ಜಜ್‌ಪುರ (ಒಡಿಶಾ):ಯಾರಾದರೂ ತಮಗೆ ಹೊಡೆದಾಗ, ಪರಚಿದಾಗ ಕಚ್ಚಿದಾಗ ಅವರಿಗೆ ತಿರುಗಿ ಅದೇ ರೀತಿ ಮಾಡುವುದು ಮಾಮೂಲು. ಆದರೆ ಇಲ್ಲೊಬ್ಬ ಭೂಪ ಹಾವು ತನಗೆ ಕಚ್ಚಿತು ಎನ್ನುವ ಕಾರಣಕ್ಕೆ ಅದನ್ನೇ ಕಚ್ಚಿ ಕಚ್ಚಿ ಕೊಂದಿದ್ದಾನೆ.
ಈ ಘಟನೆ ಒಡಿಶಾದ ಜಜ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಂಭರಿಪತಿಯಾ ಗ್ರಾಮದ ಕಿಶೋರ್ ಬದ್ರ (45) ಎಂಬಾತ ಈ ಕೃತ್ಯ ಎಸಗಿದ್ದಾನೆ.
ಹೊಲದಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಇವನಿಗೆ ಹಾವು ಕಚ್ಚಿದೆ. ಯಾರಾದರೂ ಆಗಿದ್ದರೆ ಹಾವು ನೋಡಿ ಭಯಭೀತರಾಗಿ ಓಡಿ ಹೋಗುತ್ತಿದ್ದರು ಅಥವಾ ಕಚ್ಚಿದ ಹೆದರಿಕೆಗೆ ಅಲ್ಲೇ ಸಾಯುತ್ತಿದ್ದರು. ಆದರೆ ಕಿಶೋರ್​ ಹಾಗೆ ಮಾಡಲಿಲ್ಲ. ಬದಲಿಗೆ, ಸೇಡು ತೀರಿಸಿಕೊಳ್ಳಲು ಮುಂದಾದ ಆತ, ಹಾವನ್ನು ಸೆರೆಹಿಡಿದು ಕಚ್ಚಿ ಸಾಯಿಸಿಯೇ ಬಿಟ್ಟಿದ್ದಾನೆ.
ಹೇಳಿಕೇಳಿ ವಿಷಕಾರಿ ಹಾವು ಇದು. ಹಿಂದೆ ಮುಂದೆ ನೋಡದೇ ಅದನ್ನು ಕಚ್ಚಿ ಸಾಯಿಸಿದ ನಂತರ ಸಂತೃಪ್ತನಾದ ಆತ ಮನೆಗೆ ಬಂದು ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಹೋಗು ಎಂದು ಹೇಳಿದರೂ ಅದನ್ನು ಕೇಳದ ಆತ ತನಗೆ ತಿಳಿದಿರುವ ನಾಟಿ ಔಷಧ ಮಾಡಿಕೊಂಡಿದ್ದಾನೆ. ಅಚ್ಚರಿ ಎಂದರೆ ಈ ಔಷಧ ಅವನ ಮೇಲೆ ಪರಿಣಾಮ ಬೀರಿದ್ದು, ಹಾವು ಕಚ್ಚಿದರೂ, ಹಾವನ್ನು ಇವನು ಕಚ್ಚಿದರೂ ಯಾವುದೂ ಅವನಿಗೆ ಪರಿಣಾಮ ಬೀರಲಿಲ್ಲ. ಆರಾಮಾಗಿಯೇ ಆರೋಗ್ಯದಿಂದ ಇದ್ದಾನೆ.
ಕಾರಿನಲ್ಲಿ ಹೋಗುವಾಗ ಹೆಲ್ಮೆಟ್‌ ಹಾಕಲಿಲ್ಲವೆಂದು ವಕೀಲನಿಗೆ ಬಿತ್ತು ಒಂದು ಸಾವಿರ ರೂ. ದಂಡ!

ಏಳು ಮಕ್ಕಳ ತಂದೆಯ ಪ್ರೀತಿಗೆ ಸಿಲುಕಿದ 19ರ ಯುವತಿ! ಗಂಡ ಬೇಡ ಇವನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್‌ ಮೊರೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − seven =
Remember me
