆ ಎಂದಿದ್ದಾನೆ ಈ ಭೂಪ. ಸದ್ಯ ಈತನಿಂದ ಚಿನ್ನಾಭರಣ,ವಜ್ರ ಸೇರಿದಂತೆ 1 ಕೋಟಿ ರೂ. ಮೌಲ್ಯದ ಜಾಗ್ವಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈತನ ವಿಚಾರಣೆ ವೇಳೆ ಪೊಲೀಸರಿಗೆ ಶಾಕ್‌ ಆಗಿದ್ದಾರೆ. ಏಕೆಂದರೆ ಈತ ಕದ್ದಿರುವ ಮನೆಗಳ ಪೈಕಿ ಅತ್ಯಂತ ಕಠಿಣ ಭದ್ರತೆ ಹೊಂದಿರುವ ಗೋವಾ ರಾಜ್ಯಪಾಲರ ಮನೆ ಹಾಗೂ ನ್ಯಾಯಾಧೀಶರ ಮನೆಗೂ ಕನ್ನ ಹಾಕಿದ್ದಾನಂತೆ! ಮೊದಲಿಗೆ ರಾಜ್ಯಪಾಲರ ಪಕ್ಕದ ಮನೆಗೆ ಕನ್ನ ಹಾಕಿರುವ ಈತ ಕೊನೆಗೆ ಅವರ ಮನೆ ಸೇರಿದಂತೆ ನ್ಯಾಯಾಧೀಶರ ಮನೆಗೂ ಕನ್ನ ಹಾಕಿ ಚಿನ್ನಾಭರಣ ದೋಚಿದ್ದಾನೆ!
ಗೆಳತಿಯರನ್ನು ತೃಪ್ತಿಪಡಿಸುವುದಕ್ಕಾಗಿ ತನ್ನೊಂದಿಗೆ ಬೇರೆ ಯಾರನ್ನೂ ದರೋಡೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಹೀಗೊಂದು ವೇಳೆ ಹೋದರೆ ಅವರಿಗೂ ಪಾಲು ಕೊಡಬೇಕಾಗುತ್ತದೆ ಎನ್ನುವ ಕಾರಣ ನೀಡಿರುವ ಈ ಆಸಾಮಿ ಗೋವಾ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಪಂಜಾಬ್​, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್​​​ನಲ್ಲಿ ದರೋಡೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡು ಪೊಲೀಸರಿಗೆ ಮತ್ತಷ್ಟು ಶಾಕ್‌ ನೀಡಿದ್ದಾನೆ!
ಈ ರೀತಿ ದರೋಡೆ ಮಾಡಲು ಈತನಿಗೆ ಪತ್ನಿಯೂ ಸಹಾಯ ಮಾಡುತ್ತಿದ್ದುದು ತಿಳಿದುಬಂದಿದ್ದು ಆಕೆಯನ್ನೂ ಬಂಧಿಸಲಾಗಿದೆ, ಜತೆಗೆ 10 ಮಂದಿ ಗರ್ಲ್‌ಫ್ರೆಂಡ್ಸ್‌ ಪೈಕಿ ಒಬ್ಬಳು ಸಿಕ್ಕಿಬಿದ್ದಿದ್ದಾಳೆ. ಇಷ್ಟೊಂದು ಗೆಳತಿಯರನ್ನು ಈತ ಹೊಂದಿರುವುದು ಪತ್ನಿಗೆ ತಿಳಿದಿದೆಯೋ, ಇಲ್ಲವೋ ಎಂಬ ವಿಷಯ ಇನ್ನಷ್ಟೇ ಹೊರಬರಬೇಕಿದೆ!
VIDEO: ಕಿಕ್ಕಿರಿದ ಸಿಟಿ ಬಸ್‌ನಲ್ಲಿ ಸಿಎಂರನ್ನು ಹೋಲುವ ವ್ಯಕ್ತಿ! ಅವ್ರು ಯಾರೆಂದು ತಿಳಿದಾಗ ಜನರು ಶಾಕ್‌

ಅರ್ಧ ಪರೀಕ್ಷೆ ಬರೆದ ಮೇಲೆ ಪ್ರಶ್ನೆ ಪತ್ರಿಕೆ ಬದಲಾಯಿಸಿದರು! ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಿ ಎಡವಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
