ಜಕಾರ್ತಾ:ಕೆಲವರಿಗೆ ಹೇಗಾದರೂ ಮಾಡಿ ಹೆಸರು ಮಾಡುವ ಹುಚ್ಚು. ಅದಕ್ಕಾಗಿ ಹುಚ್ಚು ಸಾಹಸ ಮಾಡಿದರೆ, ಇನ್ನು ಕೆಲವರು ಏನೂ ಮಾಡದೇ ವೈರಲ್‌ ಆಗುತ್ತಾರೆ. ಅದೇ ರೀತಿ ಇಲ್ಲೊಬ್ಬ ಇದೀಗ ರೈಸ್‌ ಕುಕ್ಕರ್‌ಗೆ ವಿಧಿವತ್ತಾಗಿ ಮದುವೆಯಾಗಿ ಜಾಲತಾಣದಲ್ಲಿ ಸಕತ್‌ ಫೇಮಸ್‌ ಆಗಿದ್ದಾನೆ.ಯುವತಿಯನ್ನು ಮದುವೆಯಾಗುವುದಕ್ಕಿಂತ ರೈಸ್‌ ಕುಕ್ಕರೇ ಬೆಸ್ಟ್‌. ಇದು ತಾನೇ ದಿನವೂ ನನಗೆ ಊಟ ನೀಡುವುದು ಎಂದು ಹೇಳಿದ ಇಂಡೋನೇಷ್ಯಾದ ಕೊಯಿರುಲ್ ಅನಾಮ್ ಎಂಬಾತ ರೈಸ್‌ ಕುಕ್ಕರ್‌ ಅನ್ನು ಮದುವೆಯಾಗಿದ್ದಾನೆ. ಇವಳೇ ನನ್ನ ಮಡದಿ, ಇವಳ ಜತೆ ಸಂಸಾರ ಮಾಡುತ್ತೇನೆ. ಕುಕ್ಕರ್‌ ನಾನು ಹೇಳಿದಂತೆ ಕೇಳುತ್ತದೆ. ನನಗೆ ದಿನವೂ ಅನ್ನ ನೀಡುತ್ತದೆ ಎಂದು ಕೊಯಿರುಲ್ ಹೇಳಿದ್ದಾನೆ.ತಾನು ಮದುಮಗನ ಡ್ರೆಸ್‌ ಹಾಕಿಕೊಂಡು ಕುಕ್ಕರ್‌ಗೆ ವೇಲ್ ಹಾಕಿ ಮದುಮಗಳಂತೆ ಡ್ರೆಸ್‌ ಮಾಡಿದ್ದಾನೆ. ನಂತರ ಅದಕ್ಕೆ ಮುತ್ತುಕೊಟ್ಟಿದ್ದಾನೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.ಹೀಗೆ ಸಕತ್‌ ಫೇಮಸ್‌ ಆಗುತ್ತಲೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೊಯಿರುಲ್‌ ನಾಲ್ಕು ದಿನಗಳ ನಂತರ ಅದಕ್ಕೆ ಡಿವೋರ್ಸ್‌ ಕೊಟ್ಟಿದ್ದು ಅದನ್ನೂ ಶೇರ್‌ ಮಾಡಿದ್ದಾನೆ. ಒಟ್ಟಿನಲ್ಲಿ ತಾನು ಜಗತ್ಪ್ರಸಿದ್ಧ ಆಗಬೇಕು ಎನ್ನುವ ಆಸೆ ಈಡೇರಿದೆ. ಜಾಲತಾಣದಲ್ಲಿ ಅವನ ಫೋಟೋಗಳು ಹಾಗೂ ಸುದ್ದಿಗಳು ಹರಿದಾಡುತ್ತಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
