ಕಂದಗರಡಿ (ಒಡಿಶಾ):ಮದುವೆ ಮನೆಯಲ್ಲಿ ಅಬ್ಬರಿಸಿದ ಡಿಸ್ಕೋಜಾಕಿ (ಡಿಜೆ) ಸಂಗೀತದಿಂದ ಹಾಗೂ ಮದುವೆ ಮನೆಯಲ್ಲಿ ಹೊಡೆದ ಪಟಾಕಿಯಿಂದಾಗಿ ತಮ್ಮ ಫಾರ್ಮ್‌ನಲ್ಲಿದ್ದ 63 ಕೋಳಿಗಳು ಸತ್ತುಹೋಗಿರುವುದಾಗಿ ಆರೋಪಿಸಿ ಪೌಲ್ಟ್ರಿ ಮಾಲೀಕನೊಬ್ಬ ಮದುವೆ ಆಯೋಜಿಸಿದ ಕುಟುಂಬದ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾನೆ.ಈ ಘಟನೆ ನಡೆದಿರುವುದು ಒಡಿಶಾದ ಬಾಲಸೋರ್ ಜಿಲ್ಲೆಯ ಕಂದಗರಡಿ ಎಂಬ ಗ್ರಾಮದಲ್ಲಿ. ಈ ಗ್ರಾಮದ ಬಹುದೊಡ್ಡ ಕೋಳಿಸಾಕಾಣಿಕೆ ಕೇಂದ್ರ ಇಟ್ಟುಕೊಂಡಿರುವ ರಂಜಿತ್ ಫರಿದಾ ಎಂಬ ವ್ಯಕ್ತಿ ಈ ಕೇಸ್‌ ದಾಖಲು ಮಾಡಿದ್ದಾನೆ. ಗ್ರಾಮದಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಡಿಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹಾಗೂ ಆ ಸಮಯದಲ್ಲಿ ಭಾರಿ ಪಟಾಕಿ ಸಿಡಿಸಲಾಗುತ್ತಿತ್ತು. ಈ ಶಬ್ದ ಸಹಿಸಿಕೊಳ್ಳಲು ಸಾಧ್ಯವಾಗದೇ ಕೋಳಿಗಳು ಮೃತಪಟ್ಟಿರುವುದಾಗಿ ಅವರು ದೂರಿನಲ್ಲಿ ಹೇಳಿದ್ದಾರೆ.ಅಲ್ಲಿ ಅಬ್ಬರದ ಸಂಗೀತ ಕೇಳುತ್ತಿದ್ದಾಗ ನನ್ನ ಕೋಳಿಗಳು ವಿಚಿತ್ರವಾಗಿ ಕೂಗತೊಡಗಿದವು. ಆದ್ದರಿಂದ ಅಲ್ಲಿಗೆ ಹೋಗಿ ವಿಷಯವನ್ನು ತಿಳಿಸಿ ಸೌಂಡ್​ ಕಡಿಮೆ ಮಾಡಲು ವಿನಂತಿಸಿದ್ದೆ. ಆದರೆ ಅಲ್ಲಿ ಎಲ್ಲರೂ ಕುಡಿದು ಕುಣಿಯುತ್ತಿದ್ದರು. ನನ್ನ ಮಾತನ್ನು ಕೇಳಲಿಲ್ಲ, ಬದಲಿಗೆ ನನ್ನನ್ನು ನಿಂದಿಸಿದರು, ಕೆಟ್ಟ ಕೆಟ್ಟ ಶಬ್ದಗಳಿಂದ ಬೈದರು. ಸುಮ್ಮನೇ ಮನೆಗೆ ಬಂದೆ. ಅಷ್ಟೊತ್ತಿಗಾಗಲೇ ನಮ್ಮ ಕೋಳಿಗಳು ಭಯದಿಂದ ಓಡಲು ಪ್ರಾರಂಭಿಸಿದವು, ಅವುಗಳನ್ನು ಸುಧಾರಿಸಲು ನನಗೆ ಸಾಧ್ಯವಾಗಲಿಲ್ಲ. ನೋಡನೋಡುತ್ತಲೇ 63 ಕೋಳಿಗಳು ಮೃತಪಟ್ಟವು ಎಂದು ರಂಜಿತ್ ದೂರಿನಲ್ಲಿ ಹೇಳಿದ್ದಾರೆ.ಕೋಳಿಗಳು ಸತ್ತಿದ್ದರಿಂದ 180 ಕೆಜಿಯ ಕೋಳಿಗಳನ್ನು ನಾನು ಕಳೆದುಕೊಂಡಿದ್ದೇನೆ. ಇದಕ್ಕೆ ಪರಿಹಾರ ನೀಡುವಂತೆ ಮದುವೆಯ ಆಯೋಜಕರಿಗೂ ಕೇಳಿಕೊಂಡೆ. ಕೊಡದಿದ್ದರೆ ದೂರು ದಾಖಲಿಸುವುದಾಗಿ ಹೇಳಿದೆ. ಆದರೆ ಅವರು ಅದಕ್ಕೆ ಕ್ಯಾರೇ ಮಾಡಲಿಲ್ಲ. ಬೇರೆ ದಾರಿ ಕಾಣದೇ ದೂರು ದಾಖಲು ಮಾಡುತ್ತಿದ್ದೇನೆ ಎಂದಿದ್ದಾರೆ ರಂಜಿತ್‌, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಲ್ಲಿ ಹೆಣ್ಣು ಸಿಕ್ತಿಲ್ಲ, ಅಲ್ಲಿ ವರದಕ್ಷಿಣೆ ಇಲ್ಲದೇ ಮದುವೆಯಿಲ್ಲ: ವಿವಾಹದ ಆಸೆಹೊತ್ತ ಬ್ರಾಹ್ಮಣರಿಗೆ ತೆರೆದಿದೆ ‘ಸ್ವರ್ಣವಲ್ಲಿ’ಯ ಬಾಗಿಲು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eight =
Remember me
