ಹರಿಯಾಣ:ಪ್ರೀತಿ ಏನೆಲ್ಲಾ ಎಡವಟ್ಟು ಹಾಗೂ ಕ್ರೌರ್ಯವನ್ನು ಮಾಡಿಸಿಬಿಡುತ್ತದೆ ಎನ್ನುವುದಕ್ಕೆ ಇಲ್ಲೊಂದು ಘಟನೆಯೇ ಸಾಕ್ಷಿಯಾಗಿದೆ. ಅಕ್ರಮ ಸಂಬಂಧಕ್ಕೆ ಬಿದ್ದ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿ ಆತನ ಮೃತದೇಹದೊಂದಿಗೆ 10 ದಿನಗಳನ್ನು ಕಳೆದ ಭಯಾನಕ ಘಟನೆ ಇದಾಗಿದೆ.
ಈ ಘಟನೆ ನಡೆದಿರುವುದು ಹರಿಯಾಣದಲ್ಲಿ. ಪ್ರಾಪರ್ಟಿ ಡೀಲರ್ ಆಗಿದ್ದ ದಿನೇಶ್‌ ಎನ್ನುವವರು ಕೊಲೆಗೀಡಾದವರು. ದಿನೇಶ್ ಪತ್ನಿ ನಿತಿನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಮುಳ್ಳಾಗಿದ್ದ ಪತಿಯನ್ನು ನಿತಿನ್‌ ಹಾಗೂ ಆತನ ಸ್ನೇಹಿತರ ಜತೆಗೂಡಿ ಕೊಲೆ ಮಾಡಿರುವ ಆರೋಪವಿದೆ.
ಈ ಘಟನೆ ಬೆಳಕಿಗೆ ಬಂದದ್ದು, ಕಳೆದ ಜನವರಿ 28ರಂದು ಚರಂಡಿಯೊಂದರಲ್ಲಿ ಪೊಲೀಸರಿಗೆ ಕೊಳೆತ ಶವ ಸಿಕ್ಕಾಗ. ಅಪರಿಚಿತ ಶವದ ತನಿಖೆ ಶುರು ಮಾಡಿದಾಗ ಅದು ದಿನೇಶ್‌ ಅವರ ಶವ ಎನ್ನುವುದು ತಿಳಿದುಬಂತು. ಈ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ಕೈಗೊಂಡರು.
ಆಗಲೇ ಅವರಿಗೆ ದಿನೇಶ್ ಪತ್ನಿ ನಿತಿನ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿದುಬಂತು. ಇದೇ ಕಾರಣಕ್ಕೆ ನಿತಿನ್‌ ಮಾತ್ರವಲ್ಲದೇ ಆತನ ಸ್ನೇಹಿತರ ಜತೆಗೂಡಿ ಕೊಲೆ ಮಾಡುವ ಪ್ಲ್ಯಾನ್‌ ಮಾಡಿದಳು. ಇದಕ್ಕೆ ಆಕೆಯ ಚಿಕ್ಕಪ್ಪ ಹರ್ಜೀತ್ ಸಿಂಗ್ ಕೂಡ ಸಾಥ್‌ ನೀಡಿದ್ದ.
ಜನವರಿ 11ರ ರಾತ್ರಿ ಎಲ್ಲರೂ ಸೇರಿ ಕೋಲಿನಿಂದ ಹೊಡೆದು ದಿನೇಶ್ ಅವರನ್ನು ಕೊಲೆ ಮಾಡಲಾಗಿದೆ. ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬಾತ್‌ರೂಮಿನಲ್ಲಿ ಇಡಲಾಗಿದೆ. ಕೂಡಲೇ ಶವವನ್ನು ಎಲ್ಲಿ ಹಾಕುವುದು ಎಂದು ತಿಳಿಯದ ಕಾರಣ ಹಾಗೂ ಪೊಲೀಸರ ಕೈಯಲ್ಲಿ ಸುಲಭದಲ್ಲಿ ಸಿಕ್ಕಿಬೀಳಬಹುದು ಎನ್ನುವ ಭಯದಿಂದ ಮನೆಯಲ್ಲಿಯೇ ಶವವನ್ನು ಇಟ್ಟುಕೊಂಡಿದ್ದಾಳೆ ಮಹಿಳೆ. ಸುಮಾರು 10 ದಿನ ಅಲ್ಲಿಯೇ ಶವವಿದ್ದು, ಅದರ ಜತೆಗೇ ಮಹಿಳೆ ಮನೆಯಲ್ಲಿ ಇದ್ದಾಳೆ!
ಜನವರಿ 18ಕ್ಕೆ ದುರ್ವಾಸನೆ ಬರಲು ಆರಂಭವಾಗಿದೆ. ನಂತರ ನೆರೆಹೊರೆಯವರಿಗೆ ಸಂದೇಹ ಬರಬಹುದು ಎನ್ನುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಅದನ್ನು ಚರಂಡಿಯಲ್ಲಿ ಎಸೆದು ಬಂದಿದ್ದಾರೆ. ಇದಕ್ಕಾಗಿ 41 ಸಾವಿರ ರೂಪಾಯಿಗಳನ್ನೂ ಪತ್ನಿ ನೀಡಿರುವ ವಿಷಯ ಪೊಲೀಸರಿಗೆ ತಿಳಿದಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ತನಿಖೆ ನಡೆಸುತ್ತಿದ್ದಾರೆ ಪೊಲೀಸರು.
ಮಂಡ್ಯದಲ್ಲೊಂದು ಅಚ್ಚರಿ: 5 ವರ್ಷ ಕಗ್ಗಂಟಾಗಿದ್ದ ಸಮಸ್ಯೆಗೆ ತಾಸಿನಲ್ಲೇ ಪರಿಹಾರ ನೀಡಿದ ಬಸವಣ್ಣ

ತಾಯಿಯನ್ನು ಕೊಂದು ಒಲೆಯಲ್ಲೇ ಸುಟ್ಟು ಚಿಕನ್‌ ರೋಸ್ಟ್‌ ಮಾಡಿ ತಿಂದ ಯುವಕ!

ರೋಗಿಗಳ ಜತೆಯಲ್ಲಿಯೇ ಬೀದಿ ನಾಯಿಗಳ ಕಾರುಬಾರು! ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಎಡವಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
