ರಾಮಗೊಂಡಂ (ಹೈದರಾಬಾದ್):ಆಸ್ಪತ್ರೆಯಲ್ಲಿ ವಿವಾಹಿತೆಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ ಸ್ವೀಪರ್‌ ಒಬ್ಬ, ಆಕೆಯ ಗಂಡನ ರುಂಡ, ಮುಂಡ, ಕೈ-ಕಾಲು ಪೀಸ್‌ ಪೀಸ್‌ ಮಾಡಿ ಒಂದೊಂದು ಕಡೆ ಬೀಸಾಕಿ ಭಯಾನಕವಾಗಿ ಮರ್ಡರ್‌ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ತನ್ನ ಈ ಕೃತ್ಯಕ್ಕೆ ಸಿನಿಮಾನೇ ಸ್ಫೂರ್ತಿ ಎಂದು ಪೊಲೀಸರ ವಿಚಾರಣೆ ವೇಳೆ ಆತ ಹೇಳಿದ್ದಾನೆ. ಇಂಥದ್ದೊಂದು ದುಷ್ಕೃತ್ಯ ಎಸಗಿರುವವನ ಹೆಸರು ಪಿ. ರಾಜು. ಈತ ರಾಮಗೊಂಡಂನ ಎನ್‍ಟಿಪಿಸಿ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.
ಈ ವಿಷಯ ಮಹಿಳೆಯ ಗಂಡ ಶಂಕರ್‌ಗೆ ಗೊತ್ತಾಗಿ ದಂಪತಿ ನಡುವೆ ಜಗಳವಾಗಿದೆ. ಇದರಿಂದ ಆತ ತನಗೆ ನಿತ್ಯವೂ ಕಿರುಕುಳ ಕೊಡುತ್ತಿರುವುದಾಗಿ ಮಹಿಳೆ ಈ ಪ್ರಿಯಕರನಲ್ಲಿ ಹೇಳಿಕೊಂಡಿದ್ದಾಳೆ. ಆದ್ದರಿಂದ ಇಬ್ಬರೂ ಸೇರಿ ಶಂಕರ್‌ನನ್ನು ಮುಗಿಸುವ ಪ್ಲ್ಯಾನ್‌ ಮಾಡಿದ್ದಾರೆ.
ಅದೇ ರೀತಿ ಶಂಕರ್ ಕೆಲಸದ ನಿಮಿತ್ತ ಹೊರಗಡೆ ಹೋದಾಗ ಆತನನ್ನು ಭಯಾನಕವಾಗಿ ಕೊಲೆ ಮಾಡಿ ಒಂದೊಂದು ಪಾರ್ಟ್‌ ಒಂದೊಂದು ಕಡೆ ಬೀಸಾಕಿದ್ದಾನೆ. ತಮ್ಮ ಮಗ ನಾಪತ್ತೆಯಾಗಿರುವುದಾಗಿ ದೂರಿ ಶಂಕರ್‌ ಪಾಲಕರು ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಒಂದು ಜಾಗದಲ್ಲಿ ಶಂಕರ್‌ ಅವರ ರುಂಡ ಸಿಕ್ಕಿದೆ. ಈ ಬಗ್ಗೆ ಅವರು ಪಾಲಕರಲ್ಲಿ ಹೇಳಿದಾಗ ಅವರಿಗೆ ಸೊಸೆಯ ಮೇಲೆ ಸಂಶಯ ಬಂದಿದೆ.
ನಂತರ ಬಾಯಿ ಬಿಡಿಸಿದಾಗ ಕೊಲೆ ಮಾಡಿರುವ ಬಗ್ಗೆ ಆಕೆ ಹೇಳಿದ್ದಾಳೆ. ವಿಷಯ ತಿಳಿಯುತ್ತಲೇ ರಾಜು ಪರಾರಿಯಾಗಲು ಯತ್ನಿಸಿದ್ದ. ಕೊನೆಗೆ ಆತನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂಥ ಭೀಕರ ಕೊಲೆ ಮಾಡಲು ಸಿನಿಮಾನೇ ತನಗೆ ಸ್ಫೂರ್ತಿ ಎಂದು ಹೇಳಿದ್ದಾನೆ. ಶಂಕರ್ ಅವರ ಶರೀರದ ಎಲ್ಲಾ ಭಾಗಗಳನ್ನು ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
11ನೇ ಮದ್ವೆಯಾಗಲು ಈಕೆಗೆ ಗಂಡು ಬೇಕಂತೆ! ಜೀವನದಲ್ಲಿ ಥ್ರಿಲ್‌ ಬೇಕು ಅನ್ನೋ ಈಕೆ ಕೊಟ್ಟ ಕಾರಣ ಕೇಳಿ…

ಹಿನ್ನೆಲೆಯೇ ಇಲ್ಲದಿದ್ರೂ ಬೆಂಗಳೂರಿನ ವೈದ್ಯರಿಗೆ ಒಮಿಕ್ರಾನ್‌, ಪತ್ನಿಗೂ ಸೋಂಕು! ಮನೆ ಸುತ್ತಲೂ ಸೀಲ್‌ಡೌನ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fourteen =
Remember me
