ನ್ಯೂಯಾರ್ಕ್​:ಡೇಟಿಂಗ್​ ಮಾಡುವ ಸಮಯದಲ್ಲಿ ಗೆಳತಿಯನ್ನು ಇಂಪ್ರೆಸ್​ ಮಾಡಲು ಹಲವು ಯುವಕರು ಬಹಳ ಸರ್ಕಸ್​ ಮಾಡುವುದು ಹೊಸ ವಿಷಯವೇನಲ್ಲ. ಮೊದಲ ಇಂಪ್ರೆಷನ್​ನಲ್ಲೇ ಆಕೆಯ ಮನವನ್ನು ಗೆಲ್ಲಲು ದುಬಾರಿ ಉಡುಗೊರೆಗಳನ್ನು ನೀಡಲಾಗುತ್ತದೆ.
ಆದರೆ ಇಲ್ಲೊಬ್ಬ ಪ್ರೇಮಿ ಗೆಳತಿಯನ್ನು ಇಂಪ್ರೆಸ್​ ಮಾಡಲು ತಾಯಿಯ ಚಿತಾಭಸ್ಮ ತಂದಿದ್ದಾನೆ! ಇಂಥದ್ದೊಂದು ಘಟನೆ ನಡೆದಿರುವುದು ಅಮೆರಿಕದಲ್ಲಿ.
ಡೇಟಿಂಗ್​ ಆ್ಯಪ್​ನಲ್ಲಿ ಇವರಿಬ್ಬರ ಪರಿಚಯವಾಗಿದೆ. ಮೊದಲು ಮೀಟ್​ ಮಾಡಲು ಹೋದಾಗ ಯುವಕ ನಿನಗೇನು ಇಷ್ಟ ಎಂದು ಕೇಳಿದ್ದಾನೆ. ಆಗ ಆಕೆ ಸದಾ ನೆನಪಿನಲ್ಲಿ ಇರುವ ಏನಾದ್ರೂ ನೀಡು ಎಂದಿದ್ದಾಳೆ. ಅದಕ್ಕೆ ಯುವಕ ರಾತ್ರಿಯೆಲ್ಲಾ ತಲೆಕೆಡಿಸಿಕೊಂಡಿದ್ದಾನೆ.
ಡಿಫರೆಂಟ್​ ಆಗಿ ಏನಾದರೂ ನೀಡಬೇಕು ಎಂದುಕೊಂಡಿದ್ದಾನೆ ಆತ. ಆದ್ದರಿಂದ ಆತ ಕಂಡುಕೊಂಡಿದ್ದು ತಾಯಿಯ ಚಿತಾಭಸ್ಮ! ಒಂದು ಚೊಂಬಿನಲ್ಲಿ ಚಿತಾಭಸ್ಮವನ್ನು ತೆಗೆದುಕೊಂಡಿರುವ ಈ ಯುವಕ ಅದನ್ನು ಗೆಳತಿಯ ಬಳಿ ತೆಗೆದುಕೊಂಡು ಹೋಗಿದ್ದಾನೆ. ನಂತರ ನನ್ನ ತಾಯಿಯನ್ನು ಇಲ್ಲಿಯೇ ಪರಿಚಯಿಸುವೆ ಡಿಫರೆಂಟ್​ ಆಗಿ ಎಂದಿದ್ದಾನೆ.
ಯುವತಿಗೆ ತೀರಾ ಅಚ್ಚರಿಯಾಗಿದೆ. ತಾಯಿ ಎಲ್ಲಿದ್ದಾಳೆ ಎಂದು ಕೇಳಿದ್ದಾಳೆ. ಕೂಡಲೇ ಯುವಕ ಚೊಂಬಿನಲ್ಲಿದ್ದ ಚಿತಾಭಸ್ಮವನ್ನು ತೆರೆದು ತೋರಿಸಿದ್ದಾರೆ. ಇದನ್ನು ನೋಡಿದ ಯುವತಿ ಹೌಹಾರಿ ಹೋಗಿದ್ದಾಳೆ.ನಾವೆಲ್ಲಾ ನಮ್ಮ ನಮ್ಮ ನೋವುಗಳನ್ನು ಬೇರೆ ಬೇರೆ ರೀತಿಗಳಲ್ಲಿ ನಿಭಾಯಿಸುತ್ತೇವೆ, ನಾನು ಅದನ್ನು ಗೌರವಿಸುತ್ತೇನೆ. ಆದರೆ ಈತ ತನ್ನ ತಾಯಿಯ ಚಿತಾಭಸ್ಮವನ್ನು ನಮ್ಮ ಮೊದಲ ಡೇಟ್‌ ಟೇಬಲ್‌ ಮೇಲೆ ತಂದು ಇಟ್ಟಿದ್ದಾನೆ. ಇದು ತೀರಾ ವಿಚಿತ್ರ ಹಾಗೂ ಅಸಭ್ಯವಾದದ್ದು ಎಂದಿರುವ ಯುವತಿ ಅಲ್ಲಿಂದಲೇ ಯುವಕನ ಪ್ರೀತಿಯನ್ನು ತಿರಸ್ಕರಿಸಿ ಎದ್ದು ನಡೆದಿದ್ದಾಳೆ. ಸಾಲದು ಎಂಬುದನ್ನು ಆತನಿಗೆ ಛೀಮಾರಿ ಹಾಕಿ ಹೋಗಿದ್ದಾಳೆ. ನಿನಗೊಂದು ದೊಡ್ಡ ನಮಸ್ಕಾರ ಎಂದು ಗುಡ್​ಬೈ ಹೇಳಿದ್ದಾಳೆ.
ಗೆಳತಿಯ ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುವ ಸರ್​ಪ್ರೈಸ್​ ಮಾಡಹೋದ ಯುವಕ ತಾಯಿಯ ಚಿತಾಭಸ್ಮದ ಜತೆ ವಾಪಸಾಗಿದ್ದಾನೆ.
ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…

ಟೈಟ್‌ ಬುರ್ಖಾ ಧರಿಸಿ ಒಂಟಿಯಾಗಿ ಹೋಗುತ್ತಿದ್ದಳೆಂದು ಯುವತಿಯನ್ನು ಗುಂಡಿಕ್ಕಿ ಕೊಂದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − four =
Remember me
