ಪಟ್ನಾ:ಬಿಹಾರದ ಸಿವಾನ್ ಜಿಲ್ಲೆಯ ಭಗವಾನಪುರದಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಮಹಿಳೆ ಮತ್ತು ಆಕೆಯ ಐವರು ಮಕ್ಕಳ ಮೇಲೆ ಕೊಡಲಿಯಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಹಿಳೆ ಮತ್ತು ಇನ್ನೋರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.
ಅವಧೇಶ್ ಚೌಧರಿ ಎಂಬ ವ್ಯಕ್ತಿ ಈ ದುಷ್ಕೃತ್ಯ ಎಸಗಿದ್ದಾನೆ. ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಮಕ್ಕಳು ಸ್ಥಳದಲ್ಲಿಯೇ ರಕ್ತಸ್ರಾವದಿಂದ ಒದ್ದಾಡುತ್ತಿದ್ದರೂ ಅದರ ಪರಿವೇ ಅವನಿಗಿಲ್ಲದಂತೆ ಆರಾಮಾಗಿ ಇದ್ದ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅವಧೇಶ್​ನನ್ನು ಬಂಧಿಸಿದ್ದಾರೆ. ಈ ನಡುವೆ ತನಗೆ ಏನೂ ಗೊತ್ತೇ ಇಲ್ಲವೆಂಬಂತೆ ವರ್ತಿಸಿರುವ ಆತ, ನನಗೆ ಏನೂ ಗೊತ್ತಿಲ್ಲ. ಮನೆಯ ಗೇಟಿನ ಒಳಗೇ ಬರುತ್ತಿದ್ದಂತೆಯೇ ಮೈಮೇಲೆ ದೆವ್ವ ಹೊಕ್ಕಿದಂತೆ ಆಯಿತು. ಎಲ್ಲರ ಮೇಲೆ ಕೊಡಲಿಯಿಂದ ಹಲ್ಲೆ ಮಾಡುವಂತೆ ಆದೇಶ ಮಾಡಿತು. ಈ ಕೃತ್ಯವನ್ನು ನಾನು ಮಾಡಲಿಲ್ಲ, ದೆವ್ವ ಬಂದು ಮಾಡಿದೆ ಎಂದಿದ್ದಾನೆ!
ಇದನ್ನೂ ಓದಿ:ತುಮಕೂರು ಟು ಬೆಂಗಳೂರು- ಹೆಲಿಕಾಪ್ಟರ್​ನಲ್ಲಿ​ ಮದುಮಗನ ಭರ್ಜರಿ ಎಂಟ್ರಿ…
ಈತನನ್ನು ನೋಡಿದರೆ ಮಾನಸಿಕ ಅಸ್ವಸ್ಥನಿರಬೇಕು ಎಂದು ಪೊಲೀಸರು ಯೋಚಿಸಿದ್ದು, ಅವನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದು ಏನೆಂದರೆ, ಅವಧೇಶ್ ಪತ್ನಿ ಮತ್ತು ಎರಡು ಹೆಣ್ಣು, ಮೂರು ಗಂಡು ಮಕ್ಕಳ ಜತೆ ವಾಸವಾಗಿದ್ದ. ಚಿಕ್ಕ ವಿಷಯಕ್ಕೆ ದಂಪತಿ ನಡುವೆ ಜಗಳವಾಗಿದೆ. ಕೋಪಗೊಂಡ ಅವಧೇಶ್ ಮನೆಯಲ್ಲಿದ್ದ ಕೊಡಲಿಯಿಂದ ಎಲ್ಲರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ನಾಲ್ಕು ಮಕ್ಕಳು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಆದರೆ ಆದ ದೆವ್ವದ ಕಥೆಕಟ್ಟಿದ್ದಾನೆ.
ಈ ಭಯಾನಕ ಘಟನೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಮೃತದೇಹಗಳನ್ನ ಮರೋಣತ್ತರ ಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮಹಿಳೆ ಮತ್ತು ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಎಸ್‍ಐ ಶಶಿಭೂಷನ್ ಕುಮಾರ್ ಹೇಳಿದ್ದಾರೆ.
ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

ಡಿಸೆಂಬರ್​ನಲ್ಲಿ 8 ದಿನ ಕರ್ನಾಟಕದಲ್ಲಿ ಬ್ಯಾಂಕ್​ ರಜೆ- ಇಲ್ಲಿದೆ ವಿವರ

ಅಮ್ಮಾ ಗ್ಯಾಂಗ್​ರೇಪ್​ ಆಯ್ತು ಎಂದ್ಳು 14ರ ಬಾಲೆ: ಸತ್ಯ ಗೊತ್ತಾಗಿ ಮೂರ್ಛೆಹೋದ ಪಾಲಕರು!

ಸಲ್ಮಾನ್​ನಿಂದ ಸೋನಮ್‌ವರೆಗೂ ಇವರೇ ಬಾಡಿಗಾರ್ಡ್​! ತೆರೆಮರೆ ನಾಯಕಿಯರ ಕಣ್ಣೀರ ದಿನಗಳು…

ಭಾರತದ ರೈತರ ಪ್ರತಿಭಟನೆ ಮಧ್ಯೆ ಪ್ರವೇಶಿಸಿದ ಕೆನಡಾ ಪ್ರಧಾನಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × five =
Remember me
