ನಳಂದಾ (ಬಿಹಾರ):ಇನ್ನೇನು ವರ, ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಸಿನಿಮೀಯ ರೀತಿಯಲ್ಲಿ ಎಂಟ್ರಿ ಕೊಟ್ಟ ವಧುವಿನ ಪ್ರಿಯಕರ, ಆಕೆಯ ಹಣೆಗೆ ಸಿಂಧೂರವಿಟ್ಟು ಅಧಿಕೃತವಾಗಿ ಪತಿಯಾಗಿಬಿಟ್ಟ! ಇಂಥದ್ದೊಂದು ಕುತೂಹಲದ ಘಟನೆ ನಡೆದಿದ್ದು ಬಿಹಾರದ ನಳಂದಾದಲ್ಲಿ.
ಯುವಕ ಮುಖೇಶ್​ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದು ಯುವತಿಯ ಮನೆಯವರಿಗೆ ತಿಳಿದುಬಿಟ್ಟಿದೆ. ಹೀಗೆಯೇ ಬಿಟ್ಟರೆ ಮುಂದೆ ಅನಾಹುತ ಆಗುವುದು ಎಂದು ತಿಳಿದ ಅವರು, ಕೂಡಲೇ ಗಂಡೊಬ್ಬನನ್ನು ಗುರುತು ಮಾಡಿ ಮಗಳ ಮದುವೆಯನ್ನು ಫಿಕ್ಸ್​ ಮಾಡಿಬಿಟ್ಟಿದ್ದಾರೆ. ಆದರೆ ಯುವತಿ ಬಿಟ್ಟಾಳೆಯೇ? ಈ ವಿಷಯವನ್ನು ಪ್ರಿಯಕರ ಮುಖೇಶ್​ಗೆ ಹೇಳಿದ್ದಾಳೆ. ಮೊದಲೇ ಏನೇನು ಮಾಡಬೇಕು ಎಂಬ ಬಗ್ಗೆ ಇಬ್ಬರೂ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ.
ಮೊದಲೇ ಮಾಡಿಕೊಂಡಿರುವ ಪ್ಲ್ಯಾನ್​ನಂತೆ ಇನ್ನೇನು ಕೆಲ ನಿಮಿಷಗಳಲ್ಲಿ ತಾಳಿ ಕಟ್ಟುವ ಸಮಾರಂಭ ನಡೆಯಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪ್ರಿಯಕರ ಬಂದಿದ್ದಾನೆ. ಮಂಟಪ ಏರಿದ ಆತ, ಮದುವೆಗೆ ಇಟ್ಟ ಮುಹೂರ್ತದಲ್ಲಿಯೇ ಯುವತಿ ಹಣೆಗೆ ಸಿಂಧೂರ ಇಟ್ಟಿದ್ದಾನೆ. ನನ್ನ ಹಣೆಗೆ ಸಿಂಧೂರ ಇಡು ಎಂದು ಎಲ್ಲರ ಸಮ್ಮುಖದಲ್ಲಿಯೇ ಯುವತಿ ಹೇಳಿದ್ದಾಳೆ. ಅದರಂತೆ ಆತ ಸಿಂಧೂರ ಇಟ್ಟಿದ್ದಾನೆ.
ಆದರೆ ಇದೇ ವೇಳೆ ಯುವತಿ ಮನೆಯವರು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪ್ರಿಯಕರ ಮುಖೇಶ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಮುಖವೆಲ್ಲಾ ಊದುಕೊಂಡಿರುವುದಾಗಿ ಹೇಳಲಾಗಿದೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇಷ್ಟೆಲ್ಲಾ ಘಟನೆ ನಡೆದ ಮೇಲೆ ವರ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾನೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಬಂದಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಯುವತಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.
ಪ್ರಿಯಕರನ ಒಲಿಸಿಕೊಳ್ಳಲು ಆತನ ಪತ್ನಿ, ತಾಯಿಯನ್ನು ಜೀವಂತ ಸುಟ್ಟು ಹಾಕಿದ ಎರಡು ಮಕ್ಕಳ ತಾಯಿ!

ಮಿಸ್ಡ್​ಕಾಲ್​ ಆಂಟಿಯಿಂದ ಬರ್ಬರ ಹತ್ಯೆಯಾದ ಕಲಬುರಗಿ ಯುವಕ! ಸುಪಾರಿ ಪಡೆದು ಕೊಲೆ ಮಾಡಿದ ಕ್ರೂರಿ…

ನೂಪುರ್​ ವಿವಾದಕ್ಕೆ ಭಾರಿ ಟ್ವಿಸ್ಟ್​- ಹಿಂದೂಗಳೇ ನಾಚಿಕೆ ಇಲ್ವಾ ಎಂದು ಈಗ ತಸ್ಲೀಮ್ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
